Ad Widget

ಸುಳ್ಯ : ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ದಿನಾಚರಣೆ

ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವು ಕುರುಂಜಿಭಾಗ್‌ನ ಶ್ರೀ ದೇವರಾಜು ಅರಸು ಪೋಸ್ಟ್ ಮೆಟ್ರಿಕ್ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ನಡೆಯಿತು.‌
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸಿದ್ದರು.‌
ಮಹಿಳಾ ದಿನಾಚರಣೆ ಕುರಿತು ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಮಾತನಾಡಿದರು. ವಕೀಲೆ ಶ್ರೀಮತಿ ಪ್ರತಿಭಾ ಜ್ಯೋತಿ ಇವರು ಕಾನೂನು ಮಾಹಿತಿ ನೀಡಿದರು. ವಸತಿ ನಿಲಯಗಳ ತಾಲೂಕು ಅಧಿಕಾರಿ ಶ್ರೀಮತಿ ಗೀತಾ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪುಷ್ಪ ಮೇದಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ ಸಖಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವ ಮೋಹಿನಿ ವಿಶ್ವನಾಥ್ ಹಾಗೂ ಕಲೆಯಲ್ಲಿ ಸಾಧನೆ ಮಾಡಿರುವ ಸಂಧ್ಯಾ ಮಂಡೆಕೋಲು ಇವರುಗಳನ್ನು ಗೌರವಿಸಲಾಯಿತು.
ಮಹಿಳಾ ಮೋರ್ಚಾ ಕಾರ್ಯದರ್ಶಿ ಜಾನಕಿ ಮುರುಳ್ಯ ಸದಸ್ಯರುಗಳಾದ ಶ್ರೀಮತಿ ಶಶಿಕಲಾ ಬೇಲ್ಯ, ಶ್ರೀಮತಿ ಸಂಧ್ಯಾ, ಒಬಿಸಿ ಮೋರ್ಚಾ ಸದಸ್ಯರಾದ ಶ್ರೀಮತಿ ಚಂದ್ರಾವತಿ, ಶ್ರೀಮತಿ ವಿನೋದ ರೈ ಹಾಗೂ ವಸತಿ ನಿಲಯಗಳ ವಾರ್ಡನ್ ಗಳು ಹಾಗೂ ಕುರುಂಜಿ ಭಾಗ್ ವಸತಿ ನಿಲಯದ ಮಕ್ಕಳು ಉಪಸ್ಥಿತರಿದ್ದರು.
ಕುಮಾರಿ ರಕ್ಷಾ ಭಾವಗೀತೆ ಹಾಡಿದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ.ಎ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಭಾರತಿ ಪುರುಷೋತ್ತಮ್ ಸಾಧಕರ ಸನ್ಮಾನ ಪತ್ರ ವಾಚಿಸಿದರು. ಮಹಿಳಾ ಮೋರ್ಚಾ ಸದಸ್ಯರಾದ ಶ್ರೀಮತಿ ಸುಮತಿ ಧನ್ಯವಾದವಿತ್ತರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading