ಸುಳ್ಯ : ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಎಸ್.ಐ.ಆರ್ ಮಾಹಿತಿ ಕಾರ್ಯಗಾರ ಸಮಾರೋಪ ಹಾಗೂ ತರಬೇತುದಾರರಿಗೆ ಗೌರವಾರ್ಪಣೆ – ಸುಳ್ಯ ನಗರ ವ್ಯಾಪ್ತಿಯ ಮತ್ತು ಆಲೆಟ್ಟಿ, ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಬಿ.ಎಲ್.ಎ-2 ಮತ್ತು ಕಾರ್ಯಕರ್ತರಿಗೆ ಎಸ್.ಐ.ಆರ್ ತರಬೇತಿ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಳೆದ ಜೂ.14ರಿಂದ ತಾಲೂಕಿನ ಪ್ರತೀ ತಾಲೂಕು ಪಂಚಾಯತ್ ವ್ಯಾಪ್ತಿಗಳಲ್ಲಿ ನಿರಂತರ ಎಸ್.ಐ.ಆರ್ ಮತದಾರ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಆಯೋಜಿಸಿ ಅಂತಿಮವಾಗಿ ಇಂದು ಸುಳ್ಯ ನಗರ ಹಾಗೂ ಉಬರಡ್ಕ ಮಿತ್ತೂರು ಮತ್ತು ಆಲೆಟ್ಟಿ ಗ್ರಾಮಗಳ ಬಿ.ಎಲ್.ಎ-2 ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.

. . . . . . . . .

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೇಕಲ್ಲು, ಸೂಡ ಅಧ್ಯಕ್ಷ ಕೆ.ಎಂ ಮುಸ್ತಫಾ, ಕೆಪಿಸಿಸಿ ಮಾಜಿ ಸಂಯೋಜಕ ಸಂಶುದ್ದೀನ್ ಎಸ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ(ಆಡಳಿತ) ಭವಾನಿಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಮುಖ್ಯ ತರಬೇತುದಾರರಾಗಿ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ ಹಾಗೂ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಎಸ್.ಐ.ಆರ್ ಕುರಿತು ಪೂರ್ವ ಸಿದ್ಧತೆಗಳ ಕುರಿತು ತರಬೇತಿ ಹಾಗೂ ಮಾಹಿತಿ ನೀಡಿದರು.

ಸುಳ್ಯ ತಾಲೂಕಿನ 8 ಕಡೆ ಎಲ್ಲಾ ತಾಲೂಕು ಪಂಚಾಯತ್ ವ್ಯಾಪ್ತಿಗಳಲ್ಲಿ ತರಬೇತಿ ಕಾರ್ಯಗಾರ ನಡೆಸಿಕೊಟ್ಟು ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ತರಬೇತುದಾರರಾದ ಶಶಿಧರ್ ಎಂ.ಜೆ ಹಾಗೂ ಚೇತನ್ ಕಜೆಗದ್ದೆಯವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸುಳ್ಯ ನಗರದ ಬಿ ಎಲ್ ಎ-2ಗಳಾದ ವಿಜಯಕುಮಾರ್ ಕಂದಡ್ಕ, ಕೆ.ಟಿ ಭಾಗೀಶ್, ಕೆ.ಎಂ ಮುಸ್ತಫಾ, ಶಾಫಿ ಕುತ್ತಮೊಟ್ಟೆ, ಶರೀಫ್ ಕಂಠಿ, ಉಮೇಶ್ ಜಟ್ಟಿಪಳ್ಳ, ನವೀನ್ ಮಚದೋ, ಅಬ್ದುಲ್ ಅಜೀಜ್ ಹಳೇಗೇಟು, ಪ್ರಿಥ್ವಿರಾಜ್ ಶಾಂತಿನಗರ, ಗೋಪಾಲಕೃಷ್ಣ ಭಟ್, ಡೇವಿಡ್ ಧೀರಾ ಕ್ರಾಸ್ತ, ಎಸ್.ಎಂ ಉಮ್ಮರ್ ಕುರುಂಜಿಗುಡ್ಡೆ, ಶಹೀದ್ ಪಾರೆ, ಅಶ್ರಫ್ ಕಲ್ಲುಮುಟ್ಲು, ಆಲೆಟ್ಟಿ ಗ್ರಾಮದ ಬಿ.ಎಲ್.ಎ-2 ಗಳಾದ ಸೀತಾರಾಮ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಗೋಪಾಲ ಗುಂಡ್ಯ, ತವೀದ್ ಕಲ್ಚರ್ಪೆ, ಬಿ.ಕೆ ಸತ್ಯಕುಮಾರ್ ಆಡಿಂಜಾ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಇಬ್ರಾಹಿಂ ಶಿಲ್ಪಾ, ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಭಾಸ್ಕರ ಪೂಜಾರಿ ಬಾಜಿನಡ್ಕ, ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ನಂದರಾಜ್ ಸಂಕೇಶ್, ಶ್ರೀಮತಿ ರಾಬಿಯ, ಲತೀಶ್ ಕುಮಾರ್, ಎಸ್ ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಎನ್.ಎಸ್.ಯು.ಐ ಅಧ್ಯಕ್ಷ ಧನುಷ್ ಕುಕ್ಕೇಟಿ, ಪ್ರಮುಖರಾದ ಮೂಸೆ ಕುಂಜಿ ಕೊಳಂಜಿಕೋಡಿ, ಸುಂದರ ಕುದ್ಪಾಜೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಹುಲ್ ಅಡ್ಪಂಗಾಯ, ರಾದೇಶ್ ಕೆಮ್ಮಿಂಜೆ, ಪಿ.ಎ ಮಹಮ್ಮದ್, ಕೆ.ಬಿ ಇಬ್ರಾಹಿಂ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಸ್.ಕೆ ಹನೀಫ್, ಕಾರ್ಯದರ್ಶಿ ಇಕ್ಪಾಲ್ ಸುಣ್ಣಮೂಲೆ, ವಿಜೇಶ್ ಹಿರಿಯಡ್ಕ, ಶರವಣ ಮೇದಿನಡ್ಕ, ಮಧುಸೂಧನ್ ಬೂಡು, ಎಸ್ ಸುರೇಶ್ ಕುತ್ತಮೊಟ್ಟೆ, ಮಂಜುನಾಥ ಮಡ್ತಿಲ, ಜೂಲಿಯ ಕ್ರಾಸ್ತಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿರಿಭಾಗ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸದಸ್ಯ ಜತ್ತಪ್ಪ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading