ಡಾ ಚೂಂತಾರು ರೆಡ್ ಕ್ರಾಸ್ ರಾಷ್ಪ್ರೀಯ ಸಮಿತಿಗೆ ನೇಮಕ

ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇದರ ರಾಷ್ಪ್ರೀಯ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಡಾ ಮುರಲೀ ಮೋಹನ್ ಚೂಂತಾರು ನೇಮಕಗೊಂಡಿದ್ದಾರೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಗೌರವಾನ್ವಿತ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಈ ನೇಮಕಾತಿ ಆದೇಶವನ್ನು ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಈ ಕಾರ್ಯಕಾರಿ ಸಮಿತಿಯ ಸಭಾಪತಿಯಾಗಿರುತ್ತಾರೆ.

. . . . . . . . .

ಡಾ ಚೂಂತಾರು ಅವರು ರೆಡ್ ಕ್ರಾಸ್ ಸೊಸೈಟಿ ಇದರ ಆಜೀವ ಸದಸ್ಯರಾಗಿದ್ದು ಹಲವಾರು ವರುಷಗಳಿಂದ ರೆಡ್ ಕ್ರಾಸ್ ಸೊಸೈಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಯೂತ್ ರೆಡ್ ಕ್ರಾಸ್ ಅಧಿಕಾರಿಯಾಗಿ ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ ಐದು ವರುಷ ಕೆಲಸ ಮಾಡಿರುತ್ತಾರೆ. ನಂತರ ದ.ಕ ಜಿಲ್ಲಾ ರೆಡ್ ಕ್ರಾಸ್ ಸೋಸೈಟಿ ಇದರ ಸಭಾಪತಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿಯೇ 2013 ರಲ್ಲಿ ರೆಡ್ ಕ್ರಾಸ್ ರಕ್ತ ನಿಧಿ ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆಗೆ ಸ್ಥಳಾಂತರಗೊಂಡಿರುತ್ತದೆ. ರಕ್ತ ನಿಧಿ ಸಮಿತಿಯ ಅಧ್ಯಕ್ಷರಾಗಿ ಭದ್ರವಾದ ಭುನಾಧಿ ಹಾಕಿದ ಹೆಗ್ಗಳಿಕೆ ಇವರದ್ದು. ನೂರಕ್ಕಿಂತಲೂ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿರುತ್ತಾರೆ. ಸ್ವತ ರಕ್ತದಾನಿಯಾಗಿರುವ ಶ್ರೀಯುತರು ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುತ್ತಾರೆ. ಸದ್ಯ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ರಾಜ್ಯ ಶಾಖೆ ಇದರ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

. . . . . . .

ಅರ್ಹವಾಗಿಯೇ ಡಾ. ಚೂಂತಾರು ಅವರು ಮಾನವೀಯತೆಯಿಂದಲೇ ವಿಶ್ವಶಾಂತಿ ಎಂಬ ತತ್ವದ ಡಿಯಲ್ಲಿ ನಿಸ್ವಾರ್ಥ ಕೆಲಸ ಮಾಡುವ ರೆಡ್ ಕ್ರಾಸ್ ಸೊಸೈಟಿಗೆ ನೇಮಕವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರ ವಾಗಿರುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading