Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197
01/03/2026 ಭಾನುವಾರ
*01,🐏ಮೇಷರಾಶಿ🐏*
📖,ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಸಿಗಬಹುದು. ಇದರಿಂದ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುವು. ಬೇರೆಯವರೊಂದಿಗೆ ನಿಮ್ಮ ಕೆಲಸಗಳನ್ನು ಅಂತಿಮಗೊಳಿಸುವಾಗ ಅವರು ನಿಮ್ಮನ್ನು ಕೆಲವು ಸಮಸ್ಯೆಗೆ ಸಿಲುಕಿಸಬಹುದು,
ಗಮನಿಸಿ:-ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆಯಿದೆ ಜಾಗ್ರತೆ ವಹಿಸಿ,
ಪರಿಹಾರ:ನಿಮ್ಮ ಕುಲದೇವರ ಪ್ರಾರ್ಥನೆಯಿಂದ ಒಳಿತಾಗುವುದು,
*02,🐂ವೃಷಭರಾಶಿ🐂*
📖,ನಿಮ್ಮ ಒಳಮನಸ್ಸಿನ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವುವು. ಈ ಬಗ್ಗೆ ಯೋಚಿಸಿ ಹೆಜ್ಜೆಯನ್ನಿಡಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಒಡಹುಟ್ಟಿದವರೊಂದಿಗೆ ಯಾವುದೇ ಜಗಳವಾಡುವುದನ್ನು ನೀವು ಇಂದು ತಪ್ಪಿಸಬೇಕು,
ಗಮನಿಸಿ:-ಇಂದು ನೀವು ಧಾರ್ಮಿಕ ಸ್ಥಳಕ್ಕೆ ಅಥವಾ ಬಂದುಮಿತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ,
ಪರಿಹಾರ:-ಶ್ರೀದುರ್ಗಾಪರಮೇಶ್ವರಿಯನ್ನು ಪೂಜಿಸಿ,
*03,👥ಮಿಥುನ ರಾಶಿ👥*
📖,ಉತ್ತಮ ವಿಚಾರವಾಗಿ ನೀವು ಒಳ್ಳೆಯ ನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವಿರಿ. ನೀವಾಡುವ ಮಾತುಗಳಿಂದ ಅವರು ಪ್ರಭಾವಿತರಾಗಿ ನಿಮಗೆ ಸಹಾಯ ನೀಡುವರು ಮಕ್ಕಳ ಆಟಪಾಠಗಳಿಂದ ಸಂತೋಷ ಹೊಂದುವಿರಿ,
ಗಮನಿಸಿ:-ಕೆಲವು ನಿಮ್ಮ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವಲ್ಲಿ
ನಿಮ್ಮ ಸ್ನೇಹಿತರ ಸಹಕಾರದಿಂದ ಪೂರ್ಣಗೊಳ್ಳುತ್ತದೆ,
ಪರಿಹಾರ:-ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ,
*04,🦀ಕಟಕ ರಾಶಿ🦀*
📖,ಉತ್ತಮ ಸಮಾಜದ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹ ಹಸ್ತಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗುವುವು ಮತ್ತು ನೀವು ಯಾವುದೇ ಈ ಹಿಂದೆ ಹೂಡಿಕೆಯನ್ನು ಮಾಡಿದ್ದರೆ, ಅದರಲ್ಲಿ ನಿಮಗೆ ಲಾಭವಾಗುವುದು, ಗಮನಿಸಿ:-ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆಯ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ,
ಪರಿಹಾರ:-ಸಾಯಿ ಬಾಬಾರ ದೇವಾಲಯದಲ್ಲಿ ಸಿಹಿ ಹಂಚಿ,
*05,🦁ಸಿಂಹ ರಾಶಿ🦁*
📖,ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಕುಟುಂಬದಲ್ಲಿ ಕಲಹಗಳ ಸಾಧ್ಯತೆ, ಇಂದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ, ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ, ಅದರಿಂದ ನೀವು ನಷ್ಟವನ್ನು ಭರಿಸಬೇಕಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಗಮನಿಸಿ:- ಇಂದು ಜನರೊಂದಿಗೆ ಉತ್ತಮ ವ್ಯವಹಾರ ನಡೆಸಿ ಹಾಗು ಸರಳ ಸುಖ ಜೀವನ ನಡೆಸಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,
*06,👩‍🦳ಕನ್ಯಾ ರಾಶಿ👩‍🦳*
📖,ಅಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲು ಸೂಕ್ತವಾದ ದಿನವಾಗಿದೆ. ನಿಮ್ಮ ಮನಸ್ಸಿನ ತಾಕಲಾಟಕ್ಕೆ ಅಧ್ಯಾತ್ಮದ ಓದು ಪರಿಹಾರ ಸೂಚಿಸಬಲ್ಲದು. ಆದಷ್ಟು ಮೌನವನ್ನು ಆಚರಿಸುವುದು ಒಳ್ಳೆಯದು. ಸಾಮಾಜಿಕ ಜೀವನವು ಇಂದು ಸುಖಮಯವಾಗಿರುವುದು ಜನರು ನಿಮ್ಮ ಇಂದು ನಿಮ್ಮ ಸೇವೆಯನ್ನು ಬಯಸುವರು, ಗಮನಿಸಿ:-ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇಂದು ಜಾಗರೂಕರಾಗಿರಬೇಕು,
ಪರಿಹಾರ:-ಶ್ರೀಸಾಯಿಬಾಬಾರ ದರ್ಶನ ಮಾಡಿ,
*07,⚖️ತುಲಾ ರಾಶಿ⚖️*
📖,ನಿಮ್ಮದೇ ಅದ ವಿಶೇಷ ಆಲೋಚನೆಗಳು ನಿಮಗೆ ಧನಲಾಭ ವಿಚಾರದಲ್ಲಿ ಬೆಂಬಲಿಸಬಲ್ಲವು. ನಿಮ್ಮ ಆತ್ಮೀಯ ಗೆಳೆಯರು ಇಲ್ಲವೆ ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು. ಹಣದ ವಿಷಯದಲ್ಲಿ, ನೀವು ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ,
ಗಮನಿಸಿ:- ಇಂದು ಸಂಗೀತ ಮತ್ತು ಚಿತ್ರಕಲೆಗಾರರಿಗೆ ವಿಶೇಷ ಅನುಕೂಲವಾಗಿದೆ ಮತ್ತು ಲಾಭದಾಯಕವಾಗಿದೆ,
ಪರಿಹಾರ:-ಶ್ರೀದುರ್ಗಾಸ್ತೋತ್ರವನ್ನು ಪಠಿಸಿ,
*08,🦂ವೃಶ್ಚಿಕ ರಾಶಿ🦂*
📖,ಮನೆಯಿಂದ ಹೊರಹೋಗುವಾಗ ನಿತ್ಯ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ನೀವು ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಂದು ಕಳೆದುಕೊಳ್ಳಬಹುದು. ಕುಟುಂಬದಲ್ಲಿ ನೀವು ಯಾವುದೇ ನಿರ್ಧಾರವನ್ನು ಶಾಂತವಾಗಿ ತೆಗೆದುಕೊಳ್ಳಬೇಕು. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣದಲ್ಲಿ ಎಚ್ಚರದಿಂದ ಇರಿ, ಗಮನಿಸಿ:-ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಿ,
ಪರಿಹಾರ:-ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ,
*09,🏹ಧನಸ್ಸು ರಾಶಿ🏹*
📖,ಏಕಾಂತಮಯವಾದ ಸ್ಥಳವನ್ನು ಬಯಸಿ ಹೋಗಲು ಪ್ರಯತ್ನಿಸುವಿರಿ. ಆದರೆ ಒಂಟಿತನವೂ ಬೇಸರವನ್ನುಂಟು ಮಾಡುವುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಇಲ್ಲವೆ ಬಂಧುಗಳ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ., ವ್ಯಾಪಾರ ಮಾಡುವ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ, ಗಮನಿಸಿ:-ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ,
ಪರಿಹಾರ:-ಶ್ರೀ ಹನುಮ ದೇವರ ಸ್ಮರಣೆ ಮಾಡಿ,
*10,🐊ಮಕರ ರಾಶಿ🐊*
📖,ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇರುವುದು. ಉದ್ಯೋಗದಲ್ಲಿ ಉನ್ನತಿಗೆ ಸಂಬಂದಿಸಿದ ಶುಭ ಸಮಾಚಾರವನ್ನು ಪಡೆಯುವಿರಿ, ನಿಮ್ಮ ಎಲ್ಲಾ ಕೆಲಸಗಳಿಂದ ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ,
ಗಮನಿಸಿ:-ನಿಮ್ಮ ಸ್ನೇಹಿತರೊಬ್ಬರು ಇಂದು ದೊಡ್ಡ ಮೊತ್ತದ ಧನ ಸಹಾಯವನ್ನು ಕೇಳಬಹುದು,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,
*11,⚱️ಕುಂಭ ರಾಶಿ⚱️*
📖,ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು. ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗುವುವು, ಇಂದು ನೀವು ವ್ಯಾಪಾರ ವ್ಯವಹಾರದಲ್ಲಿ ಕೆಲವು ಸವಾಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತೀರಿ,
ಗಮನಿಸಿ:-ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ,
ಪರಿಹಾರ:-ಶ್ರೀ ರಾಘವೇಂದ್ರ ಸ್ವಾಮಿಯನ್ನುಪ್ರಾರ್ಥಿಸಿ,
*12,🐋ಮೀನ ರಾಶಿ🐋*
📖,ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಪಡೆಯುವ ನಿಮ್ಮ ಕೆಲಸವೊಂದು ಈ ದಿನ ಕೈಗೂಡಲಿದೆ. ಸಕಾರಾತ್ಮಕವಾದ ಪ್ರಸಿದ್ಧಿಗೆ ದಾರಿ ಸುಗಮವಾಗಲಿದೆ. ಇದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತ ಅವಕಾಶ ಕೂಡಿಬರಬಹುದು. ವಿವಿಧ ಮೂಲಗಳಿಂದ ಹಣ ಬರುವುದು,
ಗಮನಿಸಿ:-ನಿಮಗಿಂತ ಹೆಚ್ಚಾಗಿ ಇತರರ ಕೆಲಸಗಳತ್ತ ಗಮನ ಹರಿಸುವುದರಿಂದ ನೀವು ತೊಂದರೆಗೆ ಈ ದಿನ ಸಿಲುಕಬಹುದು,
ಪರಿಹಾರ:-ನವಗ್ರಹ ಪ್ರದಕ್ಷಿಣೆ ಮಾಡಿ,

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading