ಲಾಕ್ ಡೌನ್ ನಿಂದ ತಿಳಿಯಿತು ಹಳ್ಳಿಯ ಮಹತ್ವ – ಯುದ್ಧದಿಂದ ತಿಳಿಯಿತು ಒಲೆಯ ಮಹತ್ವ

ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರ ಅನೇಕರಿಗೆ ಅವರವರ ಬಗ್ಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅದೆಷ್ಟೋ ಆಲಸ್ಯತನದ ಉನ್ಮಾದಗಳು ತಳೆದಿದ್ದವು ಎಂಬುದು ಕೋವಿಡ್-19 ಸೃಷ್ಟಿಸಿರುವ ಬಿಕ್ಕಟ್ಟು ಜೀವವೈವಿಧ್ಯದ ನಾಶವೆಂದು ಕೆಲ ಜನರು ಬಾಯಿಂದ ಬಾಯಿಗೆ ಹೇಳುತ್ತಿದ್ದರು. ಅಲ್ಲದೆ ತೀವ್ರವಾದ ಜನಸಂದಣಿ ಪ್ರದೇಶ, ನಗರಗಳು ಹೆಚ್ಚಾಗಿ ವೈರಾಣುಗಳ ಹರಡುವಿಕೆ ಮಾಡಿದಂತಹ ಸ್ಥಳವಾಗಿತ್ತು. ಅಂದ ಹಾಗೇ ಹಳ್ಳಿಯಿಂದ ದಿಲ್ಲಿಯತ್ತ ಜನಸಾಮಾನ್ಯರು ಉದ್ಯೋಗದ ನಿಮಿತ್ತ ವಲಸೆ ಹೋದವರು ಆಗ ಹಳ್ಳಿಯ ಜೀವನ ಲೇಸೆಂದು ಪುನಃ ಲಗ್ಗೆ ಇಟ್ಟರು ಇತ್ತ ಕಡೆಗೆ. ಈಗ ಮನುಷ್ಯನು ಮಾಡಿದ ಪಾಪ ಕರ್ಮಗಳಿಗೆ ಪ್ರಕೃತಿ ಕೂಡ ತನ್ನದೇ ಆದ ಕೆಲಸವನ್ನು ಮಾಡಲು ಆರಂಭಿಸಿಯೇ ಬಿಟ್ಟಿದೆ. ಇತ್ತೀಚೆಗೆ ಯುದ್ಧದಿಂದಾಗಿ ಜನರು ಸೇವಿಸುವ ಆಹಾರದ ಮೇಲೆ ಗಂಭೀರ ಪ್ರಭಾವವನ್ನುಂಟು ಮಾಡಿತಲ್ಲದೆ “ತಿನ್ನುವ ಹಕ್ಕಿದೆ ಎಲ್ಲರಿಗೂ ಆದರೆ ಬಿಸಾಡುವ ಹಕ್ಕಿಲ್ಲ” ಎಂಬ ಗಾದೆ ನುಡಿಯಂತೆ ಇಲ್ಲಿ ನಾವು ಯಾವ ವಸ್ತುವನ್ನು ಕೂಡ ಕೀಳಾಗಿ ಪರಿಗಣಿಸಬಾರದು ಅಂದರೆ ಅದೆಷ್ಟೋ ಸಮಯದಿಂದ ಮೂಲೆ ಗುಂಪಾಗಿದ್ದ ಕೆಂಪು ತಲೆಯ ಬೆಂಕಿ ಪೊಟ್ಟಣವು ಈ ಪರಿಸ್ಥಿತಿಯಲ್ಲಿ ಕೈ ಸೇರ ತೊಡಗಿತಲ್ಲದೆ ಅದೆಷ್ಟೋ ತಲೆಗೆರೆಗಳು, ಕಸ-ಕಡ್ಡಿಗಳು ಅಲ್ಲದೆ ಒಣಕಲು ಮರಗಳ ತುಂಡುಗಳು ಮನೆಯ ಬಾಗಿಲಿಗೆ ಬರತೊಡಗಿದವು. ಇದರಿಂದಾಗಿ ನಿಸರ್ಗ ಸಹಜವಾದ ವಸ್ತುಗಳು ಎಷ್ಟು ಮುಖ್ಯವೋ ಎಂಬುದನ್ನು ಮಾನವ ಅರಿತು ಮನ ಪರಿವರ್ತನೆ ಮಾಡಿಕೊಳ್ಳುವಂತಾಯಿತು ಹೇಗೆ ‘ಒಲೆ’ ಮತ್ತು ‘ಸೌದೆ’ ಎಂಬ ಎರಡಕ್ಷರವು ಈಗಿನ ವಿದ್ಯಮಾನದಲ್ಲಿ ತನ್ನ ರುಚಿಕರವಾದ ಸವಿಯನ್ನು ಉಣ್ಣುವ ಪ್ರಾಧಾನ್ಯತೆಯನ್ನು ಪುನಃ ಪಡೆಯಿತೋ ಹಾಗೇ ಇಂದು ಬದುಕು ದಿಲ್ಲಿಯತ್ತ ಸಾಗಿದರು ಕೂಡ ಕೊಂಚ ಹಳ್ಳಿಯ ಕಡೆಗೆ ಮುಖ ಮಾಡಬೇಕೆಂದು ನೈಜ ಸ್ವರೂಪಿಯಾದ ಸೃಷ್ಟಿಯುತ ಭೂ ತಾಯಿಯು ತನ್ನಲ್ಲಿರುವ ನಂಟು ತನವನ್ನು ಮಾನವನೊಂದಿಗೆ ಯಾವ ರೀತಿಯಲ್ಲಿ ಬೆಸಿದಿದೆ ಎಂಬುದನ್ನು ನಾವಿಂದು ಮನಗಾಣಬಹುದಾಗಿದೆ… ಕಿಶನ್.ಎಂ ಪೆರುವಾಜೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading