ಏ.01 ರಿಂದ ಜನಗಣತಿ ಪ್ರಾರಂಭ ; ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ – ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ

ಏ.01 ರಿಂದ ಪ್ರಾರಂಭವಾಗಲಿರುವ ಜನಗಣತಿ ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯುತ್ತಿದ್ದು, ಕೋವಿಡ್ ಕಾರಣದಿಂದ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಈಗ ನಡೆಸಲಾಗುತ್ತಿದೆ.
ತ್ವರಿತ ದತ್ತಾಂಶ ಸಂಗ್ರಹಣೆ : ಹಿಂದೆ ಕಾಗದದ ಪಾರ್ಮ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಸ್ಕ್ಯಾನ್ ಮಾಡಿ ಫಲಿತಾಂಶ ಪ್ರಕಟಿಸಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೆ ಈಗ ಡಿಜಿಟಲ್ ರೂಪದಲ್ಲಿ ಮಾಹಿತಿ ನೇರವಾಗಿ ಸರ್ವರ್ ಹೋಗುವುದರಿಂದ ಜನಗಣತಿ ವರದಿಗಳು ಹಳೆಯ ಪದ್ದತಿಗಿಂತ ಬಹಳ ಬೇಗ ಲಭ್ಯವಾಗಲಿದೆ.
ಸಂಪೂರ್ಣ ಡಿಜಿಟಲೀಕರಣ : ಈ ಬಾರಿ ಸಾಂಪ್ರದಾಯಿಕ ಪೆನ್ನು ಮತ್ತು ಕಾಗದದ ಬಳಕೆಯ ಬದಲಿಗೆ ಸಂಪೂರ್ಣವಾಗಿ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಗಣತಿದಾರರು ತಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಗಳನ್ನು ಬಳೆಸಲಿದ್ದಾರೆ.
ಸ್ವಯಂ ಗಣತಿ : ಈ ಜನಗಣತಿಯಲ್ಲಿ ಸಾರ್ವಜನಿಕರಿಗೆ ಒಂದು ವಿಶೇಷ ಅವಕಾಶವಿದೆ. ನಾಗರಿಕರು ತಾವೇ ಸ್ವತಃ ಜನಗಣತಿ ಪೋರ್ಟಲ್ ಗೆ ಲಾಗಿನ್ ಆಗಿ ತಮ್ಮ ಕುಟುಂಬದ ವಿವರಗಳನ್ನು ಅಪ್‌ಡೇಟ್ ಮಾಡಬಹುದು. ಇದರಿಂದ ಎಣಿಕೆದಾರರು ಮನೆಗೆ ಬಂದಾಗ ಸಮಯ ಉಳಿತಾಯವಾಗುತ್ತದೆ.
ಬಹುಭಾಷಾ ಸೌಲಭ್ಯ : ಡಿಜಿಟಲ್ ಅಪ್ಲಿಕೇಶನ್ ಅನ್ನು ಭಾರತದ ಸುಮಾರು 16 ಮುಖ್ಯ ಭಾಷೆಗಳಲ್ಲಿ ರೂಪಿಸಲಾಗಿದ್ದು, ಇದು ದೇಶದ ವಿವಿಧ ಭಾಗಗಳಲ್ಲಿ ನಿಖರವಾದ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಲಿದೆ.
ನಿಖರವಾದ ನಕ್ಷೆ, ಜಿಯೊ-ರೆಫರೆನ್ಸಿಂಗ್ : ಮಾಹಿತಿ ಸಂಗ್ರಹಿಸುವಾಗ ಸ್ಥಳದ ನಿಖರತೆಗಾಗಿ ಜಿಯೊ-ರೆಫರೆನ್ಸಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. ಇದು ಪ್ರತೀ ವಾರ್ಡ್ ಅಥವಾ ಹಳ್ಳಿಯ ವ್ಯಾಪ್ತಿಯನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಸಮಗ್ರ ಡೇಟಾಬೇಸ್ ಸೃಷ್ಟಿ : ಈ ಜನಗಣತಿಯ ದತ್ತಾಂಶವನ್ನು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ನವೀಕರಿಸಲು ಬಳಸಬಹುದು. ಇದರಿಂದ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಪೂರಕವಾಗಲಿದೆ.

ಪ್ರಯೋಜನಗಳು
ಪಾರದರ್ಶಕತೆ : ದತ್ತಾಂಶ ತಿದ್ದಲು ಅಥವಾ ತಪ್ಪು ಮಾಹಿತಿ ದಾಖಲಿಸುವ ಅವಕಾಶ ಕಡಿಮೆ.
ಮಿತವ್ಯಯಿ : ಲಕ್ಷಾಂತರ ಟನ್ ಕಾಗದದ ಬಳಕೆ ತಪ್ಪುತ್ತದೆ.
ನೀತಿ ನಿರೂಪಣೆ : ನಿಖರ ಅಂಕಿ-ಅಂಶ ಹಿನ್ನೆಲೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಯೋಜನೆಗಳನ್ನು ರೂಪಿಸಲು ಸುಲಭ.

ಹೇಗೆ ಮಾಡುವುದು? : ಅಧಿಕೃತ ಪೋರ್ಟಲ್ se.census.gov.in ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ದಾಖಲಿಸಬೇಕು. ನಂತರ ಬರುವ ಒಟಿಪಿ ಮೂಲಕ ಲಾಗಿನ್ ಆಗಬೇಕು. ಇದಾದ ನಂತರ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಬೇಕು. ಆನಂತರ ಡಿಜಿಟಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಬೇಕು. 33 ಪ್ರಶ್ನೆಗಳಿಗೆ ಉತ್ತರ ದಾಖಲಿಸಬೇಕು. ಇದಾದ ನಂತರ ಎಸ್‌ಇ ಐಡಿ ನಂಬರ್ ಸಿಗಲಿದ್ದು, ಅದನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಏಪ್ರಿಲ್ 16ರ ನಂತರ ಮನೆಗಳಿಗೆ ಗಣತಿದಾರರು ಭೇಟಿ ನೀಡಿದಾಗ ಅವರಿಗೆ ಎಸ್ಇ ಐಡಿ ನಂಬರ್ ಅನ್ನು ನೀಡಿದರೆ ನೀವು ಕೊಟ್ಟಿರುವ ಮಾಹಿತಿಯನ್ನು ಅವರು ದೃಢೀಕರಿಸಲಿದ್ದಾರೆ. ನಂತರ ಮುಂದಿನ ಫೆಬ್ರವರಿ 2027ರಲ್ಲಿ ಅಂತಿಮ ಹಂತದ ಜನಗಣತಿ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading