Ad Widget

ವಿಜ್ರಂಭಣೆಯಿಂದ ನಡೆದ ಕಂದ್ರಪ್ಪಾಡಿ ಜಾತ್ರೋತ್ಸವ – ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ


ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದಲ್ಲಿ ವರ್ಷಾಚಧಿ ಜಾತ್ರೋತ್ಸವ ಮಾ.10 ರಿಂದ 15 ರ ತನಕ ವಿವಿಧ ಧಾರ್ಮಿಕ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೈವದ ಕೃಪೆಗೆ ಪಾತ್ರರಾದರು. ವಾಡಿಕೆಯಂತೆ ಧ್ವಜವರೋಹಣದ ಬಳಿಕ ಮಳೆ ಬಂದು ತಂಪೆರಗಿತು.‌

. . . . . . . . .



ಮಾ.10 ರಂದು ರಾತ್ರಿ ಧ್ವಜರೋಹಣ ನಡೆದು ಮಾ.14 ರಂದು ಬೆಳಿಗ್ಗೆ ಮುಂಡೋಡಿ ತರವಾಡು ಮನೆಯಿಂದ ಹಾಗೂ ಶ್ರೀ ರುದ್ರಚಾಮುಂಡಿ ದೈವಸ್ಥಾನದಿಂದ ಹಾಗೂ ರಾತ್ರಿ ತಳೂರಿನಿಂದ ಶ್ರೀ ದೈವಗಳ ಭಂಡಾರ ಬರುವ ಕಾರ್ಯಕ್ರಮ ನಡೆಯಿತು. ನಂತರ ಉಗ್ರಾಣ ತುಂಬಿಸುವುದು ಹಾಗೂ ಅನ್ನಸಂತರ್ಪಣೆ, ರಾತ್ರಿ ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ದೈವಗಳ ಭಂಡಾರ ಹೊರಡುವ ಕಾರ್ಯಕ್ರಮ ನಡೆಯಿತು. ಮಾ.15 ರಂದು ಬೆಳಿಗ್ಗೆ ಶ್ರೀ ರುದ್ರಚಾಮುಂಡಿ ದೈವದ ನೇಮ, ನಂತರ ಶ್ರೀ ಪುರುಷದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಶ್ರೀ ಪಂಜುರ್ಲಿ ದೈವದ ನೇಮ ನಡೆದು ಸಂಜೆ ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು.

. . . . . . .


ಮಾ.14 ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಆಗಮಿಸಿದ್ದರು.‌ ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕರಾದ ಮೋನಪ್ಪ ಗೌಡ ಹುಲಿಮನೆ, ಚೆನ್ನಕೇಶವ ಗೌಡ ಪೊಯ್ಯೆಮಜಲು, ಎಂ.ಆರ್ ಪ್ರಕಾಶ್ ಮುಂಡೋಡಿ, ನಿವೃತ್ತ ಅಂಚೆ ಪಾಲಕ ಪುರುಷೋತ್ತಮ ಪರಮಲೆ, ರಾಷ್ಟçಮಟ್ಟದ ವೀಕ್ಷಕ ವಿವರಣೆಗಾರ ಸುಕುಮಾರ ಕಂದ್ರಪ್ಪಾಡಿ, ರಾಷ್ಟçಮಟ್ಟದ ಕ್ರೀಡಾಪಟು ವಿವೇಕ್ ಎರ್ದಡ್ಕ ರನ್ನು ಸನ್ಮಾನಿಸಲಾಯಿತು. ಮಾ.14 ರಂದು ಸಂಜೆ ಸ್ಥಳೀಯ ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ, ನಂತರ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಂಡಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading