ಸುಬ್ರಹ್ಮಣ್ಯದಲ್ಲಿ 24×7 ತುರ್ತು ಚಿಕಿತ್ಸಾ ಘಟಕಕ್ಕಾಗಿ ಆರೋಗ್ಯ ಸಚಿವರಿಗೆ ಮನವಿಯೊಂದಿಗೆ ಒತ್ತಾಯ

ಸುಬ್ರಹ್ಮಣ್ಯ ಏಪ್ರಿಲ್ 19 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದು ಇಲ್ಲಿಯ ಅತ್ಯುನ್ನತ ಸೇವೆಗಳಾದ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮುಂತಾದ ಸೇವೆಗಳನ್ನು ಪೂರೈಸಿ ತೆರಳುತ್ತಾರೆ. ಆದರೆ ಇಲ್ಲಿ ಅನಾರೋಗ್ಯಕ್ಕೆ ತುತ್ತಾದ ಭಕ್ತರಿಗೆ ಅಥವಾ ತೀವ್ರತರದ ಆರೋಗ್ಯದ ತೊಂದರೆ ಸಂಭವಿಸಿದಲ್ಲಿ ಭಕ್ತರಿಗಾಗಲಿ, ಸಾರ್ವಜನಿಕರಿಗೆ ಆಗಲಿ 24×7 ತುರ್ತು ಚಿಕಿತ್ಸಾ ಘಟಕ ಇಲ್ಲದೆ ಈ ಹಿಂದೆ ಹಲವು ಮರಣಗಳು ಸಂಭವಿಸಿದ ನಿದರ್ಶನಗಳಿವೆ. ಈ ಹಿಂದೆ ಹಲವು ಬಾರಿ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಏನು ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯ ಆರೋಗ್ಯ ಸಚಿವರು ಇದರ ಬಗ್ಗೆ ಕೂಡಲೇ ಗಮನ ಹರಿಸಿ ಇಲ್ಲಿಗೆ ಅಗತ್ಯ 24×7 ತುರ್ತು ಚಿಕಿತ್ಸಾ ಘಟಕವನ್ನು ವ್ಯವಸ್ಥೆ ಮಾಡಬೇಕಾಗಿ ಸುಬ್ರಹ್ಮಣ್ಯದ ನಿಯೋಗ ಶನಿವಾರ ಮಂಗಳೂರಿನಲ್ಲಿ ಆರೋಗ್ಯ ಸಚಿವರಲ್ಲಿ ಮನವಿ ನೀಡಿ ಒತ್ತಾಯಿಸಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶೀಘ್ರದಲ್ಲಿ 24×7 ತುರ್ತು ಚಿಕಿತ್ಸಾ ಘಟಕವನ್ನು ಆರಂಭಿಸುವ ಬಗ್ಗೆ ಭರವಸೆ ನೀಡಿರುತ್ತಾರೆ. ನಿಯೋಗದಲ್ಲಿ ಶಿವರಾಮ ರೈ, ರಾಜೇಶ್ ಎನ್ ಎಸ್, ಡಾ. ಶಿವಕುಮಾರ್ ಹೊಸಳ್ಳಿಕೆ, ಡಾ.ರವಿ ಕಕ್ಕೆಪದವು, ಪವನ್ ಎಂ.ಡಿ, ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಅತ್ಯಾಡಿ, ಲೋಕೇಶ ಬಿ.ಎನ್ ಹಾಗೂ ಭರತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading