ಸುಬ್ರಹ್ಮಣ್ಯದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಗ್ರಾಮ ಸಮಿತಿ ಮಹಾ ಅಭಿಯಾನ

ಸುಬ್ರಹ್ಮಣ್ಯ ಮೇ 10 : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗೌಡ ಸಮುದಾಯ ಭವನದ ನಿರ್ಮಾಣಕ್ಕಾಗಿ ಮಾಹಿತಿ ನೀಡಿ ಧನ ಸಂಗ್ರಹಿಸುವ ಎರಡನೆಯ ಹಂತದ ಬೃಹತ್ ಅಭಿಯಾನ ಸುಬ್ರಹ್ಮಣ್ಯದಲ್ಲಿ ಶನಿವಾರ ಜರಗಿತು. ಕಡಬ ತಾಲೂಕಿನ 42 ಗ್ರಾಮಗಳಲ್ಲಿ ಈಗಾಗಲೇ ಮೊದಲ ಹಂತದ ಅಭಿಯಾನ ಪೂರ್ತಿಗೊಂಡು ಎರಡನೇ ಹಂತದ ಅಭಿಯಾನವನ್ನು ಈಗಾಗಲೇ ಐನೆಕಿದು ಹಾಗೂ ರೆಂಜಿಲಾಡಿಯಲ್ಲಿ ಆಯೋಜಿಸಲಾಗಿತ್ತು. ಶನಿವಾರ ಸುಬ್ರಹ್ಮಣ್ಯದ ಡಾ. ಶಿವಕುಮಾರ್ ಹೊಸಳ್ಳಿಕೆ ಅವರ ನಿವಾಸದಲ್ಲಿ ನಡೆದ ಎರಡನೇ ಹಂತದ ಅಭಿಯಾನದಲ್ಲಿ ಕಡಬ ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ನೇತೃತ್ವದಲ್ಲಿ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮತ್ತು ಸುಬ್ರಹ್ಮಣ್ಯದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಅಧ್ಯಕ್ಷರಾದ ಡಾ. ಎ.ಎ. ತಿಲಕ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ ಬೈಲು, ಉಪಾಧ್ಯಕ್ಷರಾದ ತಮ್ಮಯ್ಯ ಗೌಡ, ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ, ಸುಬ್ರಹ್ಮಣ್ಯ ವಲಯ ಅಧ್ಯಕ್ಷರಾದ ಉಮೇಶ್ ಹೊಸಳ್ಳಿಕೆ, ಕಡಬ ತಾಲೂಕು ನಿರ್ದೇಶಕ ಬಾಲಕೃಷ್ಣ ಗೌಡ ಕೋಡಿಂಬಾಳ, ಸಲಹೆಗಾರರಾದ ಡಾ. ಶಿವಕುಮಾರ್ ಹೊಸಳ್ಳಿಕೆ, ಗ್ರಾಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ನಡುತೋಟ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 11 ವಿಭಾಗಗಳಲ್ಲಿ ಕಡಬ ತಾಲೂಕು ಹಾಗೂ ಸುಬ್ರಹ್ಮಣ್ಯ ಗ್ರಾಮದ ಮುಖಂಡರು ಸೇರಿ ಮೂರು ನಾಲ್ಕು ಜನರೊಳಗೊಂಡಂತೆ ಅಭಿಯಾನವನ್ನು ಕೈಗೊಳ್ಳಲಾಯಿತು. ಸುಬ್ರಹ್ಮಣ್ಯ ಪಟ್ಟಣ, ನೂಚಿಲ, ದೇವರಗದ್ದೆ, ಅಗೋಳಿಕಜೆ, ಕುಲ್ಕುಂದ ಕುದುರೆ ಮಜಲು, ಬಿಡಿನಗದ್ದೆ, ದೋಣಿಮಕ್ಕಿ, ಹೊಸಳ್ಳಿಕೆ, ಪರ್ವತಮಕ್ಕಿ, ಪಳ್ಳಿಗದ್ದೆ ಅಗ್ರಹಾರ ಕಲ್ಲಪಣೆ ಒಳಗೊಂಡಂತೆ ಸುಮಾರು 250ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading