ಚೊಕ್ಕಾಡಿ:  ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ

ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ವತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾ ಕೇಂದ್ರ ಚೊಕ್ಕಾಡಿ ಇಲ್ಲಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಕ್ಷಯ ಮುಕ್ತ ಭಾರತ ಮತ್ತು ವ್ಯಸನ ಮುಕ್ತ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ನಡೆದ ಮಾಹಿತಿ ಕಾರ್ಯಾಗಾರವನ್ನು ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಚೊಕ್ಕಾಡಿ ಇದರ ಅಧ್ಯಕ್ಷ ಮಹಾಬಲೇಶ್ವರ ಕಾಂಚೋಡು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷರು ಹಾಗೂ ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ನಿರ್ದೇಶಕ ಈಶ್ವರ ವಾರಾಣಸಿ ವಹಿಸಿ, “ಇಂದಿನ ಮಕ್ಕಳು ಭಾವಿ ಪ್ರಜೆಗಳು, ತಾವು ವೈಯಕ್ತಿಕ ಶಿಸ್ತಿ ನೊಂದಿಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಪ್ರಜೆಗಳಾಗಿ ಬಾಳಬೇಕು” ಎಂದು ತಿಳಿಸಿದರು.
ವೇದಿಕೆಯಲ್ಲಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯ ವೆಂಕಟಗಿರಿ ಪಿ.ಕೆ. ಉಪಸ್ಥಿತರಿದ್ದು, ಶುಭ ಹಾರೈಸಿದರು.
ಬಳಿಕ ನಡೆದ ತರಬೇತಿಯಲ್ಲಿ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ಮಂಗಳೂರು ಇದರ ಪಿಪಿಎಂ ಸಂಯೋಜಕ ಮನೋಜ್ ಕೋಡಿಕಲ್ ಮತ್ತು ಕ್ಷಯ ಚಿಕಿತ್ಸಾ ಕೇಂದ್ರ ಆರೋಗ್ಯ ಇಲಾಖೆ ಸುಳ್ಯ ಇದರ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ರವರು ಕ್ಷಯ ರೋಗದ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಮಾದಕ ವಸ್ತುಗಳನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆ ಹಾಗೂ ವೈಯಕ್ತಿಕ ಆರೋಗ್ಯ ಕೆಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಲಾ ಶಿಕ್ಷಕಿ ಸೌಮ್ಯಶ್ರೀ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading