ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 22 ಜೂನ್ 2026
ವಾರ : ಸೋಮವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

01)🐏ಮೇಷ ರಾಶಿ : ಇಂದು ನಿಮ್ಮ ಸಾಧಾರಣ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು.‌ ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ‌ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ… ಗಮನಿಸಿ : ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ… ಪರಿಹಾರ : ದುರ್ಗಾದೇವಿಯ ಪ್ರಾರ್ಥನೆ ಮಾಡಿ.

. . . . . . . . .

02)🐂ವೃಷಭ ರಾಶಿ : ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ನಿಮಗೆ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಬಹುದು. ಮನಸ್ಸು ಒಂದು ಕಡೆ ನಿಲ್ಲದೇ ಓಡಾಡುವುದು. ಕಳೆದುಕೊಂಡದ್ದನ್ನು ಪಡೆಯುವ ಹಠವಿರುವುದು. ಅದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುವುದು. ಪ್ರೀತಿಸುವವರನ್ನು ಮುಕ್ತವಾಗಿ ಬಿಡುವಿರಿ. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ… ಗಮನಿಸಿ : ಇಂದು ಮಾನಸಿಕ ಒತ್ತಡ ಕಾಣಬಹುದು… ಪರಿಹಾರ : ತಂದೆ ತಾಯಿಯ ಆಶೀರ್ವಾದ ಪಡೆಯಿರಿ.

. . . . . . .

03)👥ಮಿಥುನ ರಾಶಿ : ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಐತಿಹಾಸಿಕ ದೇವಾಲಯವನ್ನು ನೋಡುವ ಹಂಬಲವಿರುವುದು. ನಿಮ್ಮಲ್ಲಿರುವ ದುರ್ಗುಣಗಳು ನಿಮಗೆ ಅರ್ಥವಾಗಲಿದೆ. ಅತಿಯಾದರೆ ಅಮೃತವೂ ವಿಷ. ದುರಭ್ಯಾಸವು ಗೊತ್ತಾಗದಂತೆ ನಿಮಗೆ ಬರಲಿದೆ. ಬಿಡಿಸಲು ಮನೆಯವರ ಪ್ರಯತ್ನ ಮಾಡುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ… ಗಮನಿಸಿ : ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ… ಪರಿಹಾರ : ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ.

04)🦀ಕಟಕ ರಾಶಿ : ಇಂದು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆ. ಹುಟ್ಟಿನಿಂದ ಬಂದ ಸ್ವಭಾವವನ್ನು ತಿದ್ದಲಾಗದು. ಸಮಯವನ್ನು ತಿನ್ನುವವರಿಗೆ ಸಿಗದೇ ಇದ್ದರೆ ಒಳ್ಳೆಯದು. ಮನೆಯಲ್ಲಿ ನಿಮ್ಮ ಸ್ವಭಾವವನ್ನು ತಿದ್ದಲು ಪ್ರಯತ್ನಿಸುವರು. ಮಾಡಬೇಕು ಎಂದು ಅನ್ನಿಸಿದ್ದನ್ನು ಮಾಡಿ‌ಮುಗಿಸಿ… ಗಮನಿಸಿ : ಇಂದು ಅಶಾಂತತೆ ತುಂಬಿರುತ್ತದೆ… ಪರಿಹಾರ : ಗ್ರಾಮ ದೇವತೆಯ ದರ್ಶನ ಮಾಡಿ.

05)🦁ಸಿಂಹ ರಾಶಿ : ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹೊಸ ವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ಯಾರಿಗೂ ತಿಳಿಸದೇ ಎಲ್ಲಿಗೋ ಹೋಗುವಿರಿ. ಸಮಾರಂಭದಲ್ಲಿ ಮುಖ್ಯಸ್ಥಾನವನ್ನು ಪಡೆಯುವಿರಿ. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ… ಗಮನಿಸಿ : ದೇವತಾ ದರ್ಶನ ಮಾಡುವಿರಿ… ಪರಿಹಾರ : ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ.

06)👩‍🦳ಕನ್ಯಾ ರಾಶಿ : ನಿಮ್ಮ ಬಿಡುವಿನ ವೇಳೆಯನ್ನು ಸ್ವಯಂ ಸೇವಕರಾಗಿ ಅಥವಾ ಇತರರಿಗೆ ಸಹಾಯ ಮಾಡಲು ಕಳೆಯಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ನಿಮ್ಮ ಮಾತು ಕೇಳುವುದಿಲ್ಲ ಎಂದೆನಿಸುವುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು… ಗಮನಿಸಿ : ಮನೆಯಲ್ಲಿ ಅಶಾಂತಿ ವಾತಾವರಣವಿರುತ್ತದೆ… ಪರಿಹಾರ : ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ.

07)⚖️ತುಲಾ ರಾಶಿ : ವಾಹನದ ಖರೀದಿಗೆ ಸಾಲ ಮಾಡುವಂತೆ ಪ್ರೇರಣೆ ಬರಲಿದೆ. ಮಕ್ಕಳಿಗೆ ಹೆಚ್ಚಿನ ಗಮನವನ್ನು ಕೊಡಬೇಕಾಗುವುದು. ಪುಣ್ಯಸ್ಥಳಕ್ಕೆ ಹೊರಟು ಊರಿಂದ ಊರಿಗೆ ವರ್ಗಾವಣೆಯಾಗುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಸಮಾಧಾನವನ್ನು ಮಾಡುವುದು ಬಿಟ್ಟು ಸೊಪ್ಪು ಹಾಕುವರು. ಎಷ್ಟೋ ದಿನದ ಹಿಂದೆ ಹೊಸ ವಸ್ತುಗಳನ್ನು ಖರೀದಿಸಿದ್ದು ಇಂದು ನಿಮಗೆ ನೆನಪಾಗುವುದು… ಗಮನಿಸಿ : ಇಂದು ಹಣದ ಅಭಾವವು ಕಾಣಿಸಬಹುದು… ಪರಿಹಾರ : ತಾಯಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ.

