ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ಪುನರ್ ಪ್ರತಿಷ್ಠೆ – ಏ.03 ಮತ್ತು 04 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.‌ ಏಪ್ರಿಲ್ 03 ಮತ್ತು 04ರಂದು ಶ್ರೀ ಮಲೆ ದೈವಗಳ ನೇಮೋತ್ಸವವು(ಜಾಲಾಟ) ನಡೆಯಲಿದೆ.  
ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು, ಎ.01ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪುಣ್ಯಾಹ, ಸ್ಥಳಶುದ್ಧಿ, ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಅನ್ನಸಂತರ್ಪಣೆ ನಡೆಯಿತು.‌ 
ಎ.02ರಂದು ಪ್ರಾತ:ಕಾಲ ಗಣಪತಿ ಹೋಮ, ಪ್ರತಿಷ್ಠಾಂಗ ಹೋಮ, ಶ್ರೀ ಮಲೆ ದೈವಗಳ ಪ್ರತಿಷ್ಠೆ, ಗುಳಿಗ ದೈವದ ಶಿಲಾ ಪ್ರತಿಷ್ಠೆ(ಅಂಬ್ರೋಳಿ), ಮಹಾಪೂಜೆ ನಡೆದು, ಶ್ರೀ ದೈವಗಳ ಗುಂಡದ ಕೋಲು ಹೊಡೆಯುವ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತೀರ್ಥರಾಮ ಹೆಚ್.ಬಿ. ಹೊಸೋಳಿಕೆ, ಗೌರವಾಧ್ಯಕ್ಷ ಗಂಗಾಧರ ಗೌಡ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರವೀಶ್ ಮೊಟ್ಟಮನೆ, ಕೋಶಾಧಿಕಾರಿ ಮಾಧವ ಮೂಕಮಲೆ, ಊರುಕಟ್ಟಿನ ಪ್ರಮುಖರಾದ ವೆಂಕಟ್ ದಂಬೆಕೋಡಿ, ಕೇಶವ ಎಚ್.ಬಿ. ಹೊಸೋಳಿಕೆ, ವೆಂಕಟ್ ವಳಲಂಬೆ, ಮೊಟ್ಟೆಮನೆ, ಕಡೋಡಿ, ಪುರ್ಲುಮಕ್ಕಿ, ಕಾಜಿಮಡ್ಕ, ದೋಲನ, ಮೋಟ್ನೂರು ಕುಟುಂಬಸ್ಥರು ಹಾಗೂ ಊರುಕಟ್ಟಿನ ಭಕ್ತಾಧಿಗಳು ಉಪಸ್ಥಿತರಿದ್ದರು.  

. . . . . . . . .

ಸಾಹಿತಿ ಎ.ಕೆ. ಹಿಮಕರ ಅವರು  ನೇರಳಾಡಿ ಬದಿಕಾನ ಶ್ರೀ ಮಲೆ ಉಳ್ಳಾಕುಲು ಮತ್ತು ಪರಿವಾರ ದೈವಗಳ ಕುರಿತಾಗಿ ಬರೆದ “ನೇರಳಾಡಿ ಬದಿಕಾನ ಮಾಡ” ಪುಸ್ತಕ ಬಿಡುಗಡೆ ಏ.02 ರಂದು ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಸಂದರ್ಭ ಬಿಡುಗಡೆಗೊಂಡಿತು.

. . . . . . .


ಸಂಜೆ ಆಶ್ಲೇಷ ಬಲಿ, ಪ್ರಸಾದ ವಿತರಣೆ, ರಾತ್ರಿ ದಂಬೆಕೋಡಿ ಭಂಡಾರ ಛಾವಡಿಯಿಂದ ಬದಿಕಾನದ ಮಾಡಕ್ಕೆ ದೈವಗಳ ಭಂಡಾರ ತರುವ ಕಾರ್ಯಕ್ರಮ ನಂತರ ನೇರಳಾಡಿ ಕೊಡಿಅಡಿಗೆ ಭಂಡಾರ ಹೋಗುವ ಕಾರ್ಯಕ್ರಮ ನಡೆಯಲಿದೆ.
ದೈವಗಳ ನೇಮೋತ್ಸವ(ಜಾಲಾಟ) : ಏ.03ರಂದು ಪ್ರಾತ:ಕಾಲ ಶ್ರೀ ಉಳ್ಳಾಕುಲು ದೈವದ ನೇಮ, ಬೆಳಿಗ್ಗೆ ಶ್ರೀ ಪುರುಷ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ‌. ಅಪರಾಹ್ನ ಶ್ರೀ ಮಲೆ ಚಾಮುಂಡಿ ದೈವದ ನೇಮ, ಸಂಜೆ ಕಾರಣಿಕದ ಅಜ್ಜಿ ದೈವದ ನೇಮ(ಅಮ್ಮಜ್ಜಿ) ಪ್ರಾರಂಭಗೊಂಡು ಕೂರ್ಜುಗಳೊಂದಿಗೆ ತನ್ನ ಸ್ಥಾನಗಳಿಗೆ ಹೋಗುವುದು, ರಾತ್ರಿ ಅಜ್ಜಿ ದೈವಕ್ಕೆ ಹರಿಕೆ ಒಪ್ಪಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ‌.   
ಎ.04ರಂದು ಪ್ರಾತ:ಕಾಲ ಶ್ರೀ ಶಿರಾಡಿ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಗುಳಿಗ ದೈವದ ಕೋಲ, ಸಂಜೆ ಶ್ರೀ ದೈವಗಳ ಭಂಡಾರವನ್ನು ಬದಿಕಾನದ ಮಾಡಕ್ಕೆ ತಂದು ನಂತರ ದಂಬೆಕೋಡಿ ಭಂಡಾರದ ಚಾವಡಿಗೆ ತರಲಾಗುವುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading