Ad Widget

ಅನಿಲ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ಹಿನ್ನೆಲೆ ; ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೊಳಗಾದ ಸುಳ್ಯದ ಹೋಟೆಲ್ ಮಾಲಿಕರು – ಸಿಲಿಂಡರ್ ಪೂರೈಕೆ ಸ್ಥಗಿತಗೊಂಡರೆ ಹೋಟೆಲ್ ಬಂದ್ ಆಗುವ ಆತಂಕ

ಅಮೇರಿಕಾ – ಇರಾನ್ – ಇಸ್ರೆಲ್ ದೇಶಗಳ ನಡುವಿನ ಯುದ್ಧದ ಪರಿಣಾಮದಿಂದಾಗಿ ಭಾರತ ದೇಶದಾದ್ಯಂತ ಅನಿಲ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡು, ಗ್ಯಾಸ್ ಸಿಲಿಂಡರ್ ಪೂರೈಕೆಗೆ ಗ್ಯಾಸ್ ಏಜೆನ್ಸಿಗಳು ಹೊಸ ಆದೇಶ ಹೊರಡಿಸಿರುವುದರಿಂದ ವಾಣಿಜ್ಯ ಗ್ಯಾಸ್ ಸಿಲಿಂಡರುಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಅದನ್ನೇ ನಂಬಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸುಳ್ಯದ ಹೋಟೆಲ್ ಮಾಲಕರು ಇದೀಗ ಸಂಕಷ್ಟಕ್ಕೊಳಗಾಗಿದ್ದಾರೆ. ಸುಳ್ಯ ನಗರದಲ್ಲಿ ಹಲವು ಹೋಟೆಲ್ ಗಳ ಮಾಲಕರು ವಾಣಿಜ್ಯ ಗ್ಯಾಸನ್ನೇ ಅವಲಂಭಿಸಿ, ಹೋಟೆಲ್ ಉದ್ಯಮ ನಡೆಸುತ್ತಿದ್ದು, ಒಂದು ವೇಳೆ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡರೆ ಹೋಟೆಲ್ ಗಳೇ ಬಂದ್ ಆಗುವ ಆತಂಕ ಎದುರಾಗಿದೆ. ಇದುವರೆಗೂ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಿಲಿಂಡರ್ ಖರೀದಿಗೆ ಹೋದಾಗಲೆಲ್ಲಾ ತಕ್ಷಣ ಗ್ಯಾಸ್ ಸಿಲಿಂಡರ್ ದೊರಕುತ್ತಿತ್ತು. ಇದೀಗ ಒಮ್ಮಿಂದೊಮ್ಮೆಲೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿರುವುದರಿಂದ ಸುಳ್ಯ ನಗರ ಸೇರಿದಂತೆ ತಾಲೂಕಿನ ಬಹುತೇಕ ಹೋಟೆಲ್ ಗಳು, ಕ್ಯಾಂಟಿನ್ ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗ ತೊಡಗಿದೆ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೂ ಗ್ಯಾಸ್ ಏಜೆನ್ಸಿಗಳು ಹೊಸ ಆದೇಶ ಹೊರಡಿಸಿದ್ದು, ಗೃಹ ಬಳಕೆದಾರರಿಗೂ ತೊಂದರೆ ಉಂಟಾಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading