Ad Widget

ಮಡಪ್ಪಾಡಿ : ನಾಳೆ(ಮಾ.08) “ಅರೆಭಾಷೆ ಗ್ರಾಮೋತ್ಸವ – 2026”

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಗ್ರಾಮ ಗೌಡ ಸಮಿತಿ ಹಾಗೂ ಗೌಡ ಮಹಿಳಾ ಘಟಕ ಮಡಪ್ಪಾಡಿ ಇವುಗಳ ಸಹಕಾರದೊಂದಿಗೆ ವಿವಿಧ ಸಂಘ-ಸಂಸ್ಥೆಗಳಾದ ಗ್ರಾಮ ಪಂಚಾಯತ್ ಮಡಪ್ಪಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ, ಯುವಕ ಮಂಡಲ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ, ಗೌಡ ಕ್ರೀಡಾ ಸಮಿತಿ ಮಡಪ್ಪಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಮಡಪ್ಪಾಡಿ ಒಕ್ಕೂಟ, ಶ್ರೀ ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ ಮಡಪ್ಪಾಡಿ, ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟ ಮಡಪ್ಪಾಡಿ, ಸಂಜೀವಿನಿ ಒಕ್ಕೂಟ ಮಡಪ್ಪಾಡಿ, ಭಜನಾ ಮಂಡಳಿಗಳು ಮಡಪ್ಪಾಡಿ ಹಾಗೂ ಸ್ತ್ರೀ ಶಕ್ತಿ ಒಕ್ಕೂಟ ಮಡಪ್ಪಾಡಿ ಇವುಗಳ ಸಹಕಾರದೊಂದಿಗೆ ನಾಳೆ(ಮಾ.08) ಬೆಳಿಗ್ಗೆ 9:30 ರಿಂದ ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಳ್ಯಾಡಿ ತಮ್ಮಪ್ಪ ಗೌಡ ರಂಗಮಂದಿರದಲ್ಲಿ “ಅರೆಭಾಷೆ ಗ್ರಾಮೋತ್ಸವ – 2026” ನಡೆಯಲಿದೆ.
ಬೆಳಿಗ್ಗೆ 9:30ರಿಂದ ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಯ ಹತ್ತಿರದಿಂದ ಅದ್ಧೂರಿ ಮೆರವಣಿಗೆ ಸಾಗಲಿದ್ದು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಬಳ್ಳಡ್ಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 10:15ರಿಂದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪಿ.ಸಿ ಜಯರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಭರತ್ ಮುಂಡೋಡಿ, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯ್ ಮುಳುಗಾಡು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್ ಗಂಗಾಧರ ಹಾಗೂ ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸದಾನಂದ ಬಲ್ಕಜೆ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 11:00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಮೇಶ್ ಮೆಟ್ಟಿನಡ್ಕ, ಶಶಿಧರ್ ಮಾವಿನಕಟ್ಟೆ, ಸುಭಾಷ್ ಪಂಜ, ಸಂಧ್ಯಾ ಮಂಡೆಕೋಲು ಇವರಿಂದ ಅರೆಭಾಷೆ ಪದ್ಯ ಗೊಂಚ್ಲ್(ಆರ್ಕೆಸ್ಟ್ರಾ), ಊರಿನ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಹಾಗೂ ಚೈತನ್ಯ ಕಲಾತಂಡ ಕೊಲ್ಲಮೊಗ್ರು ಇವರಿಂದ ಸಿದ್ಧವೇಷ ನಡೆಯಲಿದೆ. ನಂತರ ಅರೆಭಾಷಾ ಪಾರಂಪರಿಕ ಕೆಲಸಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು, ಪ್ರಗತಿಪರ ಕೃಷಿಕರಾದ ಕೆಂಪಣ್ಣ ಗೌಡ ಅಂಬೆಕಲ್ಲು ಪ್ರಾತ್ಯಕ್ಷಿಕೆಗೆ ಚಾಲನೆ ನೀಡಲಿದ್ದಾರೆ. ನಂತರ ವಿವಿಧ ಸ್ಪರ್ಧೆಗಳಾದ ದೈವದ ಪಾರಿ ಹೇಳುವುದು, ತೀರಿಹೋದವರಿಗೆ ಸ್ವರ್ಗ ಸಂದಿಸುವುದು, ಅರೆಭಾಷೆ ರಸಪ್ರಶ್ನೆ ಹಾಗೂ ಮದುವೆಯ ಸಂದರ್ಭದಲ್ಲಿ ಹೆಣ್ಣು ವಹಿಸಿಕೊಡುವ ಗದ್ಯರೂಪ ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ.
ಸಂಜೆ 4:00 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ರವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಪ್ರಸನ್ನ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಶ್ಮಿತಾ ಆದಿತ್ಯ ಚಿದ್ಗಲ್ ಸಮಾರೋಪ ಭಾಷಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ, ಸುಳ್ಯ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್, ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಕುಶಾಲಪ್ಪ ಪಾರೆಪ್ಪಾಡಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ದಿನೇಶ್ ಹಾಲೆಮಜಲು ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಮದುವೆ ಆಗಿ 50 ವರ್ಷಗಳನ್ನು ಪೂರೈಸಿದ ಮಡಪ್ಪಾಡಿ ಗ್ರಾಮದ ಹಿರಿಯ ಅರೆಭಾಷಿಕ ದಂಪತಿಗಳಿಗೆ ಹಾಗೂ ಅರೆಭಾಷೆ ಸಾಧಕರಾದ ಸಾಹಿತ್ಯ ಕ್ಷೇತ್ರದ ಮಾಯಿಪ್ಪನಮನೆ ಲಕ್ಷ್ಮಣ ಗೌಡ, ಸಂಶೋಧನಾ ಕ್ಷೇತ್ರದ ಡಾ. ಹರಿಣಾಕ್ಷಿ ಸೀತಾರಾಮ ಕೇವಳ, ಯಕ್ಷಗಾನ ಕ್ಷೇತ್ರದ ತಾರಾನಾಥ ಅಂಬೆಕಲ್ಲು ಹಾಗೂ ಹೆರಿಗೆ ತಜ್ಞೆ ಮತ್ತು ನಾಟಿ ವೈದ್ಯರಾದ ಶ್ರೀಮತಿ ಶಿವಮ್ಮ ಮಲ್ಕಜೆ ಇವರುಗಳಿಗೆ ಸನ್ಮಾನ ಸಮಾರಂಭ ನೆರವೇರಲಿದೆ. ನಂತರ “ಕೋಲ ಅರೆಭಾಷೆ ಸಿನಿಮಾ” ಪ್ರದರ್ಶನಗೊಳ್ಳಲಿದೆ ಹಾಗೂ ಸಂಜೆ 5:30ರಿಂದ ಖ್ಯಾತ ಅರೆಭಾಷೆ ಯಕ್ಷಗಾನ ಕಲಾವಿದರ ಕೊಡುಗಟ್ಟಿನಲ್ಲಿ ಶೇಖರ ಮಣಿಯಾಣಿ ಸುಳ್ಯ ಇವರ ಸಂಯೋಜನೆಯಲ್ಲಿ “ಭಸ್ಮಾಸುರ ಮೋಹಿನಿ” ಅರೆಭಾಷೆ ಯಕ್ಷಗಾನ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading