ಮಡಪ್ಪಾಡಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪೂರ್ವಭಾವಿ ಸಭೆ ; ಕಸ್ತೂರಿರಂಗನ್ ವರದಿ, 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ — ಪಶ್ಚಿಮ ಘಟ್ಟಗಳ ಗಡಿರೇಖೆ ಗುರುತಿಸಲು ಆಗ್ರಹ

ಮಡಪ್ಪಾಡಿ, ಆ.30: ಮಡಪ್ಪಾಡಿಯ ಶೆಟ್ಟಿಮಜಲು ಕ್ರೀಡಾಂಗಣದ ಬಳಿ ಭಾನುವಾರ ಸಂಜೆ 6.30ಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮಡಪ್ಪಾಡಿ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.

. . . . . . . . .

ಸಭೆಯಲ್ಲಿ ಕಸ್ತೂರಿರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಣೆ ಕುರಿತು ಚರ್ಚೆ ನಡೆಸಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗೆ ಆಕ್ಷೇಪಣಾ ಪತ್ರ ಸಲ್ಲಿಸುವ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.

. . . . . . .

ಅದೇ ರೀತಿ, ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಗಡಿಗ್ರಾಮಗಳಲ್ಲಿ ಗಡಿರೇಖೆಯನ್ನು ಸ್ಪಷ್ಟವಾಗಿ ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮಡಪ್ಪಾಡಿ ಗ್ರಾಮ ಸಮಿತಿಯ ವತಿಯಿಂದ ಸೆಪ್ಟೆಂಬರ್ 3ರಂದು ಗ್ರಾಮ ಪಂಚಾಯಿತಿಗೆ ಕಸ್ತೂರಿರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಣೆಯ ವಿರುದ್ಧ ಆಕ್ಷೇಪಣಾ ಪತ್ರ ಸಲ್ಲಿಸಲು ಪೂರ್ವಭಾವಿ ಸಿದ್ಧತೆ ನಡೆಸಲಾಯಿತು.

ಸಭೆಯ ಆರಂಭದಲ್ಲಿ ಗ್ರಾಮ ಸಮಿತಿಯ ಪ್ರಮುಖರಾದ ದೀಕ್ಷಿತ್ ಶೆಟ್ಟಿಮಜಲು ಸ್ವಾಗತಿಸಿದರು. ಗ್ರಾಮ ಸಮಿತಿಯ ಸಂಚಾಲಕ ಲೋಹಿತ್ ಬಾಳಿಕಳ, ಜಿಲ್ಲಾ ಸಂಘಟನಾ ಪ್ರಮುಖ ಮಿಲನ್ ಬಾಳಿಕಳ, ಗ್ರಾಮ ಸಮಿತಿಯ ಪ್ರಮುಖ ಶೇಷಪ್ಪ ಶೆಟ್ಟಿಮಜಲು ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ರೈತರು ಉಪಸ್ಥಿತರಿದ್ದರು.

ಸಭೆಯ ಕೊನೆಯಲ್ಲಿ ಗ್ರಾಮ ಸಮಿತಿಯ ಪ್ರಮುಖರಾದ ಶೇಷಪ್ಪ ಶೆಟ್ಟಿಮಜಲು ಧನ್ಯವಾದ ಸಲ್ಲಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading