ಕಾಣಿಯೂರು : ನ್ಯಾಯವಾದಿ ನಿಶಾಂತ್ ರವರ ಕಛೇರಿ ಶುಭಾರಂಭ

ನ್ಯಾಯವಾದಿ ನಿಶಾಂತ್ ರವರ ಕಛೇರಿಯು ಎ.30ರಂದು ಕಾಣಿಯೂರಿನ ಎಂ.ಟಿ.ಸಿ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ನಿಶಾಂತ್ ಅವರ ತಂದೆ ಭಾಸ್ಕರ ಪೂಜಾರಿ ಹಾಗೂ ತಾಯಿ ವನಿತಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ನ್ಯಾಯವಾದಿಗಳು ಹಾಗೂ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ, ಹಿರಿಯ ನ್ಯಾಯವಾದಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯ ಕುಮಾರ್ ಸೊರಕೆ, ಹಿರಿಯ ನ್ಯಾಯವಾದಿಗಳು ಹಾಗೂ ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಶೀನಪ್ಪ ಗೌಡ ಬೈತಡ್ಕ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ನ್ಯಾಯವಾದಿಗಳಾದ ಮಹೇಶ್ ಕಜೆ, ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾದ ಬಿ.ಎ ವಸಂತ ಪೂಜಾರಿ ಕೆಲಂಬೀರಿ, ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿಗಳಾದ ಮಹೇಶ್.ಕೆ ಸವಣೂರು, ವಕೀಲರಾದ ಶ್ಯಾಮ್ ಪ್ರಸಾದ್ ಕೈಲಾರ್, ಕೃಷ್ಣಪ್ರಸಾದ್ ನನ್ಸಾರ್, ಕುಮಾರ್ ಎ.ಪಿ, ರಾಧಾಕೃಷ್ಣ ರೈ ಕಟ್ಟಬೀಡು, ರಾಜನಾರಾಯಣ ಮಳಿ, ಗುರುಪ್ರಸಾದ್.ಪಿ, ಕಾರ್ತಿಕ್, ಲತಾ ವಸಂತ ಪೂಜಾರಿ, ಜಯಂತ ಸುವರ್ಣ ಕೆಲಂಬೀರಿ, ಶುಶಾಂತ್ ಎಣ್ಮೂರು, ಸ್ವಸ್ಟಿಕ್ ಸುವರ್ಣ, ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್‌ ಮೇರ್ಕಜೆ, ಉದ್ಯಮಿ ಚಂದ್ರಶೇಖ‌ರ್ ಬರೆಪ್ಪಾಡಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯಕುಮಾರ್ ಅಗಳಿ, ರಘುನಾಥ ರೈ ಕಟ್ಟಬೀಡು, ಮನ್ವಿತ್ ಸುವರ್ಣ, ಎಣ್ಮೂರು ರಘುನಾಥ ರೈ ಕೆ.ಎನ್, ನ್ಯಾಯವಾದಿ ರಾಧಾಕೃಷ್ಣ ರೈ ಕೆ, ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್‌.ಜಿ ಲೋಕನಾಥ ರೈ ಪಟ್ಟೆ, ಪಂಜಿಮೊಗರು ರಘುನಾಥ ರೈ, ಜಯರಾಮ ರೈ ಎಣ್ಮೂರು, ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ ಮತ್ತಿತರರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಗಿರೀಶ್ ಮಳಿ ದಂಪತಿಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ವಕೀಲರಾದ ತೇಜಸ್ ನಾಯಕ್ ಕೊಂಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading