Ad Widget

ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ; ಎರಡನೇ ಸಭೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧಾರ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿ ಎರಡನೇ ಸಭೆ ಮಾ.19 ರಂದು ನಡೆಯಿತು. ಸಭೆಯಲ್ಲಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಾಧಿಕಾರ ರಚನೆ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಶಿವರಾಮ್ ರೈ ಅವರು, “ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಿಂದ ಭೂಸ್ವಾಧೀನದ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಹೆಚ್ಚುವರಿ ತೆರಿಗೆ ಭಾರ ಬೀಳುವುದು ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರ ಕಡಿಮೆಯಾಗುವ ಸಾಧ್ಯತೆಗಳಿವೆ” ಎಂದು ಹೇಳಿದರು. “ಸ್ಥಳೀಯ ಜನರ ಅಭಿಪ್ರಾಯ ಪಡೆಯದೆ ಇಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದು ತಪ್ಪು” ಎಂದು ಹೇಳಿದರು. ಇದೇ ವೇಳೆ, ಈ ಪ್ರಸ್ತಾಪದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕೊನೆಯಲ್ಲಿ, ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವುದು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಸಭೆಯಲ್ಲಿ ಶಿವರಾಮ ರೈ, ಸತೀಶ್ ಕೂಜುಗೋಡು, ಪವನ್ ಕುಮಾರ್ ಎಂ.ಡಿ, ರಾಜೇಶ್ ಎನ್.ಎಸ್, ಶಿವಕುಮಾರ್ ಕಾಮತ್, ಕಾರ್ತಿಕ್ ಕಾಮತ್, ಭರತ್ ಕಲ್ಲಗದ್ದೆ, ರೇಷ್ಮಾ ಅನಿಲ್ ಡಿ ಸೋಜಾ, ಸುಬ್ರಹ್ಮಣ್ಯ ಕಾಮತ್, ಉದಯ ಮಂತೆರೋ, ಅನಿಲ್ ಮಂತೆರೋ, ವಲೆರಿಯನ್ ಡಿ ಸೋಜಾ, ಬಸವರಾಜ್, ಪ್ರಶಾಂತ್ ಕೋಡಿಬೈಲ್, ಭವಿಷ್ ಅಯ್ಯೆಟ್ಟಿ, ರವಿ ದೇವರಗದ್ದೆ, ಮನೋಜ್ ನೂಚಿಲ, ಸುಬ್ರಹ್ಮಣ್ಯ ರಾವ್, ದೀಪಕ್ ಎಚ್.ಬಿ ರವೀಂದ್ರ, ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading