Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

ದಿನಾಂಕ:07:03:2026 ಶನಿವಾರ
01,🐏ಮೇಷರಾಶಿ🐏
📖,ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ಜಾಗ್ರತೆ ಇರಲಿ, ಮಕ್ಕಳ ಅರೋಗ್ಯ ಹಾಗು ಅವರ ಕಡೆ ಗಮನವಿರಿಸಿ,
ಗಮನಿಸಿ ಇಂದು:-ಹಣಕಾಸು ಉತ್ತಮವಾಗಿರುವುದು,
ಪರಿಹಾರ:-ಶ್ರೀದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ,
02,🐂ವೃಷಭರಾಶಿ🐂
📖,ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿ ಮತ್ತು ಕುಟುಂಬದ ಜೊತೆ ವಾದವಿವಾದವನ್ನು ಮಾಡಿಕೊಳ್ಳದಿರಿ, ಭೂ ಸಂಬಂದಿತ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ,
ಗಮನಿಸಿ:-ಈ ದಿನ ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆ ಇರಲಿ,
ಪರಿಹಾರ:-ಹನುಮಂತ ದೇವರನ್ನು ಪ್ರಾರ್ಥಿಸಿ,
03,👥ಮಿಥುನ ರಾಶಿ👥
📖,ಹಳೆಯ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಈ ದಿನ ಹಣವನ್ನು ಮಿತವಾಗಿ ಬಳಸಿ,
ಗಮನಿಸಿ:-ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಒಂದು ಶುಭ ಸಮಾಚಾರವನ್ನು ಪಡೆಯುವ ಸಾಧ್ಯತೆ,
ಪರಿಹಾರ:-ಇಂದು ಗ್ರಾಮ ದೇವತಾ ದರ್ಶನ ಮಾಡಿ,
04,🦀ಕಟಕ ರಾಶಿ🦀
📖,ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ, ಗಮನಿಸಿ:-ಈ ದಿನ ಆಹಾರದ ವಿಚಾರದಲ್ಲಿ ಜಾಗ್ರತೆ ಇರಲಿ, ಪರಿಹಾರ:-ಈಶ್ವರಾಧನೆಯಿಂದ ಶುಭವಾಗುವುದು,
05,🦁ಸಿಂಹ ರಾಶಿ🦁
📖,ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳುದೊರೆಯುವುದು,ಗಮನಿಸಿ:-ನಿಮ್ಮ ಸ್ವ ಇಚ್ಛೆಯಿಂದ ಈ ದಿನದ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ,
ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,
06,👩‍🦳ಕನ್ಯಾ ರಾಶಿ👩‍🦳
📖,ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು,
ಗಮನಿಸಿ:-ಹೊಸ ವ್ಯವಹಾರ ಹಾಗು ಉಳಿತಾಯದ ವಿಚಾರಗಳನ್ನು ಈ ದಿನ ಮುಂದೂಡುವದು ಉತ್ತಮ,
ಪರಿಹಾರ:-ಶ್ರೀ ಗುರುರಾಯರನ್ನು ಸ್ಮರಿಸಿ,
07,⚖️ತುಲಾ ರಾಶಿ⚖️
📖,ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ ಕಾಯುವಿರಿ. ಆದರೆ ಗ್ರಹಸ್ಥಿತಿಯು ಕೂಡಾ ನಿರಾಸೆಯನ್ನುಂಟು ಮಾಡುವುದು ಹಾಗಾಗಿ ಪ್ರಮುಖರ ಭೇಟಿಯು ರದ್ದಾಗಲಿದೆ. ನಿಮ್ಮ ವಿರುದ್ಧ ಲಿಂಗದವರಿಂದ ನಿಮಗೆ ಅನುಕೂಲವಾಗುವುದು, ಗಮನಿಸಿ:-ಪ್ರಯಾಣದಲ್ಲಿ ವಾಹನ ನಡೆಸುವಾಗ ಜಾಗ್ರತೆ ಇರಲಿ,
ಪರಿಹಾರ:-ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸಿ,
08,🦂ವೃಶ್ಚಿಕ ರಾಶಿ🦂
📖,ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಬಹು ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮನ್ನು ಎಲ್ಲರು ಗೌರವಿಸುವರು,
ಗಮನಿಸಿ:-ಈ ದಿನ ಎಲ್ಲರ ಜೊತೆ ಸಮಾಧಾನವಾಗಿ ಇರುವುದು ಉತ್ತಮ,
ಪರಿಹಾರ:-ತಾಯಿ ಚಾಮುಂಡಿಯನ್ನು ಪ್ರಾರ್ಥಿಸಿ,
09,🏹ಧನಸ್ಸು ರಾಶಿ🏹
📖,ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು,
ಗಮನಿಸಿ:- ಇಂದುಪ್ರಯಾಣ ಅಥವಾ ವಿದೇಶ ಪ್ರವಾಸಕ್ಕೆ ಸಂಬಂದಿಸಿದ ಶುಭ ಸುದ್ದಿಯನ್ನು ಕೇಳುವಿರಿ,
ಪರಿಹಾರ:-ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಿ,
10,🐊ಮಕರ ರಾಶಿ🐊
📖,ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ನಿಮ್ಮ ಗುಪ್ತ ವಿಚಾರಗಳ ಬಗ್ಗೆ ಗಮನವಿರಲಿ,
ಗಮನಿಸಿ:-ಕುಟುಂಬದ ವಿಚಾರಗಳಲ್ಲಿ ಮಾನಸಿಕ ಹಿಂಸೆ ಹಾಗು ತೊಂದರೆಗಳು ತಲೆದೂರಬಹುದು,
ಪರಿಹಾರ:-ಕಾಮಾಕ್ಷಿ ದೇವಿಯ ಪ್ರಾರ್ಥನೆ ಮಾಡಿ,
11,⚱️ಕುಂಭ ರಾಶಿ⚱️
📖,ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು, ಗಮನಿಸಿ:-ಪಾಲುದಾರರು ಅಥವಾ ಸಹೋದ್ಯೋಗಿಗಳ ಕಡೆ ಗಮನವಿರಲಿ,
ಪರಿಹಾರ:-ಕಾಳಿಕಾ ದೇವಿಯ ದರ್ಶನ ಮಾಡಿ,
12,🐋ಮೀನ ರಾಶಿ🐋
📖,ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ, ಈ ದಿನ ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವದು ಬೇಡ, ಗಮನಿಸಿ:- ಇಂದು ಕುಟುಂಬದಲ್ಲಿ ಕಲಹ ಸಂಭವ,
ಪರಿಹಾರ:-ಗಣಪತಿಯನ್ನು ಆರಾದಿಸಿ,

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading