ದ್ವಾದಶ ರಾಶಿಗಳ ದಿನ ಭವಿಷ್ಯ



ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197

. . . . . . . . .

ದಿನಾಂಕ:26:05:2026 ಮಂಗಳವಾರ

. . . . . . .


*01,🐏ಮೇಷ ರಾಶಿ🐏*
📃,ದೂರ ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.ಬಂಧು-ಮಿತ್ರರೊಂದಿಗೆ ಆಕಸ್ಮಿಕ ಕಲಹಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿಇತರರೊಂದಿಗೆ.ವಿವಾದಗಳಿಂದ ದೂರವಿರುವುದು ಒಳಿತು. ದೈವಚಿಂತನೆ ಹೆಚ್ಚಾಗುತ್ತದೆ,
ಗಮನಿಸಿ:- ವ್ಯಾಪಾರ ಹೆಚ್ಚು ಅನುಕೂಲಕರವಾಗಿರುವುದಿಲ್ಲ
ಪರಿಹಾರ:-ಯಾವುದಾದರೂ ಒಂದು ದೇವಸ್ಥಾನಕ್ಕೆ ಭೇಟಿ ಕೊಡಿ,
*02,🐂ವೃಷಭ ರಾಶಿ🐂*
📃,ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ಅನುಕೂಲಕರವಾಗುತ್ತವೆ. ಹೊಸ ವ್ಯಾಪಾರ ಆರಂಭಿಸಿದರೆ ನಿರೀಕ್ಷಿತ ಲಾಭ ದೊರೆಯುತ್ತದೆ. ಜೀವನ ಸಂಗಾತಿಯೊಂದಿಗೆ ದೈವ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಪ್ರಮುಖ ವಿಚಾರಗಳನ್ನು ಚರ್ಚಿಸುತ್ತೀರಿ. ಉದ್ಯೋಗಿಗಳಿಗೆ ಪ್ರೋತ್ಸಾಹ ದೊರೆಯುತ್ತದೆ,
ಗಮನಿಸಿ:- ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಲಭಿಸುತ್ತವೆ,
ಪರಿಹಾರ:-ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸಿ,
*03,👥ಮಿಥುನ ರಾಶಿ👥*
📃,ಸಹೋದರರೊಂದಿಗೆ ಆಸ್ತಿ ವಿವಾದಗಳು ನಿವಾರಣೆಯಾಗುತ್ತವೆ. ವಾಹನ ವ್ಯವಹಾರಿಗಳಿಗೆ ಹೊಸ ಲಾಭಗಳು ದೊರೆಯುತ್ತವೆ. ಅಗತ್ಯ ಸಂದರ್ಭದಲ್ಲಿ ಆಪ್ತರಿಂದ ಸಹಾಯ ದೊರೆಯುತ್ತದೆ. ಕುಟುಂಬ ವಾತಾವರಣ ಹರ್ಷಭರಿತವಾಗಿರುತ್ತದೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಹುದ್ದೆ ಹೆಚ್ಚಾಗುತ್ತದೆ. ಆಕಸ್ಮಿಕ ಧನಲಾಭದ ಸೂಚನೆಗಳಿವೆ,
ಗಮನಿಸಿ:-ಕೆಲವು ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ,
ಪರಿಹಾರ:- ನವಗ್ರಹ ಮಂತ್ರವನ್ನು ಪ್ರಾರ್ಥನೆ ಮಾಡಿ,
*04,🦀ಕರ್ಕ ರಾಶಿ🦀*
📃,ವೃತ್ತಿ ಮತ್ತು ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಮುಂದುವರಿಯುತ್ತವೆ. ದೂರ ಪ್ರಯಾಣಗಳ ಸೂಚನೆಗಳಿವೆ. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿ ಸ್ವಲ್ಪ ಕಳವಳ ಉಂಟಾಗುತ್ತದೆ. ಮನೆಯಲ್ಲಿ ಮತ್ತುಹೊರಗೆಎಚ್ಚರಿಕೆಯಿಂದ ವರ್ತಿಸಬೇಕು.ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬರುತ್ತವೆ,
ಗಮನಿಸಿ:-ಆರ್ಥಿಕವಾಗಿ ಸ್ವಲ್ಪ ನಿರಾಶೆ ಉಂಟಾಗುತ್ತದೆ,
ಪರಿಹಾರ:-ಶ್ರೀರಾಘವೇಂದ್ರಸ್ವಾಮಿಗಳ ಪ್ರಾರ್ಥನೆ ಮಾಡಿ,
*05,🦁ಸಿಂಹ ರಾಶಿ🦁*
📃,ತಾಯಿ-ತಂದೆಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸೂಕ್ತವಲ್ಲ. ವೃತ್ತಿ ಹಾಗೂ ವ್ಯಾಪಾರದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗುತ್ತದೆ. ಹೊಸ ಸಾಲ ಪಡೆಯಲು ಪ್ರಯತ್ನಿಸುತ್ತೀರಿ. ಬಂಧುಗಳೊಂದಿಗೆ ಕಲಹಗಳು ಉಂಟಾಗುತ್ತವೆ.ಉದ್ಯೋಗದಲ್ಲಿ. ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ,
ಗಮನಿಸಿ:-ನಿರುದ್ಯೋಗಿಗಳ ಪ್ರಯತ್ನಗಳು ಫಲಿಸದ ಕಾರಣ ನಿರಾಶೆ ಹೆಚ್ಚಾಗುತ್ತದೆ,
ಪರಿಹಾರ:-ಯಡಿಯೂರು ಶ್ರೀ ಸಿದ್ದಲಿಂಗೇಶ್ವರರ ಪ್ರಾರ್ಥನೆ ಮಾಡಿ,
*06,👩‍🦳ಕನ್ಯಾ ರಾಶಿ👩‍🦳*
📃,ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಕೈಗೊಂಡ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ವೃತ್ತಿ ಮತ್ತು ಉದ್ಯೋಗ ಯತ್ನಗಳಲ್ಲಿ ಯಶಸ್ಸು ದೊರೆಯುತ್ತದೆ. ಸಮಾಜದಲ್ಲಿ ಸ್ನೇಹಿತರಿಂದ ಅನಿರೀಕ್ಷಿತ ಧನಲಾಭವಾಗುತ್ತದೆ.ವೃತ್ತಿ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತೀರಿ,
ಗಮನಿಸಿ:-ಹೊಸ ವಾಹನಗಳನ್ನು ಖರೀದಿಸುವ ಸಾಧ್ಯತೆ ಇದೆ,
ಪರಿಹಾರ:- ಶ್ರೀ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿ,
*07,⚖️ತುಲಾ ರಾಶಿ⚖️*
📃,ಪ್ರಮುಖ ವಿಷಯಗಳಲ್ಲಿ ಕುಟುಂಬ ಹಿರಿಯರ ಸಲಹೆ ಪಡೆದುಮುಂದುವರಿಯುವುದು ಒಳಿತು. ಪ್ರಯಾಣಗಳಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ಬಂಧು-ಮಿತ್ರರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರಕ್ಕೆ ಬೇಕಾದ ಹೂಡಿಕೆ ಸಮಯಕ್ಕೆದೊರೆಯುವುದಿಲ್ಲ,
ಗಮನಿಸಿ:-ವೃತ್ತಿ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮಕ್ಕೂ ಕಡಿಮೆ ಫಲ ಸಿಗುತ್ತದೆ,
ಪರಿಹಾರ:-ಗ್ರಾಮ ದೇವತೆಗೆ ಪೂಜೆ ಮಾಡಿಸಿ,
*08,🦂ವೃಶ್ಚಿಕ ರಾಶಿ🦂*
📃,ಎಲ್ಲಾ ಕ್ಷೇತ್ರಗಳಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಮೌಲ್ಯಯುತ ವಸ್ತುಗಳನ್ನು ಖರೀದಿಸುತ್ತೀರಿ. ಕುಟುಂಬ ಸದಸ್ಯರ ಬೆಂಬಲ ಹೆಚ್ಚಾಗುತ್ತದೆ.ಭೂ ಸಂಬಂಧಿತ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಪುನರುಜ್ಜೀವನ ಪಡೆಯುತ್ತದೆ,
ಗಮನಿಸಿ:-ಉದ್ಯೋಗಿಗಳಿಗೆ ಅಧಿಕಾರಿಗಳ ಸಹಕಾರ ದೊರೆಯುತ್ತದೆ,
ಪರಿಹಾರ:- ನಿಮ್ಮ ಕುಲ ದೇವರಿಗೆ ಕಾಣಿಕೆ ನೀಡಿ,
*09,🏹ಧನು ರಾಶಿ🏹*
📃,ವೃತ್ತಿ ಮತ್ತು ವ್ಯಾಪಾರದಲ್ಲಿ ನಿರುತ್ಸಾಹಕರ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಮಾತಿನ ಕಲಹಗಳು ಉಂಟಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ. ದೂರ ಪ್ರಯಾಣಗಳಲ್ಲಿ ಅಡಚಣೆಗಳುಎದುರಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ,
ಗಮನಿಸಿ:-ಆರ್ಥಿಕ ಸ್ಥಿತಿ ನಿರಾಶೆ ಉಂಟುಮಾಡುತ್ತದೆ,
ಪರಿಹಾರ:- ಮನೆದೇವರ ಪ್ರಾರ್ಥನೆ ಮಾಡಿ,
*10,🐊ಮಕರ ರಾಶಿ🐊*
📃,ಆಪ್ತರಿಂದ ಮೌಲ್ಯಯುತ ಮಾಹಿತಿ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಕೈಗೊಂಡ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ. ಕುಟುಂಬ ಸದಸ್ಯರೊಂದಿಗೆ ದೈವ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ,
ಗಮನಿಸಿ:-ಆರ್ಥಿಕ ಅನುಕೂಲತೆ ದೊರೆಯುತ್ತದೆ,
ಪರಿಹಾರ:- ಗ್ರಾಮದೇವತೆಗೆ ನಿಂಬೆ ಹಣ್ಣಿನ ದೀಪ ಹಚ್ಚಿ,
*11,⚱️ಕುಂಭ ರಾಶಿ⚱️*
📃,ಪ್ರಮುಖ ವಿಷಯಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಮುಂದುವರಿಯುತ್ತೀರಿ. ಸ್ನೇಹಿತರಿಂದ ಶುಭಕಾರ್ಯ ಆಹ್ವಾನಗಳು ಬರುತ್ತವೆ. ಆಕಸ್ಮಿಕ ಧನಲಾಭಗಳು ದೊರೆಯುತ್ತವೆ. ಸ್ಥಿರಾಸ್ತಿ ವಿವಾದಗಳಿಂದ ಹೊರಬರುತ್ತೀರಿ. ವ್ಯಾಪಾರ ಉತ್ಸಾಹದಿಂದ ಸಾಗುತ್ತದೆ,
ಗಮನಿಸಿ:-ವೃತ್ತಿ ಮತ್ತು ಉದ್ಯೋಗದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಮಾನ್ಯತೆ ದೊರೆಯುತ್ತದೆ,
ಪರಿಹಾರ:-ಗಣಪತಿಯನ್ನು ಆರಾಧಿಸಿ,
*12,🐋ಮೀನ ರಾಶಿ🐋*
📃,ಕೆಲವು ವಿಷಯಗಳಲ್ಲಿ ಆಪ್ತರಿಂದ ಟೀಕೆಗಳನ್ನು ಕೇಳಬೇಕಾಗುತ್ತದೆ. ಹೊಸ ವ್ಯಾಪಾರ ಆರಂಭಕ್ಕೆ ಅಡಚಣೆಗಳು ಎದುರಾಗುತ್ತವೆ. ಪ್ರಯಾಣಗಳನ್ನು ಮುಂದೂಡುವುದು ಒಳಿತು. ಸಮರ್ಪಕ ಆದಾಯ ದೊರೆಯುವುದಿಲ್ಲ. ಕೈಗೊಂಡ ಕೆಲಸಗಳು ವಿಳಂಬವಾಗಿ ನಿಧಾನವಾಗಿ ಪೂರ್ಣಗೊಳ್ಳುತ್ತವೆ,
ಗಮನಿಸಿ:-ವೃತ್ತಿ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ,
ಪರಿಹಾರ:- ದೇವರ ಮನೆಯಲ್ಲಿ ಶಂಕುವನ್ನು ಇಟ್ಟು ಪೂಜಿಸಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading