ಮರಕತ : ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೊತ್ಸವ ಸಮಿತಿ ಸಭೆ

ಮೇ 11 : ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಬ್ರಹ್ಮಕಲಶ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದ್ದು, ಪೂರ್ವಭಾವಿಯಾಗಿ ಮೇ.08 ರಂದು ದೇವಸ್ಥಾನದ ವಠಾರದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೊತ್ಸವ ಸಮಿತಿಯ ಸಭೆಯು ನಡೆಯಿತು.
ದೇವರ ಪಂಚಲೋಹದ ಉತ್ಸವ ಮೂರ್ತಿ, ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಮೇಲ್ಚಾವಣಿಗೆ ತಾಮ್ರದ ಹೊದಿಕೆ, ಒಳಾಂಗಣ ಮತ್ತು ಹೋರಾoಗಣದ ನೆಲಕ್ಕೆ ಶಿಲೆ ಕಲ್ಲು ಹಾಸುವುದು, ವಿಶಾಲವಾಗಿ ಇರುವ ಭೋಜನ ಶಾಲೆ, ದೇವಸ್ಥಾನದ ಪ್ರಧಾನ ದೈವವಾದ ಚಾಮುಂಡಿ ಗುಡಿಯ ಪುನರ್ ನಿರ್ಮಾಣ, ದೇವಸ್ಥಾನಕ್ಕೆ ಸಂಪರ್ಕ ವ್ಯವಸ್ಥೆ ಹಾಗೂ ದೇವಳಕ್ಕೆ ಸಂಬಂಧಪಟ್ಟಂತೆ ಇನ್ನಿತರ ಅಭಿವೃದ್ಧಿ ಕೆಲಸಗಳು ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ. 
ಸಭೆಯಲ್ಲಿ ಪರಿಹಾರಾರ್ಥವಾಗಿ ಪಂಜದ ಸೀಮೆ ದೇವಸ್ಥಾನದಲ್ಲಿ ಹಾಗೂ ಗ್ರಾಮದ ಶಿವ ಕ್ಷೇತ್ರದಲ್ಲಿ ಪ್ರಾರ್ಥಿಸುವುದು, ದೇವಸ್ಥಾನದ ಪ್ರಧಾನ ದೈವವಾದ ಶ್ರೀ ಚಾಮುಂಡಿ ಕ್ಷೇತ್ರದಲ್ಲಿ ತಂಬಿಲ ಸೇವೆ ನಡೆಸಿ ಪ್ರಾರ್ಥಿಸುವುದು, ಕ್ಷೇತ್ರದ ಬ್ರಹ್ಮರಾಕ್ಷಸನಿಗೆ ಹಾಲುಪಾಯಸ, ನೈವೇದ್ಯ ಸಮರ್ಪಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ನಿರ್ಮಲ ಪದ್ಮನಾಭ ಪರಮಲೆ, ಬ್ರಹ್ಮಕಲಶೊತ್ಸವ ಸಮಿತಿ ಅಧ್ಯಕ್ಷರಾದ ವಿನ್ಯಾಸ್ ಕೊಚ್ಚಿ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading