ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಮೊಬೈಲ್ ಆಪ್ ಮೂಲಕ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ ; ಶಾಲಾನಾಯಕನಾಗಿ ಸನತ್ ಬಿ.ಜೆ – ಉಪನಾಯಕನಾಗಿ ಜಿತನ್ ಕೆ.ವಿ

ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ಮೊಬೈಲ್ ಆಪ್ ಮೂಲಕ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಮುಖಾಂತರ ರಚನೆ ಮಾಡಲಾಯಿತು. ಶಾಲಾನಾಯಕನಾಗಿ 10ನೇ ತರಗತಿಯ ಸನತ್ ಬಿ.ಜೆ, ಉಪನಾಯಕನಾಗಿ 9ನೇ ತರಗತಿಯ ಜಿತನ್ ಕೆ.ವಿ ವಿರೋಧ ಪಕ್ಷದ ನಾಯಕನಾಗಿ ಆದರ್ಶ ಟಿ.ಎ(10) ಸಭಾಪತಿಯಾಗಿ ಆಕಾಶ್ ಪಿ.ಜಿ(10) ಆಯ್ಕೆಯಾದರು.

. . . . . . . . .

ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಿತಾ(9), ಉಪ ಸಾಂಸ್ಕೃತಿಕ ಮಂತ್ರಿಯಾಗಿ ಧನುಷ್ ಗೌಡ(9), ಕ್ರೀಡಾ ಮಂತ್ರಿಯಾಗಿ ಆಕಾಶ್.ಎಸ್(10), ಉಪ ಕ್ರೀಡಾ ಮಂತ್ರಿಯಾಗಿ ಲೇಖನ್(9), ಶಿಕ್ಷಣ ಮಂತ್ರಿಯಾಗಿ ರಕ್ಷಿತಾ ಪಿ.ಸಿ(10), ಉಪಶಿಕ್ಷಣಮಂತ್ರಿಯಾಗಿ ಪ್ರಣವ್ ಕೆ.ಯು(10), ಗೃಹ ಮಂತ್ರಿಯಾಗಿ ನಿತಿನ್.ವಿ(10), ಉಪಗೃಹಮಂತ್ರಿಯಾಗಿ ಪ್ರದೀಪ್(9), ನೀರಾವರಿ ಮಂತ್ರಿಯಾಗಿ ಆದರ್ಶ ಡಿ.ಟಿ(10), ಉಪ ನೀರಾವರಿ ಮಂತ್ರಿಯಾಗಿ ವಿಶಾಲ್.ಕೆ(9) ಆಹಾರ ಮಂತ್ರಿಯಾಗಿ ದೀಕ್ಷಾ.ಸಿ(9), ಉಪ ಆಹಾರ ಮಂತ್ರಿಯಾಗಿ ಯಶಿಕಾ(9), ಆರೋಗ್ಯಮಂತ್ರಿಯಾಗಿ ರೋಹಿತ್(10), ಉಪ ಆರೋಗ್ಯ ಮಂತ್ರಿಯಾಗಿ ಸಂಜಯ್(9), ಸ್ವಚ್ಛತಾ ಮಂತ್ರಿಯಾಗಿ ಪ್ರೀತಂ ಜೆ.ಪಿ(9) ಉಪ ಸ್ವಚ್ಛತಾ ಮಂತ್ರಿಯಾಗಿ ಮಿಷನ್ ಪಿ.ಜೆ(9), ಶಿಸ್ತು ಮಂತ್ರಿಯಾಗಿ ರೋಹನ್(8), ಉಪಶಿಸ್ತುಮಂತ್ರಿಯಾಗಿ ಭರತ್ ಕೃಷ್ಣ(9), ವಾರ್ತಾಮಂತ್ರಿಯಾಗಿ ಲಿಖಿತಾ ಪಿ.ಎಸ್(9), ಉಪವಾರ್ತ ಮಂತ್ರಿಯಾಗಿ ನಿತಿನ್ ಓ.ಸಿ(8), ವಿರೋಧ ಪಕ್ಷದ ಸದಸ್ಯರುಗಳಾಗಿ ಡೀನಾ, ಪ್ರೀತಂ, ಮನ್ವಿತ್, ಸಚಿನ್ ರೇಷ್ಮಾ ಇವರುಗಳು ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ ಜಿ.ಆರ್ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಕರಾದ ನಿತಿನ್ ಮಜಿಕೋಡಿ ಹಾಗೂ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದವರು ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading