ಕು. ಶ್ರೇಯಾ ಬೊಮ್ಮೆಟ್ಟಿಗೆ ಭಾರತೀಯ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಿಂದ ಚಿನ್ನದ ಪದಕ ಪ್ರದಾನ

ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿನಿ, ಸುಳ್ಯದ ಕೆವಿಜಿ ಐಪಿಎಸ್, ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುವ ಕು. ಶ್ರೇಯಾ ಬೊಮ್ಮೆಟ್ಟಿ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಸಾಬೀತುಪಡಿಸಿ, ಭಾರತೀಯ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (Indian Institute of Science Education and Research – IISER), ಭೋಪಾಲ್‌ನಲ್ಲಿ BS-MS ಸಂಯೋಜಿತ ಪದವಿ ಶಿಕ್ಷಣದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸುಳ್ಯಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ಕೀರ್ತಿ ತಂದಿದ್ದಾರೆ.

. . . . . . . . .

ಶ್ರೇಯಾ ಅವರು ಈ ಹಿಂದೆ ಮೊದಲ ಪ್ರಯತ್ನದಲ್ಲೇ ಸರ್ಕಾರಿ ಎಂ.ಬಿ.ಬಿ.ಎಸ್. ಸೀಟು ಪಡೆದು ಗಮನಾರ್ಹ ಸಾಧನೆ ಮಾಡಿದ್ದರು. ಆದರೆ ವೈದ್ಯಕೀಯ ವೃತ್ತಿಗಿಂತ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಬೇಕೆಂಬ ದೃಢ ಸಂಕಲ್ಪದಿಂದ ಆ ಅಮೂಲ್ಯ ಅವಕಾಶವನ್ನು ತ್ಯಜಿಸಿ, ದೇಶದ ಪ್ರತಿಷ್ಠಿತ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ IISER ಭೋಪಾಲ್ನಲ್ಲಿ ಪ್ರವೇಶ ಪಡೆದು ಉನ್ನತ ಶಿಕ್ಷಣವನ್ನು ಮುಂದುವರಿಸಿದರು.

. . . . . . .

ಐದು ವರ್ಷಗಳ BS-MS (Bachelor of Science – Master of Science) ಸಂಯೋಜಿತ ಪದವಿ ಕೋರ್ಸ್ ಅನ್ನು ಅತ್ಯುನ್ನತ ಸಾಧನೆಯೊಂದಿಗೆ ಪೂರ್ಣಗೊಳಿಸಿದ ಅವರು, ಶೈಕ್ಷಣಿಕ ಮೇರು ಸಾಧನೆಗಾಗಿ ಸಂಸ್ಥೆಯ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 2026ರ ಆಗಸ್ಟ್‌ 3ರಂದು ನಡೆದ ಘಟಿಕೋತ್ಸವದಲ್ಲಿ ಅವರಿಗೆ ಪ್ರಶಸ್ತಿ ಪತ್ರದೊಂದಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ಅಂತಿಮ ವರ್ಷದ ಅಧ್ಯಯನದ ಭಾಗವಾಗಿ Natural Bio-Proteins (ನೈಸರ್ಗಿಕ ಜೈವಿಕ ಪ್ರೋಟೀನ್‌ಗಳು) ಕುರಿತ ಮಹತ್ವದ ಸಂಶೋಧನೆ ನಡೆಸಿದ ಅವರು ತಮ್ಮ ಸಂಶೋಧನಾ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ, ಉನ್ನತ ಮಟ್ಟದ ಸಂಶೋಧನೆಗಾಗಿ ಅವರು ಶೀಘ್ರದಲ್ಲೇ ಅಮೆರಿಕಕ್ಕೆ ತೆರಳಲಿದ್ದು, ಇದು ಅವರ ವೈಜ್ಞಾನಿಕ ಸಂಶೋಧನಾ ಬದುಕಿನ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.

ಈಕೆ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಬೊಮ್ಮೆಟ್ಟಿ ಹಾಗೂ ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ದಂಪತಿಯ ಪುತ್ರಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading