ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ “ಕೃಷಿ ಅಧ್ಯಯನ ಪ್ರವಾಸ”

ದಕ್ಷಿಣ ಕನ್ನಡ ತೋಟಗಾರಿಕಾ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸುಳ್ಯ ಹಾಗೂ ಐ.ಸಿ.ಸಿ.ಓ.ಎ ಇವರ ಸಹಯೋಗದೊಂದಿಗೆ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ ಇವರ ಸಹಕಾರದೊಂದಿಗೆ ಜು.18ರಂದು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸದಸ್ಯರಿಗೆ “ಕೃಷಿ ಅಧ್ಯಯನ ಪ್ರವಾಸ” ನಡೆಯಿತು. ದೂಪ, ಪಯ್ಯಾನಿ ಮತ್ತು ಅಡಿಕೆ ಮರಗಳಲ್ಲಿ ಕಾಳುಮೆಣಸಿನ ಕೃಷಿ ಹಾಗೂ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ಮತ್ತು ನರ್ಸರಿ ವೀಕ್ಷಣೆ ಮಾಹಿತಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಅಧ್ಯಯನ ಪ್ರವಾಸದಲ್ಲಿ ಬಂಟ್ವಾಳದ ಪೆರುವಾಯಿ ಅನಂತರಾಮಕೃಷ್ಣ ಅವರ ಪಲ್ಲತ್ತಡ್ಕ ಫಾರ್ಮ್ಸ್ ಗೆ ಭೇಟಿ ನೀಡಲಾಯಿತು. ಹಾಗೂ ಈ ಸಂದರ್ಭದಲ್ಲಿ ಫಾರ್ಮ್ಸ್ ಮ್ಹಾಲಕರಾದ ಅನಂತರಾಮಕೃಷ್ಣ ಮತ್ತು ಸ್ವಾತಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ತೀರ್ಥಾನಂದ ಕೊಡೆಂಕಿರಿ, ಐ.ಸಿ.ಸಿ.ಓ.ಏ ಜಿಲ್ಲಾ ಸಂಯೋಜಕರಾದ ಡಿಕೇಶ್ ಗೌಡ.ಜಿ, ಪ್ರಗತಿಪರ ಕೃಷಿಕರಾದ ಪಿ.ಎಸ್ ಕಾರ್ಯಪ್ಪ, ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿಯ ಎಫ್.ಪಿ.ಓ ನಿರ್ದೇಶಕರುಗಳಾದ ಅನೂಪ್ ಬಿಳಿಮಲೆ, ರಮಾನಂದ ಎಣ್ಣೆಮಜಲು, ಬಾಲಕೃಷ್ಣ ರೈ ಬಿರ್ಕಿ, ಸಿ.ಇ.ಓ ಸಂತೋಷ್ ಪೆರ್ಲ, ಡಿ.ಇ.ಓ ಕಾರ್ತಿಕ್ ಕಣ್ಕಲ್, ಐ.ಸಿ.ಸಿ.ಓ.ಎ ದ ಎಲ್.ಎಲ್.ಆರ್.ಪಿ ಯೋಗೀಶ್ ಹೊಸೊಳಿಕೆ ಉಪಸ್ಥಿತರಿದ್ದರು.
ಸುಮಾರು 60ಕ್ಕಿಂತಲೂ ಹೆಚ್ಚಿನ ಕೃಷಿಕರು ಈ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು. ಯೋಜನೆಯ ಸದಸ್ಯರಾದ ಯೋಗೀಶ್ ಚಿದ್ಗಲ್ ಹಾಗೂ ಮಧು.ಪಿ.ಆರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸೋಮಶೇಖರ್ ನೇರಳ ಕಾರ್ಯಕ್ರಮ ನಿರೂಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading