ಬೆಳ್ಳಾರೆ : ಕಾಂಗ್ರೆಸ್ ಗ್ರಾಮ ಸಮಿತಿ ಪೂರ್ವ ಭಾವಿ ಸಭೆ

ಬೆಳ್ಳಾರೆ ಗ್ರಾಮ ಸಮಿತಿಯ ಪೂರ್ವ ಭಾವಿ ಸಭೆಯು ಬೆಳ್ಳಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಎಸ್.ಡಿ ವಿಠಲ್ ದಾಸ್‌ ರವರ ಸ್ವಗೃಹದ ಆವರಣದಲ್ಲಿ ಜು 18ರಂದು ನಡೆಯಿತು. ಈ ಸಭೆಯಲ್ಲಿ ಮುಖ್ಯವಾಗಿ ಎಸ್.ಐ.ಆರ್ ಮತ್ತು

. . . . . . . . .

ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಎಸ್.ಐ.ಆರ್ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಮತ್ತು ಆಗುತ್ತಿರುವ ಲೋಪ ದೋಷಗಳ ಬಗ್ಗೆಯೂ ಬಿ.ಎಲ್‌.ಒ ಗಳು ಪ್ರಸ್ತಾಪ ಮಾಡಿದರು.

. . . . . . .

ಸಭೆಯ ಅಧ್ಯಕ್ಷತೆಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಅನಿಲ್ ರೈ ಬೆಳ್ಳಾರೆ ವಹಿಸಿದ್ದರು. ಅವರು ಈಗ ನಡೆಯುತ್ತಿರುವ ಎಸ್.ಐ.ಆರ್ ಮತ್ತು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಯ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು. ಮುಂಬರುವ ಚುನಾವಣೆಯಲ್ಲಿ ನಾಯಕರೆಲ್ಲ‌ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯುವ ಹಾಗೂ ನೈಜ‌ ಕಾರ್ಯಕರ್ತರಿಗೆ ಅವಕಾಶ ನೀಡುವ‌ ಎಂದರು.

ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜೀವಿ ಆರ್‌‌.ರೈ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಂಗ್ರೆಸ್ ಪಕ್ಷವನ್ನು ಬೆಳ್ಳಾರೆಯಲ್ಲಿ ಮರಳಿ ಗತ ವೈಭವಕ್ಕೆ ತರಲು ಎಲ್ಲಾ ವೈಯಕ್ತಿಕ ವಿಷಯಗಳನ್ನು ಮರೆತು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು‌. ಕಾಂಗ್ರೆಸ್ ನ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷರಾದ ಎನ್.ಎಸ್.ಡಿ ವಿಠಲ್ ದಾಸ್ ಮಾತನಾಡಿ ದಿ.ಭಾಸ್ಕರ್ ರೈಯವರು ಬೆಳ್ಳಾರೆಯಲ್ಲಿ ಬೆಳೆಸಿದ ಪಕ್ಷವನ್ನು ಮತ್ತೊಮ್ಮೆಬೆಳ್ಳಾರೆಯಲ್ಲಿ ಗತಕಾಲದ ಕಾಂಗ್ರೆಸ್ ಪಕ್ಷವಾಗಿ ಮಾರ್ಪಡಿಸಲು ಯಾವ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿದರು. ಸಭೆಯಲ್ಲಿ ದ‌.ಕ. ಜಿ.ಪಂ.ಮಾಜಿ ಸದಸ್ಯ ಚಂದ್ರಶೇಖರ್ ಕಾಮತ್ ಶುಭಾಶಯ ಕೋರಿದರು.

ಸಭೆಯಲ್ಲಿ ಬೆಳ್ಳಾರೆ ಗ್ರಾಮದ ಕಾಂಗ್ರೆಸ್ ಪ್ರಮುಖರಾದ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಮೀದ್ ಹೆಚ್.ಎಂ, ಸುನಿಲ್ ರೈ ಪುಡ್ಕಜೆ, ಓವಿನ್ ಪಿಂಟೋ, ಆನಂದ ಬೆಳ್ಳಾರೆ, ಮುಸ್ತಫಾ ಕಲ್ಲಪಣೆ, ಜಮಾಲ್ ಕೆ.ಎಸ್, ಮಣಿಕಂಠ ಕಲ್ಲೋಣಿ, ಪ್ರಕಾಶ ದರ್ಖಾಸ್ತು, ತಾಜುದ್ದೀನ್ ಪನ್ನೆ, ನಾಗೇಶ್ ಕುಲಾಲ್, ಶಶಿಕಲಾ ಚಾವಡಿಬಾಗಿಲು ಹಾಗೂ ಹಲವಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಕೊನೆಯಲ್ಲಿ ಬಶೀರ್ ಅಹ್ಮದ್ ನೇಲ್ಯಮಜಲು ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading