ಬೈತಡ್ಕ ಊರೂಸ್: ಮಾಲೆಂಗ್ರಿ ವಾಟ್ಸಪ್ ಗ್ರೂಪ್  ನೇತೃತ್ವದಲ್ಲಿ ಸಾವಿರ ಕೆಜಿ ಸಕ್ಕರೆ ಸಂಗ್ರಹಿಸಿ ಹಸ್ತಾಂತರ

ಬೆಳ್ಳಾರೆ ಏಪ್ರಿಲ್ 17 : ಶತಮಾನಗಳ ಇತಿಹಾಸ ಹೊಂದಿರುವ ಧಾರ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಬೈತಡ್ಕ ಜಮಾ ಮಸೀದಿ ಮತ್ತು ದರ್ಗಾ ಶರೀಫ್ ಸೌಹಾರ್ದತೆಗಾಗಿ ಪ್ರಸಿದ್ಧವಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುವ ಊರೂಸ್ ಕಾರ್ಯಕ್ರಮದ ಅಂಗವಾಗಿ, ಎಪ್ರಿಲ್ 17 ರಿಂದ 27 ರವರೆಗೆ ನಡೆಯುವ ಊರೂಸ್ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ತಂಪು ಪಾನೀಯ ವಿತರಿಸಲು ಅಗತ್ಯವಿರುವ 1,000 ಕೆ.ಜಿ ಸಕ್ಕರೆಯ ವ್ಯವಸ್ಥೆಯನ್ನು ಶಾಪಿ BM ಮಾಲೆಂಗ್ರಿ(ಅಡ್ಮಿನ್) ಅವರ ನೇತೃತ್ವದಲ್ಲಿ “ಮಾಲೆಂಗ್ರಿ ಫ್ರೆಂಡ್ಸ್ ವಾಟ್ಸಪ್ ಗ್ರೂಪ್” ಮುಖಾಂತರ ಯಶಸ್ವಿಯಾಗಿ 2ನೇ ಬಾರಿ ನೀಡಲಾಗಿದೆ. ಜಾತಿ-ಮತ-ಬೇದವಿಲ್ಲದೆ ಒಟ್ಟಾಗಿ ಸುಮಾರು 10 ಟನ್ ಸಕ್ಕರೆಯನ್ನು ಸಂಗ್ರಹಿಸಿ, ಇಂದು ಶುಕ್ರವಾರ ಮಧ್ಯಾಹ್ನ ದರ್ಗಾ ಸ್ಥಳಕ್ಕೆ ತಲುಪಿಸುವ ಮೂಲಕ ಊರವರ ಪ್ರಶಂಸೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು, ಕಳೆದ ತಿಂಗಳಲ್ಲಿ ಇದೇ ವಾಟ್ಸಪ್ ಗ್ರೂಪ್ ಮುಖಾಂತರ ಸುಮಾರು 2.5 ಲಕ್ಷ ರೂಪಾಯಿ ಸಂಗ್ರಹಿಸಿ, ಊರಿನಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಜನಮನ ಗೆದ್ದಿದ್ದರು. ಇನ್ನೂ ವಿಶೇಷವಾಗಿ, ಈ ವರ್ಷದ ಊರೂಸ್ ಕೇವಲ ಧಾರ್ಮಿಕ ವಿಧಿ-ವಿಧಾನಗಳಿಗೆ ಮಾತ್ರ ಸೀಮಿತವಾಗದೆ, ಸಾಮಾಜಿಕ ಬದ್ಧತೆಯನ್ನೂ ಪ್ರತಿಬಿಂಬಿಸುವಂತೆ 10 ಬಡ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. (ವರದಿ:- ಮನ್ಸೂರ್ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading