ಇಂದಿನ(ಏಪ್ರಿಲ್ 24) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು ಮತ್ತು ರಬ್ಬರ್ ಧಾರಣೆಯಲ್ಲಿ ಮತ್ತೆ ಏರಿಕೆ..! ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 24 ಏಪ್ರಿಲ್ 2026
ವಾರ : ಶುಕ್ರವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 24) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 290-445-473/475
ಹಳೆ ಅಡಿಕೆ : 420-450-547/550
ಡಬಲ್ ಚೋಲ್ : 420-450-547/550
ಫಟೋರ : 280-400 ರಿಂದ 405
ಉಳ್ಳಿಗಡ್ಡೆ : 165-290
ಕರಿಗೋಟು : 230-265
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ನಿನ್ನೆ ಏಪ್ರಿಲ್ 23ಕ್ಕೆ ಹೋಲಿಸಿದರೆ ಇಂದು(ಏಪ್ರಿಲ್ 24) ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೊಸ ಅಡಿಕೆ ಮತ್ತು ಹಳೆ ಅಡಿಕೆ ದರಗಳು ಇಂದೂ ಕೂಡ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಡಬಲ್ ಚೋಲ್ ಗರಿಷ್ಠ 550 ರೂಪಾಯಿ ಇದ್ದರೆ, ಫಟೋರ ಮತ್ತು ಕರಿಗೋಟು ಬೆಲೆಗಳೂ ಸಹ ಇಂದಿನ ಮಾರುಕಟ್ಟೆಯಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 580-680
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-310
ಕೊಬ್ಬರಿ : 150-190
ನಿನ್ನೆ ಏಪ್ರಿಲ್ 23ರಂದು ಗರಿಷ್ಠ 675 ರೂಪಾಯಿ ಇದ್ದ ಕಾಳುಮೆಣಸು ಇಂದು ಏಪ್ರಿಲ್ 24ರಂದು ಪ್ರತಿ ಕೆಜಿಗೆ 5 ರೂಪಾಯಿ ಏರಿಕೆ ಕಂಡು 680 ರೂಪಾಯಿಗಳಿಗೆ ತಲುಪಿದೆ. ಆದರೆ, ಹಸಿ ಕೊಕ್ಕೋ, ಒಣ ಕೊಕ್ಕೋ ಮತ್ತು ಕೊಬ್ಬರಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ, ಇವು ಇಂದೂ ಕೂಡ ನಿನ್ನೆಯ ದರದಲ್ಲಿ ಸ್ಥಿರವಾಗಿವೆ.

ರಬ್ಬರ್ ಧಾರಣೆ
ಗ್ರೇಡ್ : 235.00
ಲಾಟ್ : 205.00
ಸ್ಕ್ರ್ಯಾಪ್ ಪ್ರಥಮ ದರ್ಜೆ : 145.00
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 136.00
ರಬ್ಬರ್ ಮಾರುಕಟ್ಟೆಯಲ್ಲಿ ಇಂದು ಕೂಡ ಸಕಾರಾತ್ಮಕ ಚಲನೆ ಕಂಡುಬಂದಿದೆ. ನಿನ್ನೆ ಏಪ್ರಿಲ್ 23ಕ್ಕೆ ಹೋಲಿಸಿದರೆ ಇಂದು ಏಪ್ರಿಲ್ 24ರಂದು ಗ್ರೇಡ್ ರಬ್ಬರ್ ಬೆಲೆಯಲ್ಲಿ ಪ್ರತಿ ಕೆಜಿಗೆ 1.50 ರೂಪಾಯಿ ಏರಿಕೆಯಾಗಿದ್ದು, 235 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ಲಾಟ್ ರಬ್ಬರ್ ಮತ್ತು ಸ್ಕ್ರ್ಯಾಪ್ ವಿಭಾಗದಲ್ಲೂ ತಲಾ 1 ರೂಪಾಯಿ ಏರಿಕೆ ದಾಖಲಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading