ಮಾನವೀಯತೆ ಮೆರೆದ ಶಿವ ಹಾಲಿಡೇಸ್ ಹಾಗೂ ಶ್ರೀ ದುರ್ಗಾ ಕಾರ್ ವಾಷ್ ಸಿಬ್ಬಂದಿ

ವಾಹನದಲ್ಲಿ ಸಿಕ್ಕಿದ  ರೂ‌. 12,000 ನಗದು ಹಾಗೂ ಅಮೂಲ್ಯ ದಾಖಲಾತಿಗಳನ್ನು ಪ್ರಾಮಾಣಿಕವಾಗಿ ಮರಳಿಸುವ ಮೂಲಕ ಸುಳ್ಯದ ಶಿವ ಹಾಲಿಡೇಸ್ ಹಾಗೂ ಶ್ರೀ ದುರ್ಗಾ ಕಾರ್ ವಾಷ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

. . . . . . . . .

ಜು.20ರಂದು ತಿರುಪತಿ ದರ್ಶನ ಮುಗಿಸಿ ಹಿಂದಿರುಗಿದ ಶಿವ ಹಾಲಿಡೇಸ್‌ನ ವಾಹನವನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ದುರ್ಗಾ ಕಾರ್ ವಾಷ್‌ನಲ್ಲಿ ಸ್ವಚ್ಛಗೊಳಿಸಲು ನೀಡಲಾಗಿತ್ತು. ವಾಹನವನ್ನು ಸ್ವಚ್ಛಗೊಳಿಸುವ ವೇಳೆ ಸೀಟಿನ ಕೆಳಭಾಗದಲ್ಲಿ ₹12,000 ನಗದು ಹಾಗೂ ಅಮೂಲ್ಯ ದಾಖಲೆಗಳು ಪತ್ತೆಯಾಗಿತ್ತು

. . . . . . .

ತಕ್ಷಣವೇ ಕಾರ್ ವಾಷ್ ಸಿಬ್ಬಂದಿಗಳಾದ ಯೋಗೀಶ್ ಹಾಗೂ ರಘುನಾಥ್ ಅವರು ಶಿವ ಹಾಲಿಡೇಸ್‌ನ ಮಾಲಕ ಶಿವಪ್ರಸಾದ್ ಕೆ.ಜೆ. ಅವರಿಗೆ ತಿಳಿಸಿದರು.

ಶಿವಪ್ರಸಾದ್ ಅವರು ತನ್ನ ವಾಹನದಲ್ಲಿ ಪ್ರಯಾಣಿಸಿದ್ದ ಗಣೇಶ್ ಕಣಿಯೂರು ಅವರನ್ನು ಸಂಪರ್ಕಿಸಿದಾಗ  ಪ್ರಯಾಣಿಕ ಜಯರಾಮ್ ಅವರು ಹಣ ಕಳೆದುಕೊಂಡಿರುವುದು ತಿಳಿಯಿತು. ನಂತರ ಅವರಿಗೆ  ಹಸ್ತಾಂತರಿಸಿದರು. ಯೋಗೀಶ್, ರಘುನಾಥ್ ಹಾಗೂ ಶಿವಪ್ರಸಾದ್ ಕೆ.ಜೆ. ಅವರ ಪ್ರಾಮಾಣಿಕತೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading