ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿ ಪುನರ್‌ರಚನೆ ಹಾಗೂ ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿ ಪುನರ್‌ರಚನೆ ಮತ್ತು ಎಸ್ಐಆರ್ ಪ್ರಗತಿ ಪರಿಶೀಲನೆ ಸಭೆ ಜು.26ರಂದು ಕೊಲ್ಲಮೊಗ್ರು ಗ್ರಾಮದ ಸಭೆಯನ್ನು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆಯಿತು. 

. . . . . . . . .

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಆಡಳಿತ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಎಸ್.ಟಿ ಘಟಕ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಸುಳ್ಯ ಬ್ಲಾಕ್ ಎಸ್.ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ನಂದರಾಜ್ ಸಂಕೇಶ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕೊಲ್ಲಮೊಗ್ರು ಗ್ರಾಮ ಉಸ್ತುವಾರಿ ದಿನೇಶ್ ಹಾಲೆಮಜಲು, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿರಿಭಾಗ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹರ್ಷಿತ್ ಕೊರಂಬಟ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ದಿನೇಶ್ ಮಡ್ತಿಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಯಶೋಧರ ಬಾಕಿಲ, ಸುಧೀರ್ ಅಮೆಮನೆ, ಮಂಜುನಾಥ ಮಡ್ತಿಲ ಹಾಗೂ ಅಮರ ಮುಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ಧನ ಆಚಾರ್ಯ ಕುಂಟಿಕಾನ, ಸುಳ್ಯ ತಾಲೂಕು ಪಂಚ ಗ್ಯಾರಂಟೀ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಮಣಿಕಂಠ ಕೊಳಗೆ, ಕೊಚ್ಚಿಲ ಮಯೂರವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ್ ಅಂಬೆಕಲ್ಲು, ಕಟ್ಟ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

. . . . . . .

ಕೊಲ್ಲಮೊಗ್ರು ಗ್ರಾಮದ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಮಲಾಕ್ಷ ಪೆರ್ನಾಜೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರತಾಪ್ ತಂಬಿನಡ್ಕ ಅವರನ್ನು ಆಯ್ಕೆ ಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಶೇಖರಪ್ಪ ತಳವಾರ ಬೆಂಡೋಡಿ, ಬೆಳ್ಯಪ್ಪ ನಿಡುಬೆ, ಗೋಪಾಲಕೃಷ್ಣ ಭಟ್ ಹಾಗೂ ಕಾರ್ಯದರ್ಶಿಗಳಾಗಿ ಕಮಲಾಕ್ಷ ಬೆಂಡೋಡಿ, ದಿನೇಶ್ ಪಂಜಿಪಳ್ಳ, ಚೆನ್ನಕೇಶವ ಕೋನಡ್ಕ, ಮೋನಪ್ಪ ಕೊಳಗೆ, ಹರ್ಷ ಬೆಂಡೋಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಸಪ್ಪ ಗೌಡ ಚಾಂತಾಳ, ರಾಮ ತಂಬಿನಡ್ಕ, ಸುಬ್ರಹ್ಮಣ್ಯ ಬೊಳಿಯಾನ ಮನೆ, ಜಯರಾಮ ಬೆಂಡೋಡಿ, ಚಂದ್ರಶೇಖರ ಗೌಡ ಅಂಬೆಕಲ್ಲು, ಸೋಮಯ್ಯ ಗೌಡ ಮಿತ್ತೋಡಿ, ಬಸಪ್ಪ ಗೌಡ ಕೊಳಗೆ, ರಘುರಾಮ ಪಾಟಾಳಿ, ಕುಸುಮಾಧರ ಕೊಲ್ಲಮೊಗ್ರ, ರಾಜೇಶ್ ಕೊಲ್ಲಿ, ಸುಂದರ ಗೌಡ ಕಜ್ಜೋಡಿ, ಕುಸುಮಾಧರ ಕೊಳಗೆ, ಭಟ್ಯ ಕೊರಗ ಬೆಂಡೋಡಿ ಹಾಗೂ ಗೌರವ ಸಲಹೆಗಾರರಾಗಿ ಮಣಿಕಂಠ ಕೊಳಗೆ, ಶೇಖರ್ ಅಂಬೆಕಲ್ಲು ಹಾಗೂ ದಿನೇಶ್ ಮಡ್ತಿಲ ಕೊಲ್ಲಮೊಗ್ರ ಅವರನ್ನು ನೇಮಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading