ಕುಕ್ಕೆ ಸುಬ್ರಹ್ಮಣ್ಯ : ಆದಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ಸಂದಣಿ

ಸುಬ್ರಹ್ಮಣ್ಯ ಜೂನ್ 02 : ದಕ್ಷಿಣ ಭಾರತದ ಹೆಸರಾಂತ ಪುಣ್ಯ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿನಿತ್ಯ ಭಕ್ತರ ಸಂದಣಿ ಇರುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ 80% ಭಕ್ತರು ಆದಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಆದಿ ನಾಗನ ದರ್ಶನ ಪಡೆದು ತೀರ್ಥಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಾರೆ. ಕುಕ್ಕೆ ಕ್ಷೇತ್ರದ ಮಹತ್ತರ ಸೇವೆಯಾದ ಸರ್ಪಸಂಸ್ಕಾರ ಯಾಗ ಶಾಲೆ ಇರುವುದು ಆದಿ ಕ್ಷೇತ್ರದಲ್ಲಿ, ಹಾಗಾಗಿ ಈ ಹಿಂದೆ ಸರ್ಪ ಸಂಸ್ಕಾರ ಸೇವೆ ಮಾಡಿದ ಭಕ್ತರು ಕುಕ್ಕೆಗೆ ಬಂದಾಗ ಆದಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದಿ ಸುಬ್ರಹ್ಮಣ್ಯದಲ್ಲಿರುವ ಮಣ್ಣಿನ ಹುತ್ತವನ್ನು ಭಕ್ತರು ಹತ್ತಿರದಿಂದ ವೀಕ್ಷಿಸಬಹುದಾಗಿದೆ. ಇಲ್ಲಿ ಬೆಳಗ್ಗೆ 6:00 ಗಂಟೆಯಿಂದ ನಿರಂತರವಾಗಿ ದೇವರ ದರ್ಶನ ನಡೆಯುತ್ತಿರುತ್ತದೆ. ಸೋಮವಾರ ಶಿವನ ಕ್ಷೇತ್ರಕ್ಕೆ ದರ್ಶನಕ್ಕೆ ಆಗಮಿಸಿದ ಭಕ್ತರು ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯನ ದರ್ಶನ ಪಡೆಯುವುದು ಸರ್ವೇಸಾಮಾನ್ಯವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading