ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ರಾಜಕೀಯ ಮುಖಂಡರ ಸಭೆ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆಯನ್ನು ಜು.21 ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 207 ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯವರಾದ ಜಯಲಕ್ಷ್ಮಿರಾಯಕೊಡ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಮಂಗಳೂರು ಇವರು ಅಧ್ಯಕ್ಷತೆ ವಹಿಸಿದ್ದರು. 

. . . . . . . . .

ಸಹಾಯಕ ಮತದಾರರ ನೋಂದಣಾಧಿಕಾರಿಯವರಾದ ಮಂಜುಳ ಎಂ ತಹಸಿಲ್ದಾರರು ಸುಳ್ಯ ತಾಲೂಕು ಮತ್ತು ಜಿ.ಗಣೇಶ್ ಸವಣೂರು ತಹಶೀಲ್ದಾರ್ ಕಡಬ ತಾಲೂಕು ಇವರು ಉಪಸ್ಥಿತರಿದ್ದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಶಿಧರ ಎಂ.ಜೆ, ಸತೀಶ್ ನಾಯಕ್ ಮೇಲಿನ ಮನೆ ಕಡಬ ಮತ್ತು ಬಿಜೆಪಿ ಮುಖಂಡರಾದ ಸುಬೋಧ್ ಶೆಟ್ಟಿ ಮೇನಾಲ, ವಿನಯಕುಮಾರ್ ಕಂದಡ್ಕ, ಹರೀಶ್ ಕಂಜಿಪಿಲಿ ಹಾಗೂ ಎಎಪಿ ಪಕ್ಷದ ಮುಖಂಡರಾದ ಕಲಂದರ್ ಷಾ, ರಶೀದ್ ಜಟ್ಟಿಪಳ್ಳ ಇವರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಗತಿ ಬಗ್ಗೆ ವಿಮರ್ಶಿಸಲಾಯಿತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಶೇಕಡ 81.43 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಲಾಯಿತು .

. . . . . . .

ಮತದಾರರ ಪಟ್ಟಿಯಲ್ಲಿ 1200 ಕ್ಕಿಂತ ಹೆಚ್ಚು ಮತದಾರರಲ್ಲಿರುವ ಮತಗಟ್ಟೆಗಳ ಪುನರ್ವಿಂಗಡಣೆ ಹಾಗೂ ವಿಭಜನೆ ಬಗ್ಗೆ ಚರ್ಚಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading