
ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ಇದರ ಸಮಿತಿ ಸದಸ್ಯರಾಗಿ, ಸಕ್ರೀಯ ಕಾರ್ಯಕರ್ತರಾಗಿ, ಉತ್ತಮ ಒಡನಾಟ ಹೊಂದಿ ನಮ್ಮನ್ನಗಲಿದ ಮಹಮೂದ್ ದೊಡ್ಡಡ್ಕ ಅವರಿಗೆ ಸಂತಾಪ ಸೂಚನೆ ಹಾಗೂ ಪ್ರಾರ್ಥನೆ ಅಲ್ ಅಮೀನ್ ವತಿಯಿಂದ ಸಮಿತಿಯ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬ್ ಮುಹಮ್ಮದಲೀ ಸಖಾಫಿ ನೇತೃತ್ವ ವಹಿಸಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಪಿ ಕೆ ಅನುಸ್ಮರಣಾ ಭಾಷಣ ಗೈದರು. ಮುಅಲ್ಲಿಂ ಹಬೀಬ್ ಹಿಮಮಿ, ಮೃತರ ಅಳಿಯ ಶಾಫಿ ಕಲ್ಲುಗುಂಡಿ, ಅಲ್ ಅಮೀನ್ ಉಪಾಧ್ಯಕ್ಷ ಸಿ ಎಂ ಅಬ್ದುಲ್ಲ, ಕಾರ್ಯದರ್ಶಿ ಜಿ ಎಂ ಅಬ್ದುಲ್ಲ ಗೂನಡ್ಕ, ಸದಸ್ಯರಾದ ಸೂಫಿ ದರ್ಖಾಸ್, ಇಜಾಝ್, ಎಸ್ ಎಸ್ ಎಫ್ ಉಪಾಧ್ಯಕ್ಷ ಹಾರಿಸ್ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಅಲ್ ಅಮೀನ್ ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ, ವಂದಿಸಿದರು.