08)🦂ವೃಶ್ಚಿಕ ರಾಶಿ : ಹೊಸ ಒಪ್ಪಂದಗಳು ಬರುವ ಸಾಧ್ಯತೆ ಇದೆ. ಹುಣ್ಣನ್ನು ಕೆದಕಿದಷ್ಟೂ ಅದು ದೊಡ್ಡ ಗಾಯವಾಗುವುದು, ಮಾತನಾಡದೇ ಸುಮ್ಮನಿರಿ. ತಾನಾಗಿಯೇ ತಣ್ಣಗಾಗುವುದು. ಯೋಜನೆಯಿಲ್ಲದೇ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಅಸಂಭಾವ್ಯ ವಿಚಾರವನ್ನು ಸಂಭಾವ್ಯ ಮಾಡಿಕೊಂಡು ಹತಾಶರಾಗುವಿರಿ… ಗಮನಿಸಿ : ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು… ಗಮನಿಸಿ : ಇಂದು ನಿಮಗೆ ತಾಯಿಯ ಪ್ರೀತಿ ದೊರೆಯುವುದು… ಪರಿಹಾರ : ತಾಯಿ ಅನ್ನಪೂರ್ಣೇಶ್ವರಿ ಯನ್ನು ಪ್ರಾರ್ಥಿಸಿ.

09)🏹ಧನು ರಾಶಿ : ದುರಭ್ಯಾಸದ ಜನರ ಸಹವಾಸ ಇರುವುದು. ಒಳ್ಳೆಯ ಕಾಲ ಬರುವುದೆಂದು ಕಾದು ಕುಳಿತರೆ ಪ್ರಯೋಜನವಿಲ್ಲ. ಅಗ್ನಿಯ ಭಯದಿಂದ ಏನನ್ನೂ ಮಾಡಲು ಬೆಚ್ಚುವಿರಿ. ನಿಮ್ಮ ಕೆಲಸವನ್ನು ನೀವು ಮಾಡಿ. ಕಾಲ ಬಂದಾಗ ಅದು ಮಾಡಬೇಕಾದುದನ್ನು ಮಾಡುತ್ತದೆ. ಮಕ್ಕಳ ಭವಿಷ್ಯವು ಚೆನ್ನಾಗಿರಲು ಅವರ ಹೆಸರಿನಲ್ಲಿ ಹೂಡಿಕೆ ಮಾಡುವಿರಿ, ಕಷ್ಟವಾದರೂ ಇರುವ ಉದ್ಯೋಗವು ಯಥಾಸ್ಥಿತಿಯಲ್ಲಿ ಇರಲಿ… ಗಮನಿಸಿ : ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ… ಪರಿಹಾರ : ನಿಮ್ಮ ಮನೆ ದೇವರಿಗೆ ಕಾಣಿಕೆ ಅರ್ಪಿಸಿ.

10)🐊ಮಕರ ರಾಶಿ : ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಹಿರಿಯರ ಸೇವೆಯನ್ನು ಬಲವಾದ ಕಾರಣವಿಲ್ಲದೇ ಮಾಡಲಾರಿರಿ. ಭೂಮಿಯ ವ್ಯವಹಾರವನ್ನು ಸದ್ಯ ಮುಂದುವರಿಸಬೇಡಿ. ನ್ಯಾಯಾಲಯದ ಮೆಟ್ಟಿಲೇರಿದ ದೂರು ಇಂದು ಇತ್ಯರ್ಥವಾಗ ಬಹುದು, ಕಛೇರಿಯಲ್ಲಿ ಗೌರವ ಸಿಗಲಿದೆ… ಗಮನಿಸಿ : ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು… ಪರಿಹಾರ : ಆಂಜನೇಯನ ಪ್ರಾರ್ಥನೆ ಮಾಡಿ.

11)⚱️ಕುಂಭ ರಾಶಿ : ಗೆಲುವು ಸಣ್ಣದಾದರೂ ಸಂಭ್ರಮ ಮಾತ್ರ ದೊಡ್ಡದಾಗಿರುವುದು. ಮೇಲಧಿಕಾರಿಗಳ ವರ್ತನೆಯಿಂದ ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ಗೊಂದಲವೂ ಇರಬಹುದು. ಮಿತ್ರರ ಸಹಾಯದಿಂದ ಬಂದೊದಗಿದ ಅಪಾಯವನ್ನು ದೂರಮಾಡಿಕೊಳ್ಳುವಿರಿ… ಗಮನಿಸಿ : ಸಾಲ ಬಾಧೆಯ ಕಾಡುವುದು… ಪರಿಹಾರ : ದುರ್ಗಾಮಾತೆಯ ಪ್ರಾರ್ಥನೆ ಮಾಡಿ.

12)🐬ಮೀನ ರಾಶಿ : ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಮಕ್ಕಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರರು. ಅನುರೂಪ ಸಂಗಾತಿಯ ಭೇಟಿ ಮಾಡುವಿರಿ. ಆದರೆ ಅದು ನಿಮಗೆ ಗೊತ್ತಾಗದು. ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವವನ್ನು ನೀಡಿ… ಗಮನಿಸಿ : ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ… ಪರಿಹಾರ : ಮನೆ ದೇವರ ಪ್ರಾರ್ಥನೆ ಮಾಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading