ಜಯಪ್ರಕಾಶ್ ರೈ ಯವರ ಹುಟ್ಟು ಹಬ್ಬ ವಾಲಿಬಾಲ್ ಶಿಬಿರಾರ್ಥಿ ಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಣೆ – “ಜೆ.ಪಿ ರೈ ರವರು ಕ್ರೀಡಾ ಸ್ಪೂರ್ತಿಯನ್ನು ಜೀವನದಲ್ಲಿ ಅಳವಡಿಸಿ ಪ್ರಾಕ್ಟಿಕಲ್ ಆಗಿ ತೋರಿಸಿದ್ದು ಇತರರಿಗೆ ಪ್ರೇರಣೆ” : ಕೆ.ಎಂ. ಮುಸ್ತಫ

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಸೆಕ್ರೆಟರಿ ಯಾಗಿರುವ ಸುಳ್ಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಎನ್. ಜಯಪ್ರಕಾಶ್ ರೈ ಯವರಿಗೆ 70ರ ಹುಟ್ಟು ಹಬ್ಬದ ಸಂಭ್ರಮ. ಇದೇ ಸಂದರ್ಭದಲ್ಲಿ ಜೆ.ಪಿ ಯವರ ನೇತೃತ್ವದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಸುಳ್ಯದಲ್ಲಿ ನಡೆಯುತ್ತಿರುವ ವಾಲಿಬಾಲ್ ತರಬೇತಿ ಶಿಬಿರದಲ್ಲಿ ಹಿತೈಷಿಗಳ ಕೋರಿಕೆಯಂತೆ ವಾಲಿಬಾಲ್ ಶಿಬಿರಾರ್ಥಿಗಳೊಂದಿಗೆ ಜಯಪ್ರಕಾಶ್ ರೈ ಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೆ ಎಂ. ಮುಸ್ತಫ “ಕ್ರೀಡೆಯ ಮೂಲಕ ಸುಳ್ಯವನ್ನು ದೇಶಕ್ಕೆ ಪರಿಚಯಿಸಿದ ಜೆ.ಪಿ ಯವರು ಕ್ರೀಡಾ ಸ್ಫೂರ್ತಿ ಯ ಮೂಲಕ ಸಮಾಜದ ಎಲ್ಲರನ್ನು ಒಗ್ಗೂಡಿಸಿದವರು” ಎಂದರು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಎಸ್.ಸಂಶುದ್ದೀನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ದೊಡ್ಡಣ್ಣ ಬರಮೇಲು, ಪದಾಧಿಕಾರಿಗಳಾದ ಕೆ.ಬಿ. ಇಬ್ರಾಹಿಂ, ಜಯಪ್ರಕಾಶ್ ಕುಡೆಕಲ್ಲು, ಶಾಫಿ ಕುತ್ತಾಮೊಟ್ಟೆ, ಭವಾನಿ ಶಂಕರ ಕಲ್ಮಡ್ಕ, ರಾಜು ಪಂಡಿತ್, ನಿತಿನ್ ಗೂನಡ್ಕ, ನ್ಯಾಷನಲ್ ಕೋಚ್ ಮನೋಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗ ಕಾರ್ಯದರ್ಶಿ ಮೂಸ ಪೈoಬಚ್ಚಾಲ್, ಎಸ್.ಸಿಕ್ಸ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಕರ್, ಶಿವಕುಮಾರ್ ಕಂಡಡ್ಕ, ಶುಭಕರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಗೋಕುಲ್ ದಾಸ್ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading