
ಸುಳ್ಯ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು,ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಪ್ರಪ್ರಥಮ ಭಾರಿಗೆ 74ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಖ್ಯಾತ ನ್ಯಾಯವಾದಿ ಹಾಗೂ ಸಿಎ ಬ್ಯಾಂಕ್ ಇದರ ಅಧ್ಯಕ್ಷ ಹರೀಶ್ ಪನ್ನೆಬೀಡು ನೆರೆವೇರಿಸಿದರು. ಅತಿಥಿಗಳಾಗಿ ಧರ್ಮಸ್ಥಳ ಸ್ವಸಹಾಯ ಸಂಘದ ಕೇರ್ಪಳ ಒಕ್ಕೂಟ ಹಾಗೂ ಭಗವತಿ ಯುವ ಸೇವಾ ಸಂಘ ಬೂಡು ಇದರ ಅಧ್ಯಕ್ಷ ಉಪಸ್ಥಿತರಿದ್ದರು. ಅಲ್ಲದೆ ಪ್ರಕೃತಿ ಯುವ ಸೇವಾ ಸಂಘದ ಪಧಾದಿಕಾರಿಗಳು ಹಾಗೂ ಊರಿನ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.