ಮಾ.24 & 25 ರಂದು ವಳಲಂಬೆ ಜಾತ್ರೋತ್ಸವ – ಸತ್ಯನಾರಾಯಣ ದೇವರ ಪೂಜೆ,ದೈವಗಳ ನೇಮೋತ್ಸವ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಮಾ.24 ರಂದು ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮಾ.25 ರಂದು ದೈವಗಳ ನೇಮೋತ್ಸವ ನಡೆಯಲಿದೆ.

. . . . . . . . .

ಮಾ.24 ರಂದು ಗಣಪತಿ ಹೋಮ ಮತ್ತು ಶತರುದ್ರಾಭಿಷೇಕ ಹಾಗೂ 41ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ. ಮಾ.24 ರಂದು ಸಂಜೆ 7 ರಿಂದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇವರ ಸಹಯೋಗದೊಂದಿಗೆ ” ಶ್ರೀನಿವಾಸ ಕಲ್ಯಾಣ” ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading