Ad Widget

ಸುಬ್ರಹ್ಮಣ್ಯ : ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಮಾರ್ಚ್ 1 : ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರು ಕುಮಾರಧಾರ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಸಹಸ್ರಾರು ಭಕ್ತಾದಿಗಳು ಕುಮಾರಧಾರ ಸ್ನಾನಘಟ್ಟದ ಬಳಿ ತೀರ್ಥ ಸ್ನಾನವನ್ನು ಮಾಡುತ್ತಿದ್ದು, ಅದರಲ್ಲಿ ಹಲವು ಮಂದಿ ತಮ್ಮ ಬಟ್ಟೆ ಬರೆ,ಸೋಪು, ಶ್ಯಾಂಪು, ಪೇಸ್ಟ್, ಬ್ರಷ್, ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಸ್ನಾನಘಟ್ಟದ ಮೆಟ್ಟಿಲುಗಳಲ್ಲಿ ಹಾಗೂ ಹಳೆ ಬಟ್ಟೆಗಳನ್ನು ನೀರಿನಲ್ಲಿ ಬಿಟ್ಟು ಹೋಗಿರುವುದು ಇಡೀ ಪರಿಸರವನ್ನು ಹಾಳುಗಿಡವಿತ್ತು. ಇದನ್ನು ಮನಗಂಡ ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ಘಟಕದ ಸುಮಾರು 50-60 ಸ್ವಯಂಸೇವಕರು ರವಿವಾರ ನೀರಿನಿಂದ ಬಟ್ಟೆ ಬರೆಗಳನ್ನು ಮೇಲೆತ್ತಿ ಹಾಕಿ ಹಾಗೂ ದಡದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಕ್ಕಪಕ್ಕದಲ್ಲಿದ್ದ ಕಸ ಕಡ್ಡಿಗಳು ಹಾಗೂ ಪ್ಲಾಸ್ಟಿಕ್ ಚೀಲಗಳು ಇತ್ಯಾದಿಗಳನ್ನು ತೆರವುಗೊಳಿಸಿ , ಇಡೀ ಪರಿಸರವನ್ನು ಸುಚಿಗೊಳಿಸಿದರು. ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾl ದಿನೇಶ್ ಪಿ.ಟಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ.ಡಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾದ ಆರತಿ ಹಾಗೂ ಸುಮಿತ್ರ ಮಾರ್ಗದರ್ಶನ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading