ಉಗ್ಗವ್ವನ ಅಗ್ಗಿಷ್ಟಿಕೆ

ಹಿಂದೆನಾ ಕಾಲಲಿ ಎಲ್ಲಾ ಮನೆಗಳ್‌ಲಿ ಸಂಪ್ರದಾಯದ ಒಲೆ ಇತ್ತ್. ಉಗ್ಗವ್ವನವು ಬೆಳ್ಜರ‍್ಲಿ ಕಿಚ್ಚಿ ಮಾಡ್ರೆ ದಿನಾಯಿಡಿ ಕಿಚ್ಚಿ ರ‍್ತಿತ್ತು. ಒಲೆನಾ ಮೇಲ್ಬಾಗಲಿ ಬೆಸಗೆ ಅದರ ಅಟ್ಟಣಿಗೆ ಹೇಳ್ವೆ ಅದ್ ಇರ್‌ತ್ತಿತ್ ಅದ್ರಲಿ ಕಾಯಿ, ಹಪ್ಪಳ, ಸೆಂಡಿಗೆ, ಉಪ್ಪಣ, ಒಣಂಗುಲ್ ಮೀನು, ಮಳೆಗಾಲಲಿ ಬಿದ್ದ ಅಡ್ಕೆನಾ ಬೆಚ್ಚಾಕೆ ಹಾಕ್‌ತ್ತಿದ್ದ, ಹಿಂದೆ ಮನೆನಾ ಮರಮಟ್ಟುಂದ ಮಾಡ್‌ತ್ತಿದ್ದಾ ಹಾಂಗೆ ಮರ ಬೆಚ್ಚಾ ಇರಿಕೆ ಒಲೆಲಿ ಕಿಚ್ಚಿ ಯಾಗೋಲು ಇರ್‌ತ್ತಿತ್ತ್. ಚಳಿ, ಮಳೆಗಾಲಲಿ ಚೆಳಿಕಾಸಿಗೆಂದು ಜನಗಾ ಕಷ್ಟ ಸುಖನಾ ಮಾತಾಡಿಗೆಂದು ಕುದ್ರುಕನಾ ಒಂದು ಭಾಂದವ್ಯನೂ ಬೆಳೆತ್ತಿತ್ತು. ಇಂತಾ ಕಾಲ ಹೋಗಿ ಟ್ಯಾರೇಸ್ ಮನೆಗಾ ಎದ್ದು ನಿತ್ತಾ, ಆ ಮನೇಲಿ ಒಲೆ ಹೊತ್ತಿಸಿಕೆ ಇಲ್ಲೆ, ಗೋಡೆ ಕರಿ ಹಿಡ್ದದೆಂತಾ ಗ್ಯಾಸ್ ಬಳ್ಕೆ ಮಾಡ್ದ, ಇದರ‍್ಲಿ ಹೊಗೆ ಕುಡೆಕು, ಬೂದಿ ಹಾರ್ಸಿಗಾಂಬಾ ಕೆಲ್ಸನೇ ಇಲ್ಲೆ.. ಹೀಂಗೆ ಜನ್ರ ಸುಖ ಬೊದ್ಕು ನಡೆತ್ತಿತ್ತು ಆದರೆ ಈಗ ದೇಸ- ದೇಸಗಳ ನಡುಲಿ ಇರಾನ್ ಇರಾಕ್ ಯುದ್ಧ ನಡ್ತ್, ನಾವ್ ನೆನ್‌ಸಿದ ಇದ್ರಂದ ನಾವುಗ್ಗೆ ಏನು ತೊಂದರೆ ಇಲ್ಲೆಂತಾ. ಆದ್ರೆ…ನೋಡಿ ನಮ್ಮ ಕಾಲ್ನ ಬುಡಕ್ಕೆ ಬಾತು ಕುತ್ತು. ನಾ ಎರ‍್ಡ್ ತಿಂಗನಾ ಹಿಂದೆ ಗ್ಯಾಸ್ ಬುಕ್ ಮಾಡೊಕುಂತ ಫೋನ್ ಮಾಡ್ದೆ ಆಗ, ಸ್ವಾರಿ…ನಾಟ್ ಕಂಪ್ಲೀಟೆಡ್ ಯೂವರ್ ಬುಕ್ಕಿಂಗ್ ಅಂತ ಹೇಳ್ತ್, ಯಾಕೆಂತಾ ನಾ ತಿರ‍್ಗಿಸಿ ಕೇಳ್ಕಾನ ಅವ್ಲು ಫೋನ್ ಕಟ್ಟು ಮಾಡ್ತು, ಮತ್ತೆ ನಾ ಅಕ್ಕನೊಟ್ಟಿಗೆ ಕೇಳ್ಕಾನಾ ಮಾರಾಯ್ತಿ…..ಅಂದ್ ನಡ್ದ ಇರಾನ್ ಇರಾಕ್ ಯುದ್ಧಾಂದ 45 ದಿನ ಕಳ್ದ ಮೇಲೇನೇ ಗ್ಯಾಸ್ ಸಿಕ್ಕುದುಂತಾ ಹೇಳ್ತು… ಹಾಂಗಾರೆ ಇನ್ನು ಕಿಚ್ಚಿ ಮಾಡೊಕಸ್ಟೇ… ಅದಿಕೆ ಸೊವುದೆ ಒಟ್ಟಿಳಾನ ಅದುನು ಇಲ್ಲೆ… ಈ ಗ್ಯಾಸ್ ಗೀಜರ್‌ಂದ ನೀರಡಿ ಕಿಚ್ಚಿ ಮಾಡಿಕೂ ಕೊತ್ತಲಿಂಗೆ ಕಡ್ದಳಾನ….ಆದುನು ಇಲ್ಲೇ.. ನಿಲ್ಲು ಈಗ ಫೋನ್ ಈಸಿನೆ…ಹೇಳಿ ಕಾಲ್ ಕಟ್ಟ್ ಮಾಡಿ ಮೇಗಡೆ ಮನೆ ಅಣ್ಣಂಗೆ ಫೋನ್ ಮಾಡಿ ಸೊವುದೆ ಮಾಡಿಕೆ ಬಂದರೆನಾ ಕೇಳ್ದೆ .. ಅವ್ರ ಕೇಳ್ಕನ ಅವು ಇವುಕ್ಕೆ ಬುದ್ಧಿ ಕಲ್ಸೋಕುಂತಾ ಪುರ್‌ಸೊತು ಇಲ್ಲೆ ಹೇಳ್ದ. ನಾವ್ಗೆ ಗ್ಯಾಸ್ ವರ್ಷಕ್ಕೆ 12 ಸಿಕ್ಕುಕಾನ, ಸೊವುದೆ ಮಾಡೋವುಕ್ಕೆ ಸಂಬಳ ಜಾಸ್ತಿ ಅಂತ ಆ ಕೆಲ್ಸನಾ ಬುಟ್ಟೆ ಬುಟ್ಟಾ… ಮತ್ತೆ ಈಗ ಕರ್ದರೆ ಬಂದಾವೇನಾ.. ಅದಿಕ್ಕೆ ಹೇಳ್ದ್ ನೋಡಿ ಹಿಂದಿನ ಕಾಲದ ಸಂಪ್ರದಾಯ, ಪದ್ಧತಿ, ಕೆಲ್ಸನಾ ನಾವೂ ಯಾಗೋಳು ಕೈ ಬುಡಿಕೆ ಬೊತ್ತುಂತಾ. ದೇಶಲಿ ಯುದ್ಧ ಆಗಲಿ, ಏನೇ ಬಂದ್ರು ಅದ್ರ ಪರಿಣಾಮ ನಮ್ಮ ಮೇಲೆ ಬಿದ್ದರ್ ಹಳೆ ಬೇರುನಾ ಗಟ್ಟಿ ಮಾಡಿಕಂದರೆ ಜೀವನಕ್ಕೆ, ತಿಂಬಾಕೆ ಉಂಬಾಕೆ ಕಷ್ಟ ಆದುಲೆ. ನಾವ್ ನಂಬಿಗೆಂದು ಇದ್ದ ಈ ಗ್ಯಾಸ್‌ಂದ ಅದೆಷ್ಟೋ ಜನರ ಜೀವನಕ್ಕೆ ಕಷ್ಟ ಆವುಟು. ನಾವ್ ಎಷ್ಟೇ ಆಧುನಿಕತೆಯತ್ತಾ ಹೋದರು ನಮ್ಮ ಸಂಪ್ರದಾಯನಾ ಮರೆಕೆ ಬೊತ್ತು.. ಅದು ನಮ್ಮ ಬೊದ್ಕುನಾ ಗಟ್ಟಿ ಬೇರು.

ಸುಮಿತ್ರ ಅರಂಪಾಡಿ 
ಉಪನ್ಯಾಸಕಿ ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading