Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಥಾಪ್ರಕಾರ ಬೋಜನ ಪ್ರಸಾದ ಮತ್ತು ಉಪಹಾರ ವ್ಯವಸ್ಥೆ – ಗ್ಯಾಸ್ ಉಳಿಕೆಗೆ ಕ್ರಮ ; ವಾರಕ್ಕೆ ಬೇಕಾದ ಗ್ಯಾಸ್ ಹಾಗೂ ಕಟ್ಟಿಗೆ ದಾಸ್ತಾನು

“ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರ ಮತ್ತು ಬೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರತಿದಿನದಂತೆ ಬೋಜನ ಪ್ರಸಾದ ಮತ್ತು ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಒಂದು ವಾರಕ್ಕೆ ಬೇಕಾದ ಗ್ಯಾಸ್ ಶೇಖರಿಸಲ್ಪಟ್ಟಿದ್ದು ಬುಧವಾರ ಕೂಡಾ ಶ್ರೀ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ದರಿಂದ ಭಕ್ತರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ” ಎಂದು ದೇವಳದ ಆಡಳಿತ ತಿಳಿಸಿದೆ. 
ಗ್ಯಾಸ್ ಉಳಿಕೆಗೆ ಕ್ರಮ : ಮಧ್ಯಪ್ರಾಚ್ಯದ ಯುದ್ಧದ ಕಾರಣದಿಂದ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಕಾರಣದಿಂದ ಮಿತವಾಗಿ ಗ್ಯಾಸ್ ಬಳಸಲು ದೇವಳದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ದೇವಳದಲ್ಲಿ ದಿನವಾಹಿ ನೀಡುತ್ತಿದ್ದ ವಿವಿಧ ರೀತಿಯ ಉಪಹಾರ ತಿನಿಸುಗಳಿಗೆ ಬದಲಾಗಿ ಎರಡು ದಿನಕ್ಕೊಮ್ಮೆ ಅವಲಕ್ಕಿ ಮೊಸರು ಹಾಗೂ ಉಳಿದ ದಿನ ಹೆಸರು ಕಾಳು, ಉಪ್ಪಿಟ್ಟು ವಿತರಣೆ ನಡೆಯಲಿದೆ. ಅದೇ ರೀತಿ ಬೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಚ್ಚುವರಿ ತಯಾರಿಸುತ್ತಿದ್ದ ಪಲ್ಯಕ್ಕೆ ಬದಲಾಗಿ ದೇವಳದ ಪ್ರಸಿದ್ಧ ಬೋಜನ ಖಾದ್ಯ ಚಟ್ನಿಯನ್ನು ಮಾತ್ರ ತಯಾರಿಸಿ ವಿತರಿಸಲಾಗುತ್ತದೆ. ಆದುದರಿಂದ ಭಕ್ತರಿಗೆ ಬೋಜನ ಪ್ರಸಾದ ಹಾಗೂ ಉಪಹಾರ ತದೇಕ ಪ್ರಕಾರವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.
2 ಲೋಡ್ ಕಟ್ಟಿಗೆ ರೆಡಿ : ಮುಂದೆ ವಾರಗಳ ಬಳಿಕ ಗ್ಯಾಸ್ ಪೂರೈಕೆ ಆಗದೇ ಇದ್ದಲ್ಲಿ ಭಕ್ತರಿಗೆ ಭೋಜನ ಪ್ರಸಾದ ವಿತರಣೆ ಹಾಗೂ ಉಪಹಾರ ವಿತರಣೆಗೆ ಯಾವುದೇ ತೊಂದರೆ ಆಗದಂತೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಎರಡು ಲೋಡು ಕಟ್ಟಿಗೆಯನ್ನು ತರಿಸಿ ದಾಸ್ತಾನು ಇರಿಸಲಾಗಿದೆ. ಗ್ಯಾಸ್ ಪೂರೈಕೆ ಆಗದೆ ಇದ್ದಾಗ ಕಟ್ಟಿಗೆ ಒಲೆಯ ಮೂಲಕ ಬೋಜನ ಮತ್ತು ಉಪಹಾರ ತಯಾರಿಸಿ ಭಕ್ತರಿಗೆ ವಿತರಿಸಲು ಸಂಬಂಧಪಟ್ಟವರು ವ್ಯವಸ್ಥೆ ರೂಪಿಸಿದ್ದಾರೆ. ಭಕ್ತರಿಗೆ ಬೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. 
ಗ್ಯಾಸ್ ಪೂರೈಕೆ : ಗ್ಯಾಸ್ ಪೂರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡಲು ದೇವಸ್ಥಾನದಿಂದ ಪತ್ರ ಬರೆಯಲಾಗಿದೆ. ಅಲ್ಲದೆ ಶ್ರೀ ದೇವಳಕ್ಕೆ ಗ್ಯಾಸ್ ಪೂರೈಕೆ ಸಮರ್ಪಕವಾಗಿ ನೆರವೇರಿಸಲು ಅಪರ ಜಿಲ್ಲಾಧಿಕಾರಿಗಳು ಕೂಡಾ ಗ್ಯಾಸ್ ಪೂರೈಕಾ ಸಂಸ್ಥೆಯವರಿಗೆ ಆದೇಶಿಸಿದ್ದಾರೆ. ಬುಧವಾರವೂ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಪೂರೈಕೆದಾರರು ವಿತರಿಸಿದ್ದಾರೆ. ಗುರುವಾರವೂ ಗ್ಯಾಸ್ ವಿತರಿಸುವುದಾಗಿ ಪೂರೈಕೆದಾರರು ತಿಳಿಸಿದ್ದಾರೆ. ಯಾವುದೇ ಸಮಸ್ಯೆಗಳು ಆಗದಂತೆ ಸೂಕ್ತ ಕ್ರಮ ವಹಿಸಲು ಮುಜರಾಯಿ ಸಚಿವರು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading