Ad Widget

ಪೆರಾಜೆ ಮುಹಿಯ್ಯದ್ದೀನ್‌ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

. . . . .

74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮುಹಿಯ್ಯದ್ದೀನ್ ಜುಮಾ ಮಸೀದಿ ಪೆರಾಜೆಯ ವಠಾರದಲ್ಲಿ ಬೆಳ್ಳಿಗೆ 7 ಗಂಟೆಗೆ ನೆರವೇರಿಸಲಾಯಿತು.

ಪೆರಾಜೆ ಮಸೀದಿ ಅಧ್ಯಕ್ಷರು ಮತ್ತು ಖತೀಬ್ ಉಸ್ತಾದರು ಧ್ವಜಾರೋಹಣ ನೆರವೇರಿಸಿದರು.
ಖತೀಬ್ ಉಸ್ತಾದರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಮರವು1947 ಅಗಸ್ಟ್ 15ರಂದು ಫಲ ನೀಡಿತು. ದೇಶದ ಆಡಳಿತವು ಭಾರತೀಯರ ವಶವಾದಗ ದೀರ್ಘ 200 ವರ್ಷದ ಪರಕೀಯರ ವಂಚನಾತ್ಮಕ ಆಡಳಿತವು ಕೊನೆಗೊಂಡಿತು ಅದರೊಂದಿಗೆ ನಾವು ಸ್ವತಂತ್ರರಾದೆವು. ಶತಮಾನಗಳ ಕಾಲ ದೇಶಿಯರ ಸಾಮ್ರಾಜ್ಯಕ್ಕೆ ಅಂತ್ಯಹಾಡಿ 1947 ಅಗಸ್ಟ್ 14ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ನಮ್ಮ ರಾಷ್ಟ್ರ ನಾಯಕರ ಸ್ವಾತಂತ್ರ್ಯ ಹೋರಾಟಗಾರರ ಆಗ್ರಹದಂತೆ ನಮ್ಮ ದೇಶವು ಸರ್ವ ಧರ್ಮೀಯ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಯಿತ್ತು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಜಾತ್ಯಾತೀತ ದೇಶ ಭಾರತವಾಗಿದೆ. ಜನರಿಂದ ಜನರಿಗಾಗಿ ನಡೆಸಲ್ಪಡುವ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಆದರೇ ಸ್ವಾತಂತ್ರ್ಯ ಲಭಿಸಿದ ಮಾತ್ರಕ್ಕೆ ನಮ್ಮ ಉದ್ದೇಶ ನಮ್ಮ ಗುರಿ ಪೂರ್ಣಗೊಂಡಿಲ್ಲ ನೀತಿ ಸಹಬಾಳ್ವೆ ಸಹೋದರತೆ ಮಾನವೀಯತೆ ಮೊದಲಾದ ಗುಣಗಳು ಸ್ವಾತಂತ್ರ್ಯ ಸಮರ ಸೇನಾನಿಗಳ ಕನಸಾಗಿತ್ತು. ಈ ಗುರಿ ಮುಂದೆಯೂ ನಾವು ಸಾಧಿಸಬೇಕಾಗಿದೆ.ಭಾರತ ಯವುದೇ ಒಂದು ನಿರ್ದಿಷ್ಟ ಜನಾಂಗದ ದೇಶವಲ್ಲ. ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ.ಪ್ರತ್ಯೇಕವಾದ ಒಂದು ಧರ್ಮಕ್ಕೆ ಜನಾಂಗಕ್ಕೆ ಸೀಮಿತವಾಗದೆ ವಿವಿಧ ಧರ್ಮಗಳ ಜನಾಂಗದ ತೋಟವಾಗಿ ವಿವಿಧತೆಯಲ್ಲಿ ಏಕತೆ ಸಾರುವುದು ಅದರ ಮುಖಮುಧ್ರೆಯಾಗಿದೆ ಎಂದು ಹಲವು ವಿಷಯಗಳನ್ನು ಮೆಲುಕು ಹಾಕಿದರು.

ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡು ದುವಾದೊಂದಿಗೆ ಕೊನೆಗೊಳಿಸಲಾಯಿತ್ತು.

ಈ ಸಂಧರ್ಭದಲ್ಲಿ ಕಮಿಟಿ ಸಧಸ್ಯರು ಜಮಾಅತರು ಮತ್ತು ಮಕ್ಕಳು ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!