ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಸಡಗರ ; ಶ್ರೀ ದೇವರ ದೊಡ್ಡ ಬೆಳಗು ಉತ್ಸವ – ದರ್ಶನಬಲಿ – ಬಟ್ಟಲು ಕಾಣಿಕೆ – ಇಂದು ರಾತ್ರಿ ದೇವರಿಗೆ ವಾಲಸಿರಿ ಉತ್ಸವ – ನಾಳೆ ಛತ್ರಪತಿ ಶಿವಾಜಿ ತುಳು ನಾಟಕ

ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವಸಂಪ್ರದಾಯದಂತೆ ಕಾಲಾವಧಿ ಜಾತ್ರೆಯು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಭಕ್ತಿಸಡಗರದೊಂದಿಗೆ ನಡೆಯುತ್ತಿದ್ದು, ಎ‌.17ರಂದು ಬೆಳಿಗ್ಗೆ ಶ್ರೀ ದೇವರ ಉತ್ಸವ ಬಲಿ, ಮಧ್ಯಾಹ್ನ ಪಯ್ಯೋಳಿ, ರಾತ್ರಿ ದೊಡ್ಡಬೆಳಗು ಉತ್ಸವ ನಡೆಯಿತು.
ಎ.18ರಂದು ಬೆಳಿಗ್ಗೆ ಶ್ರೀದೇವರ ದೊಡ್ಡ ದರ್ಶನಬಲಿ, ಬಟ್ಟಲುಕಾಣಿಕೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ವಾಲಸಿರಿ ಉತ್ಸವ ಜರುಗಲಿದೆ. 
ಎ.19ರಂದು ನಾಳೆ ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು. ಸಾಯಂಕಾಲ ಬಲಿ, ದೇವರ ಅವಭೃತಸ್ನಾನವಾಗಿ ಬಂದು ದರ್ಶನಬಲಿ, ಬಟ್ಟಲುಕಾಣಿಕೆ, ಧ್ವಜಾವರೋಹಣ ನಡೆಯಲಿದೆ. ಎ.20ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.
ನಾಳೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದಲ್ಲಿ ತುಳು ನಾಟಕ ‘ಛತ್ರಪತಿ ಶಿವಾಜಿ’ ಪ್ರದರ್ಶನಗೊಳ್ಳಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ. ಕೇಶವ ಕೊಳಲುಮೂಲೆ, ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ತಮಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅರ್ಚಕ ಕೇಶವ ಮೂರ್ತಿ ಭಟ್, ಸತ್ಯಪ್ರಸಾದ್ ಗಬ್ಬಲ್ಕಜೆ, ಶ್ರೀಮತಿ ಮಾಲತಿ ಹಾಸ್ಪಾರೆ, ಶ್ರೀಮತಿ ಚಂಚಲಾಕ್ಷಿ ಕುಲ್ಚಾರು, ತಿಮ್ಮಯ್ಯ ಮೆತ್ತಡ್ಕ, ಬಾಲಕೃಷ್ಣ ಕುಂಟುಕಾಡು, ವಸಂತ ಪೆಲ್ತಡ್ಕ, ಯು.ಕೆ. ತೀರ್ಥರಾಮ ಉಳುವಾರು ಸೇರಿದಂತೆ ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಸದಸ್ಯರುಗಳು, ಉತ್ಸವ ಸಮಿತಿಯ ವಿವಿಧ ಉಪಸಮಿತಿಯ ಸಂಚಾಲಕರುಗಳು, ಸದಸ್ಯರುಗಳು ಸೇರಿದಂತೆ ಸುಳ್ಯ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading