ಇಂದಿನ(ಜುಲೈ 25) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್, ಅಡಿಕೆ ಹಾಗೂ ಕೊಬ್ಬರಿ ಬೆಲೆ ಸ್ಥಿರ ; ಕಾಳುಮೆಣಸು ಧಾರಣೆಯಲ್ಲಿ ಕೊಂಚ ಇಳಿಕೆ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ದಿನಾಂಕ : 25 ಜುಲೈ 2026
ವಾರ : ಶನಿವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 25) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 390 ರಿಂದ 475
ಹಳೆ ಅಡಿಕೆ : 390 ರಿಂದ 550
ಡಬಲ್ ಚೋಲ್ : 390 ರಿಂದ 550
ಫಟೋರಾ : 320 ರಿಂದ 370
ಉಳ್ಳಿಗಡ್ಡೆ : 250 ರಿಂದ 270
ಕರಿಗೋಟು : 225 ರಿಂದ 255
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಇಂದು(ಜುಲೈ 25) ಯಾವುದೇ ದರ ಬದಲಾವಣೆಯಾಗದೆ ಮಾರುಕಟ್ಟೆ ಶಾಂತವಾಗಿದೆ. ಪ್ರಮುಖ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ ಮಾತ್ರವಲ್ಲದೆ, ಕಳೆದ ಎರಡು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಫಟೋರಾ, ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳೂ ಸಹ ಇಂದು ನಿನ್ನೆಯ ಮಟ್ಟದಲ್ಲೇ ಸ್ಥಿರವಾಗಿ ಉಳಿದಿವೆ.
ಸ್ಥಿರತೆಯ ಹಾದಿಯಲ್ಲಿ ಮುಖ್ಯ ಅಡಿಕೆ : ಹೊಸ ಅಡಿಕೆಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ₹475 ಹಾಗೂ ಹಳೆ ಅಡಿಕೆ ಮತ್ತು ಡಬಲ್ ಚೋಲ್‌ನ ಗರಿಷ್ಠ ಬೆಲೆ ₹550 ರ ಬಲಿಷ್ಠ ಮಟ್ಟದಲ್ಲೇ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿದಿದೆ.
ಕುಸಿತಕ್ಕೆ ಬ್ರೇಕ್ : ಕಳೆದ ಎರಡು ದಿನಗಳಿಂದ ಸತತ ಇಳಿಕೆ ಕಂಡು ಆತಂಕ ಮೂಡಿಸಿದ್ದ ಅಡಿಕೆ ಉಪ ಉತ್ಪನ್ನಗಳಾದ ಫಟೋರಾ(ಗರಿಷ್ಠ ₹370), ಉಳ್ಳಿಗಡ್ಡೆ(ಗರಿಷ್ಠ ₹270) ಹಾಗೂ ಕರಿಗೋಟು(ಗರಿಷ್ಠ ₹255) ಇಂದಿನ ವಹಿವಾಟಿನಲ್ಲಿ ನಿನ್ನೆಯ ಮಟ್ಟದಲ್ಲೇ ಸ್ಥಿರವಾಗಿ ಉಳಿದಿವೆ.
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585 ರಿಂದ 680
ಹಸಿ ಕೊಕ್ಕೋ : 70 ರಿಂದ 100
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 162
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಇಂದು(ಜುಲೈ 25) ಕಾಳುಮೆಣಸು ಬೆಲೆಯಲ್ಲಿ ಕೊಂಚ ಹಿನ್ನಡೆ ಕಂಡುಬಂದಿದೆ. ದೀರ್ಘ ದಿನಗಳಿಂದ ಗರಿಷ್ಠ ಮಟ್ಟದಲ್ಲೇ ಮುಂದುವರಿದಿದ್ದ ಕಾಳುಮೆಣಸಿನ ಧಾರಣೆ ಇಂದು ಕನಿಷ್ಠ ಮತ್ತು ಗರಿಷ್ಠ ಎರಡೂ ಕಡೆ 5 ರೂಪಾಯಿ ಕಳೆದುಕೊಂಡಿದೆ. ಇತ್ತ ಕೊಬ್ಬರಿ ಹಾಗೂ ಕೊಕ್ಕೋ ಮಾರುಕಟ್ಟೆಗಳು ನಿನ್ನೆಯ ದರಗಳನ್ನೇ ಕಾಯ್ದುಕೊಳ್ಳುವ ಮೂಲಕ ಸ್ಥಿರತೆ ಪ್ರದರ್ಶಿಸಿವೆ.
ಕಾಳುಮೆಣಸು ₹680 ಕ್ಕೆ ಇಳಿಕೆ : ನಿನ್ನೆ ಗರಿಷ್ಠ ₹685 ರಷ್ಟಿದ್ದ ಕಾಳುಮೆಣಸಿನ ದರ ಇಂದು ₹680 ಕ್ಕೆ ಇಳಿದಿದೆ. ಕನಿಷ್ಠ ದರವೂ ಸಹ ₹590 ರಿಂದ ₹585 ಕ್ಕೆ ಕುಸಿದಿದೆ.
ಸ್ಥಿರತೆಯಲ್ಲೇ ಮುಂದುವರಿದ ಕೊಬ್ಬರಿ : ನಿನ್ನೆ ಕನಿಷ್ಠ ದರದಲ್ಲಿ ಕುಸಿತ ಕಂಡಿದ್ದ ಕೊಬ್ಬರಿ ಮಾರುಕಟ್ಟೆ ಇಂದು ಯಾವುದೇ ಬದಲಾವಣೆ ಕಾಣದೆ ಪ್ರತಿ ಕೆಜಿಗೆ ₹130 ರಿಂದ ₹162 ರ ಮಟ್ಟದಲ್ಲೇ ವಹಿವಾಟು ನಡೆಸಿದೆ.
ಯಥಾಸ್ಥಿತಿಯಲ್ಲಿ ಕೊಕ್ಕೋ : ಹಸಿ ಕೊಕ್ಕೋ(ಗರಿಷ್ಠ ₹100) ಮತ್ತು ಒಣ ಕೊಕ್ಕೋ(ಗರಿಷ್ಠ ₹320) ಎಂದಿನಂತೆ ತಮ್ಮ ಸ್ಥಿರತೆಯನ್ನು ಮುಂದುವರಿಸಿವೆ.
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)

ರಬ್ಬರ್ ಧಾರಣೆ
ಗ್ರೇಡ್ : 278
ಲಾಟ್ : 243
ಸ್ಕ್ರ್ಯಾಪ್ ಪ್ರಥಮ ದರ್ಜೆ : 169
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 159
ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಇಂದು(ಜುಲೈ 25) ದರಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ನಿನ್ನೆ ದಾಖಲಾಗಿದ್ದ ಗರಿಷ್ಠ ಬೆಲೆಯ ಮಟ್ಟದಲ್ಲೇ ಇಂದೂ ಕೂಡ ವಹಿವಾಟು ನಡೆದಿದ್ದು, ಮಾರುಕಟ್ಟೆ ಸ್ಥಿರವಾಗಿದೆ.
ಬಲಿಷ್ಠ ಮಟ್ಟದಲ್ಲೇ ಗ್ರೇಡ್ ರಬ್ಬರ್ : ಪ್ರತಿ ಕೆಜಿ ಗ್ರೇಡ್ ರಬ್ಬರ್ ₹278 ರ ಉತ್ತಮ ದರದಲ್ಲೇ ಮುಂದುವರಿದು ಸ್ಥಿರತೆ ಕಾಯ್ದುಕೊಂಡಿದೆ.
ಯಥಾಸ್ಥಿತಿಯಲ್ಲಿ ಲಾಟ್ ಹಾಗೂ ಸ್ಕ್ರ್ಯಾಪ್ : ನಿನ್ನೆ ₹243 ಕ್ಕೆ ಜಿಗಿದಿದ್ದ ಲಾಟ್ ರಬ್ಬರ್ ಇಂದೂ ಅದೇ ಬೆಲೆಯಲ್ಲಿ ಮುಕ್ತಾಯ ಕಂಡಿದೆ. ಇನ್ನು ಸ್ಕ್ರ್ಯಾಪ್ ಪ್ರಥಮ ದರ್ಜೆ ₹169 ಹಾಗೂ ದ್ವಿತೀಯ ದರ್ಜೆ ₹159 ರ ಮಟ್ಟದಲ್ಲೇ ಮುಂದುವರಿದಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading