
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕದಲಿ 74 ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಯಾಳನ್ ಧ್ವಜಾರೋಹಣ ನೆರವೇರಿಸಿದರು. ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಶೇಖರ ಉಪಸ್ಥಿತರಿದ್ದರು. ಹಾಗೂ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಮೇದಿನಡ್ಕ ಯುವಕರು ಹಾಗೂ ಮೇದಿನಡ್ಕ ಸಾರ್ವಜನಿಕರು ಉಪಸ್ಥಿತರಿದ್ದರು. ಸತೀಶ ಮೇದಿನಡ್ಕ ಹಾಗೂ ಯೋಗರಾಜ್ ಮೇದಿನಡ್ಕ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕರಿಗೆ ಸಿಹಿ ತಿಂಡಿ ನೀಡಿ ಆಚರಿಸಿದರು.