iRisePro – YASHHO ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸುಬ್ರಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆರಂಭ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ, ಜಾಗತಿಕವಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುವಂತೆ “ಸರ್ವಶಕ್ತ ವಿದ್ಯಾರ್ಥಿ- ಸರ್ವಶಕ್ತ ಭಾರತ” ಎಂಬ ಸಂದೇಶದೊಂದಿಗೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ ಹಾಗೂ iRiseProನ ಜಂಟಿ ಸಹಭಾಗಿತ್ವದೊಂದಿಗೆ ” YASHHO-ವಿದ್ಯಾರ್ಥಿಗಳ ಕೌಶಲ ವಿಕಸನ ಕಾರ್ಯಗಾರ”ವು ಆರಂಭಗೊಂಡಿದೆ.

. . . . . . . . .

ಕುಮಾರಸ್ವಾಮಿ ವಿದ್ಯಾಸಂಸ್ಥೆಯು ಯಶಸ್ವಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ, ಆರಂಭಗೊಂಡ ಈ ಕಾರ್ಯಕ್ರಮವು ಪ್ರಮುಖವಾಗಿ ವಿದ್ಯಾರ್ಥಿಗಳ ಕೌಶಲಗಳ ಆಧಾರದ ಮೇಲೆ ಭವಿಷ್ಯದ ವಿದ್ಯಾಭ್ಯಾಸ ಹಾಗೂ ಉದ್ಯೋಗ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಹಕರಿಸಲಿದೆ. ಮಾಜಿ ಕೆಎಎಸ್ ಅಧಿಕಾರಿ ಶ್ರೀಯುತ ಮಂಜುನಾಥ ಕೆ ಎಂ ಇವರ ಆಳವಾದ ಸಂಶೋಧನೆಯ ಫಲವಾಗಿ ಆರಂಭಗೊಂಡ iRisePro ಸಂಸ್ಥೆಯು, ವಿದ್ಯಾರ್ಥಿಗಳ ನೈಜ ಸಾಮರ್ಥ್ಯದ ಕ್ಷೇತ್ರವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಅರಿತುಕೊಂಡು, ಅದರ ಆಧಾರದಲ್ಲಿ ಭವಿಷ್ಯದ ಆಯ್ಕೆಗಳನ್ನು ಸುಲಭ ಸಾಧ್ಯವಾಗಿಸಲು ಸಹಕರಿಸಲಿದೆ. ಇದರಿಂದಾಗಿ ಭವಿಷ್ಯದ ವಿದ್ಯಾಭ್ಯಾಸ ಹಾಗೂ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇರುವಂತಹ ಎಲ್ಲಾ ಒತ್ತಡ ಹಾಗೂ ಗೊಂದಲಗಳು ನಿವಾರಣೆಯಾಗಲಿವೆ.

. . . . . . .

ಈ ಕಾರ್ಯಗಾರದ ಅನುಷ್ಠಾನವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡಲಿದೆ. ಉತ್ತಮವಾಗಿರುವ ಕೌಶಲಗಳಿಗೆ ಪೂರಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿದೆ. ಕೌಶಲ್ಯ ಅಭಿವೃದ್ಧಿಯ ಪ್ರತಿಯೊಂದು ಹಂತದ ಮಾಹಿತಿಗಳನ್ನು ದಾಖಲೆಗಳೊಂದಿಗೆ ಕ್ರೂಢೀಕರಿಸಿ ಅದನ್ನು ಪೋಷಕರೊಂದಿಗೆ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಆಸಕ್ತ ಕ್ಷೇತ್ರದ ಬಗೆಗೆ ಪೋಷಕರಲ್ಲಿ ಅರಿವು ಮೂಡಿಸಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading