ಸುಳ್ಯ ಜೇಸಿಐ ಪಯಸ್ವಿನಿಯಿಂದ ಜೇಸಿಐ ಸಪ್ತಾಹ-2026 : ವಿವಿಧ ಸಮಾಜಮುಖಿ ಕಾರ್ಯಕ್ರಮ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಹಾಗೂ ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೇಸಿಐ ಸಪ್ತಾಹ-2026 ಅಂಗವಾಗಿ ವಿವಿಧ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜೇಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಹೇಳಿದರು.

. . . . . . . . .

ಆ. 29ರಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಅಂಗವಾಗಿ ವಿವಿಧ ಶಿಬಿರಗಳು, ಮಾಹಿತಿ ಕಾರ್ಯಾಗಾರಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವುದು ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

. . . . . . .

ಆ. 30ರಂದು ಪೂರ್ವಾಹ್ನ 11.15ಕ್ಕೆ ಸುಳ್ಯದ ಮದುವೆಗದ್ದೆಯ ಶ್ರೀ ಬೋಜಪ್ಪ ಗೌಡ ಸಭಾಂಗಣದಲ್ಲಿ ‘Communicate. Connect. Create Loyalty’ ವಿಷಯದಡಿ ಕಾರ್ಯಕ್ರಮ ನಡೆಯಲಿದೆ. ಸಂವಾದಗಳನ್ನು ಅರ್ಥಪೂರ್ಣ ಸಂಪರ್ಕಗಳಾಗಿ ಪರಿವರ್ತಿಸಿ, ಶಾಶ್ವತ ಸಂಬಂಧಗಳನ್ನು ಬೆಳೆಸುವ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆ.04ರಂದು ಪೂರ್ವಾಹ್ನ 9.30ಕ್ಕೆ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಘಟಕದ ಮೂರನೇ ಬೃಹತ್ ರಕ್ತದಾನ ಶಿಬಿರ ಹಾಗೂ ‘Human Duties & Digital Outreach Day’ (ಮಾನವ ಸೇವೆ ಮತ್ತು ಡಿಜಿಟಲ್ ಜಾಗೃತಿ ದಿನ) ನಡೆಯಲಿದೆ.

ಸೆ. 5ರಂದು ಪೂರ್ವಾಹ್ನ 10ಕ್ಕೆ ಸುಳ್ಯದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ‘ನಂದಗೋಕುಲ’ ಮುದ್ದು ಕೃಷ್ಣ ಹಾಗೂ ಯಶೋದ ಕೃಷ್ಣ ಸ್ಪರ್ಧೆ ನಡೆಯಲಿದ್ದು, ಮಧ್ಯಾಹ್ನ 12.50ಕ್ಕೆ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ ಸಂಜೆ 5.30ಕ್ಕೆ ಕೋರ್ಟ್ ಬಳಿಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ‘ಮುಟ್ಟು ಗುಟ್ಟಲ್ಲ’ ಹೆಸರಿನಲ್ಲಿ ಹದಿಹರೆಯದ ಹೆಜ್ಜೆಗೆ ಆರೋಗ್ಯದ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ಸೆ. 6ರಂದು ಪೂರ್ವಾಹ್ನ 9.30ಕ್ಕೆ ಮದುವೆಗದ್ದೆಯ ಶ್ರೀ ಬೋಜಪ್ಪ ಗೌಡ ಸಭಾಂಗಣದಲ್ಲಿ ‘Sustainable Sipping Day’ ಕಾರ್ಯಕ್ರಮ ನಡೆಯಲಿದೆ.

ಸೆ. 15ರಂದು ಸಪ್ತಾಹ ಸಮಾರೋಪ : ಸೆ. 15ರಂದು ಸಂಜೆ 6.30ಕ್ಕೆ ಅಂಬಟೆಡ್ಕದಲ್ಲಿರುವ ಆರೋಹಿ ಎನ್ ಕ್ಲೇವ್ ಸಭಾಂಗಣದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಜೇಸಿಐ ಪಯಸ್ವಿನಿ ಕುಟುಂಬ ಸಮ್ಮಿಲನ ನಡೆಯಲಿದೆ. ಈ ಸಂದರ್ಭದಲ್ಲಿ ಕಮಲಪತ್ರ, ಪಯಸ್ವಿನಿಶ್ರೀ, ಕಲಾಶ್ರೀ ಹಾಗೂ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಜೇಸಿಐ ಸೆನೆಟರ್ ಜಿತೇಶ್ ಪಿರೇರಾ, ವಲಯ ಉಪಾಧ್ಯಕ್ಷರು, ನೇತ್ರಾವತಿ ರಿಜನ್-ಬಿ, ವಲಯ 15, ಜೇಸಿಐ ಭಾರತ ಹಾಗೂ ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಎಂ. ವೆಂಕಪ್ಪ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಮಲಪತ್ರ ಪುರಸ್ಕಾರವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ JC HGF ಭೀಮರಾವ್ ವಾಷ್ಠರ್ ಅವರಿಗೆ, ಪಯಸ್ವಿನಿಶ್ರೀ ಪುರಸ್ಕಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಅವರಿಗೆ ಹಾಗೂ ಕಲಾಶ್ರೀ ಪುರಸ್ಕಾರವನ್ನು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಟ ಗಾನಗಂಧರ್ವ ಶಶಿಧರ ಕೋಟೆ ಅವರಿಗೆ ಪ್ರದಾನ ಮಾಡಲಾಗುವುದು.

‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಯನ್ನು ಸುಳ್ಯದ ಉಪತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಮತ್ತು ಅಂತರರಾಷ್ಟ್ರೀಯ ಮ್ಯಾರಥಾನ್ ಕ್ರೀಡಾಪಟು ವಿನಯ್ ನಾರಾಲು ಅವರಿಗೆ ನೀಡಿ ಗೌರವಿಸಲಾಗುವುದು.

ಸನ್ಮಾನವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಸ್ಥಾಪಕ ಸದಸ್ಯ ಬಾಲಕೃಷ್ಣ ಡಿ.ಬಿ. ನೆರವೇರಿಸಲಿದ್ದು, ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಜೇಸಿ HGF ಸೀತಾರಾಮ ಕೇವಳ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಜೇಸಿಐ ಪಯಸ್ವಿನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಜೇಸಿ HGF ದಿನೇಶ್ ಮಡಪ್ಪಾಡಿ ಸೇರಿದಂತೆ ಗಣ್ಯರು ಹಾಗೂ ಸದಸ್ಯರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ತಾರಾ ಚೂಂತಾರು, ಗುರುರಾಜ್ ಅಜ್ಜಾವರ, ಸತ್ಯಶಾಂತಿ ತ್ಯಾಗಮೂರ್ತಿ, ಪ್ರಶಾಂತ್ ಅಂಬೆಕಲ್ಲು, ಮಹೇಶ್ ಮೇರ್ಕಜೆ ಹಾಗೂ ಸಪ್ತಾಹ ನಿರ್ದೇಶಕ ವಿನೋದ್ ಮೂಡುಗದ್ದೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading