ಕುಕ್ಕೆ ಸುಬ್ರಹ್ಮಣ್ಯ : ಲಯನ್ಸ್ ವತಿಯಿಂದ ವನಮಹೋತ್ಸವ

ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಕುಮಾರಧಾರ ದಲ್ಲಿ ನಡೆಯಿತು.

. . . . . . . . .

ಗಿಡ ನಡುವ ಮೂಲಕ ವೃಕ್ಷಾರೋಪಣಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್.ಇಂಜಾಡಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಪ್ರಕೃತಿ ವಿಕೋಪ ತಡೆಯಲು ಹೆಚ್ಚಿನ ವೃಕ್ಷ ಸಂಪತ್ತು ಅತ್ಯಗತ್ಯ. ಸಂಘ ಸಂಸ್ಥೆಗಳು ವನಮಹೋತ್ಸವದಂತಹ ಕಾರ್ಯಗಳನ್ನು ನಡೆಸುವುದರಿಂದ ಜನತೆಯಲ್ಲಿ ಪರಿಸರ ಜಾಗೃತಿ ಮೂಡುತ್ತದೆ. ವನಮಹೋತ್ಸವವು ಸಂಘ ಸಂಸ್ಥೆಗಳು ನಡೆಸುವ ಮಾದರಿ ಕಾರ್ಯಗಳಲ್ಲಿ ಒಂದಾಗಿದೆ. ಪರಿಸರ ರಕ್ಷಣೆ ಮತ್ತು ಹಸಿರ ಸಂರಕ್ಷಣೆ ಪ್ರತಿಯೊಬ್ಬರ ಧ್ಯೇಯವಾಗಲಿ” ಎಂದರು. ಬಳಿಕ ಕುಮಾರಧಾರ ದರ್ಪಣ ತೀರ್ಥ ಪರಿಸರದಲ್ಲಿ ಸಸಿಗಳನ್ನು ನೆಡಲಾಯಿತು. ನಂತರ ಅದಕ್ಕೆ ಕುಕ್ಕೆ ದೇವಳದಿಂದ ನೀಡಿದ ರಕ್ಷಣಾ ಬೇಲಿಯನ್ನು ಹಾಕಲಾಯಿತು.

. . . . . . .

ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸತೀಶ್ ಕೂಜುಗೋಡು, ಪೂರ್ವಾಧ್ಯಕ್ಷರಾದ ವಿಮಲಾ ರಂಗಯ್ಯ, ಲಯನ್ಸ್ ಕಾರ್ಯದರ್ಶಿ ವಿಷ್ಣು ಪಾತಿಕಲ್ಲು, ಕೋಶಾಧಿಕಾರಿ ಪವನ್.ಎಂ.ಡಿ, ಸಂಯೋಜಕರಾದ ಡಾ.ಶಿವಕುಮಾರ್ ಹೊಸೋಳಿಕೆ, ಮೋಹನದಾಸ ರೈ, ಪ್ರಕಾಶ್ ಶೆಟ್ಟಿ ಕುಂದಾಪುರ, ಪದಾಧಿಕಾರಿಗಳಾದ ಗಾಯತ್ರಿ ಕೃಷ್ಣಕುಮಾರ್, ಕೃಷ್ಣಕುಮಾರ್ ಬಾಳುಗೋಡು, ರಾಜೇಶ್.ಎನ್.ಎಸ್, ಗುರುಪ್ರಸಾದ್ ಪಂಜ, ಲೋಕೇಶ್.ಬಿ.ಎನ್, ದಿನೇಶ್ ಎಂ.ಪಿ, ದೀಪಕ್ ನಂಬಿಯಾರ್, ಭಾರತಿ ದಿನೇಶ್, ಗಿರಿಧರ್ ದೋಣಿಮನೆ, ಉಪ ವಲಯಾರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ, ಅರಣ್ಯ ಇಲಾಖೆಯ ಮಹೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾತಿಕಲ್ಲು ಸ್ವಾಗತಿಸಿ ಖಜಾಂಜಿ ಪವನ್.ಎಂ.ಡಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading