ದ್ವಾದಶ ರಾಶಿಗಳ ದಿನ ಭವಿಷ್ಯ


ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197
ದಿನಾಂಕ:31-03-2026 ಮಂಗಳವಾರ
*01,🐏ಮೇಷರಾಶಿ🐏*
📃,ಇದುವರೆಗೂ ಅನುಭವಿಸಿದ ಸಂಕಟಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಈ ದಿನ ಹೊಸ ಉತ್ಸಾಹ ನೆಮ್ಮದಿ ಮೂಡುವುದು. ಬಂಧುಗಳಿಂದ ಮತ್ತು ಮಿತ್ರರಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮಾತುಗಳು ನಿಮ್ಮನ್ನು ಗೆಲ್ಲಿಸಲಿವೆ. ಜನರ ನಡುವೆ ಗುರುತಿಸಿಕೊಳ್ಳುವಿರಿ,
ಗಮನಿಸಿ:- ಇಂದು ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ,
*02,🐂ವೃಷಭರಾಶಿ🐂*
📃,ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಹಣದ ಪರದಾಟ ತಪ್ಪುವ ಯೋಜನೆಗಳನ್ನು ನಿಮ್ಮ ದೈವ ರೂಪಿಸುತ್ತದೆ. ಆದರೆ ಅದಕ್ಕಾಗಿ ಅವಸರ ಪಡಬೇಡಿ.ಬರುವಹಣಕಾಸಿನಲ್ಲಿ ಉಳಿತಾಯ ಮಾಡಿ,
ಗಮನಿಸಿ:-ಸಾಲ ತೀರಿಸುವ ಬಗ್ಗೆ ಗಮನ ನೀಡಿ,
ಪರಿಹಾರ:-ಶ್ರೀಅನ್ನಪೂರ್ಣೇಶ್ವರಿಯನ್ನು ಸ್ಮರಿಸುತ್ತಅನಾಥರಿಗೆ ಅನ್ನದಾನ ಮಾಡಿ,
*03,👥ಮಿಥುನ ರಾಶಿ👥*
📃,ಮಿತ್ರರ ಜೊತೆ ಭೂರಿ ಭೋಜನ ಸವಿಯುವ ಭಾಗ್ಯ ನಿಮ್ಮದಾಗುವುದು. ಮತ್ತು ಸ್ನೇಹಿತರಿಂದ ಉತ್ತಮ ಸಲಹೆಗಳು ಕೇಳಿಬರುವುವು. ಅವನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು. ನಿಮ್ಮ ಸೌಮ್ಯ ನಡವಳಿಕೆಯ ಪರಿಣಾಮದಿಂದ ಉತ್ತಮ ಫಲವನ್ನು ಹೊಂದುವಿರಿ. ಕೆಲಸದಲ್ಲಿ ಬಡ್ತಿ ದೊರೆಯುವುದು. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು,
ಗಮನಿಸಿ:-ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ತರುವುದು,
ಪರಿಹಾರ:-ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ,
*04,🦀ಕಟಕ ರಾಶಿ🦀*
📃,ವಿವಾಹ ಯೋಗ್ಯರಿಗೆ ಕಂಕಣಭಾಗ್ಯದ ವಿವಾಹದ ಮಾತುಕತೆಗಳು ಫಲಪ್ರದವಾಗುವುವು. ಆರ್ಥಿಕ ವಿಷಯದಲ್ಲಿ ಚೇತರಿಕೆ ಕಂಡುಬರುವುದು. ನಿಮ್ಮ ಮನಸ್ಸಿನ ಸ್ಥಿತಿಯಂತೆ ಕಾರ್ಯ ಕೈಗೂಡುವುದರಿಂದ ಒಳಿತಾಗುವುದು. ರಾಜಕಾರಣಿಗಳಿಗೆ ವಿರೋಧಿಗಳಿಂದ ತೊಂದರೆ ಇದೆ. ಧನಲಾಭದ ವಿಷಯದಲ್ಲಿ ದೈವ ನಿಮಗೆ ಸಹಕರಿಸಲಿದೆ,
ಗಮನಿಸಿ:- ಇಂದು ಮನೆಯಲ್ಲಿ ಸಂಗಾತಿಯ ಹುಸುಕೋಪಕ್ಕೆ ಗುರಿ ಆಗುವಿರಿ,
ಪರಿಹಾರ:-ಕುಲದೇವರನ್ನು ಪ್ರಾರ್ಥನೆ ಮಾಡಿ,
*05,🦁ಸಿಂಹ ರಾಶಿ🦁*
📃,ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು,
ಗಮನಿಸಿ:- ಇಂದು ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ,
ಪರಿಹಾರ:-ತಾಯಿದುರ್ಗಾಮಾತೆಯನ್ನು ಪ್ರಾರ್ಥಿಸಿ,
*06,👩‍🦳ಕನ್ಯಾ ರಾಶಿ👩‍🦳*
📃,ಬುದ್ಧಿವಂತರಾದ ನಿಮಗೆ ಮೋಸ ಮಾಡುವ ವ್ಯಕ್ತಿ ಎದುರಾಗಬಹುದು. ಅವಸರ ಮಾಡದೆ ಇದ್ದಲ್ಲಿ ಕಾರ್ಯ ಸಾಫಲ್ಯವನ್ನು ಹೊಂದುವುದು. ನೀವಾಡುವ ಮಾತು ಇನ್ನೊಬ್ಬರ ಮನಸ್ಸನ್ನು ನೋಯಿಸದಿರಲಿ. ಈ ಬಗ್ಗೆ ಎಚ್ಚರ ವಹಿಸಿ. ಕೇವಲ ಯೋಚನೆಗಳಲ್ಲೇ ಮುಳುಗಿರಬೇಡಿ. ಅದರಿಂದ ಹೊರಕ್ಕೆ ಬನ್ನಿ. ನಂಬಿಕಸ್ಥರು ಲಾಭದ ದಾರಿ ತೋರುವರು,
ಗಮನಿಸಿ:- ನಿಮ್ಮ ಅಚಾತುರ್ಯಕ್ಕೆ ನೀವು ಬೆಲೆ ತೆರಬೇಕಾಗುವುದು,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಜಪವನ್ನು ಮಾಡಿ,
*07,⚖️ತುಲಾ ರಾಶಿ⚖️*
📃,ಹಳೆಯ ವಿವಾದಕ್ಕೆ ತೆರೆ ಬೀಳಲಿದೆ. ಆದಷ್ಟು ತಾಳ್ಮೆಯಿಂದ ಇರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯಗತ್ಯ. ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯ ಕೂಡಾ ಅಷ್ಟೆ ಪ್ರಮುಖವಾದುದು,
ಗಮನಿಸಿ:-ಇಂದು ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು,
ಪರಿಹಾರ:-ಶಿವಪಂಚಾಕ್ಷರಿ ಮಂತ್ರ ಜಪಿಸಿ,
*08,🦂ವೃಶ್ಚಿಕ ರಾಶಿ🦂*
📃,ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ,
ಗಮನಿಸಿ:-ಇಂದುನಿಮಗೆ
ಮಾನಸಿಕ ಒತ್ತಡ ಉಂಟಾಗಬಹುದು, ಪರಿಹಾರ:-ಸೂರ್ಯಾರಾಧನೆಯನ್ನು ಮಾಡಿ,
*09,🏹ಧನಸ್ಸು ರಾಶಿ🏹*
📃,ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಜನರು ಕೊಂಡಾಡುವರು. ಅಪೂರ್ಣವಾಗಿರುವ ಕೆಲಸಗಳನ್ನು ಬೇಗ ಮಾಡಿ ಮುಗಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ,
ಗಮನಿಸಿ:-ಇಂದು ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು,
ಪರಿಹಾರ:- ಶ್ರೀ ದತ್ತಾತ್ರೇಯ ಸ್ವಾಮಿಯನ್ನು ಸ್ಮರಣೆ ಮಾಡಿ,
*10,🐊ಮಕರ ರಾಶಿ🐊*
📃,ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು. ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ. ಕುಟುಂಬದವರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುವಿರಿ,
ಗಮನಿಸಿ:- ಇಂದು ಅನಿರೀಕ್ಷಿತ ದನಲಾಭವಾಗುವುದು,
ಪರಿಹಾರ:-ದೇವಾಲಯಕ್ಕೆ ಎಳ್ಳು ದಾನ ಮಾಡಿ,
*11,⚱️ಕುಂಭ ರಾಶಿ⚱️*
📃,ಬಿರುಬಿಸಿಲಿನ ಬಾಧೆಗೆ ಬಳಲಿದಂತೆ, ಗ್ರಹಗಳ ಅಶುಭಫಲ ಸಂಚಾರದಿಂದ ಬಳಲುವಿರಿ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನಲ್ಲಿ ಮೊರೆ ಹೋಗಿ. ನಿಮ್ಮ ಕಾರ್ಯಗಳಲ್ಲಿ ಅಲ್ಪ ಗೆಲುವು ಕಂಡುಬರುವುದು. ವಿಜಯದ ಯೋಜನೆಗಾಗಿ ಕಾರ್ಯಶೀಲರಾಗಿ. ಉತ್ತಮ ಸಹವರ್ತಿಗಳು ನಿಮ್ಮನ್ನು ಸಂಧಿಸುತ್ತಾರೆ. ನೀವು ಮಾಡಿದ ಸಂಶೋಧನಾ ಕೆಲಸಕ್ಕೆ ಶೀಘ್ರವೇ ಮನ್ನಣೆ ದೊರೆಯುವುದು,
ಗಮನಿಸಿ:-ನಿಮ್ಮ ಮುಂದಿನ ದಾರಿ ಸುಗಮವಾಗುವುದು,
ಪರಿಹಾರ:-ಶ್ರೀ ಸೋಮೇಶ್ವರ ಸ್ವಾಮಿಯನ್ನು ಸ್ಮರಿಸಿ,
*12,🐬ಮೀನ ರಾಶಿ🐬*
📃,ಸಂಸಾರವು ಸುಖಮಯವಾಗಿರುವುದು. ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ನಿಮ್ಮನ್ನು ರೋಮಾಂಚನಗೊಳಿಸಬಹುದು. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು, ಗಮನಿಸಿ:-ಇಂದು ಹಣಕಾಸಿನ ತೊಂದರೆ ಇರುವುದಿಲ್ಲ,
ಪರಿಹಾರ:-ಶ್ರೀ ಗಂಧದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ,

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading