Ad Widget

ಮಾ.21ರಂದು ಅಸೋಸಿಯೇಷನ್ ಆಫ್ ಕನ್ಸ್ ಲ್ಟಿoಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಸುಳ್ಯ ಸೆಂಟರ್ ಪದಗ್ರಹಣ ಸಮಾರಂಭ

“ಸುಳ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಇದರ ಸುಳ್ಯ ಸೆಂಟರ್ ನ ನೂತನ ಅಧ್ಯಕ್ಷರಾಗಿ ಸುಳ್ಯದ ಕೆ.ಆರ್ ಕೃಷ್ಣರಾವ್ ಆಯ್ಕೆಯಾಗಿದ್ದಾರೆ.
ಸಮಿತಿಯ ಕಾರ್ಯದರ್ಶಿಯಾಗಿ ಅವಿನ್.ಎಂ.ಹೆಚ್, ಕೋಶಾಧಿಕಾರಿಯಾಗಿ ಶ್ರೇಯಸ್.ಎಂ.ಡಿ ಹಾಗೂ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿ ಚಂದ್ರಶೇಖರ್.ಎ, ಮಣಿಕಂಠನ್ ಹಾಗೂ ವಿಜಯಕುಮಾರ್.ಟಿ ಆಯ್ಕೆಯಾಗಿದ್ದು, ಸುಳ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಇದರ ಸುಳ್ಯ ಸೆಂಟರ್ ನ ಪದಪ್ರದಾನ ಸಮಾರಂಭವು ಮಾ.21ರಂದು ಸುಳ್ಯದ ಅರಂಬೂರಿನಲ್ಲಿರುವ ಹೋಟೆಲ್ ರಸಪಾಕ ಗ್ರಾಂಡ್ ಇದರ ಆಡಿಟೋರಿಯಂ ನಲ್ಲಿ ನಡೆಯಲಿದೆ” ಎಂದು ಸಮಿತಿಯ ಸುಳ್ಯ ಸೆಂಟರ್ ನ ನಿಯೋಜಿತ ಅಧ್ಯಕ್ಷ ಕೆ.ಆರ್. ಕೃಷ್ಣರಾವ್ ಹೇಳಿದರು.
ಮಾ.14ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಎಸಿಸಿಇ(ಐ) ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ರಾವ್ ರವರು ಪದಪ್ರಧಾನ ನಡೆಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಎಸಿಸಿಐ (ಇ)(ಸೌತ್‌) ಉಪಾಧ್ಯಕ್ಷರಾದ ಜೆ.ಪ್ರೇಮ್ ಕುಮಾ‌ರ್, ಎಸಿಸಿಇ(ಇ) (ವೆಸ್ಟ್) ಉಪಾಧ್ಯಕ್ಷರಾದ ಅನಿಲ್ ಕಡ್ಬಾನೆ, ಎಸಿಸಿಇ(ಇ) ಪ್ರಧಾನ ಕಾರ್ಯದರ್ಶಿ ಕಾಶಿ ರಾಮ್ ಅದೆಪು, ಎಸಿಸಿಇ(ಇ) ಕೋಶಾಧಿಕಾರಿ ಸಿ.ಹೆಚ್. ಪ್ರಕಾಶ್, ಎಸಿಸಿಇ(ಇ) ಪುತ್ತೂರು ಸೆಂಟರ್ ನ ಪೂರ್ವಾಧ್ಯಕ್ಷರಾದ ಪ್ರಮೋದ್ ಕುಮಾರ್ ಕೆ.ಕೆ. ಭಾಗವಹಿಸಲಿದ್ದಾರೆಂದು” ಅವರು ಹೇಳಿದರು. “ಇದು ರಾಷ್ಟ್ರೀಯ ಮಟ್ಟದಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ಈಗಾಗಲೇ 53 ಮಂದಿ ಇದಕ್ಕೆ ನೋಂದಾವಣೆ ಮಾಡಿಕೊಂಡಿದ್ದಾರೆ. ಇಂಜಿನಿಯರ್ ವಿದ್ಯಾಭ್ಯಾಸ ಪಡೆದು 5 ವರ್ಷದ ನಂತರ ಇದರ ಸದಸ್ಯತ್ವ ಪಡೆಯಲು ಅವಕಾಶ ಇರುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಸೆಂಟ‌ರ್ ಕಾರ್ಯದರ್ಶಿ ಅವಿನ್ ಎಂ.ಹೆಚ್‌, ಕೋಶಾಧಿಕಾರಿ ಶ್ರೇಯಸ್ ಎಂ.ಡಿ, ಚಂದ್ರಶೇಖರ ಎ, ಪ್ರಸಾದ್ ಎಂ.ಎಸ್, ನವನೀತ್ ರೈ ಪೇರಾಲುಗುತ್ತು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading