ಬಾಳಿಲ: ಯಕ್ಷಧ್ರುವ ಯಕ್ಷ-ಶಿಕ್ಷಣ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿಯ ಸಭಾಂಗಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ)ಮಂಗಳೂರು ಇವರ ವತಿಯಿಂದ ನಡೆಸಲ್ಪಡುವ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಬಾಳಿಲ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎನ್ ವೆಂಕಟರಮಣ ಭಟ್ ದೀಪ ಬೆಳಗಿಸಿ ತರಗತಿಯನ್ನು ಉದ್ಘಾಟಿಸಿ,ಯಕ್ಷ ಶಿಕ್ಷಣದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣರಾವ್ ಯು ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಾ ಕೀರ್ತಿ ಶೇಷ ಯಕ್ಷಗಾನ ಭಾಗವತರಾದ ಪದ್ಯಾಣ ಗಣಪತಿ ಭಟ್, ಹಿರಿಯ ಹಿಮ್ಮೇಳವಾದಕ ಪದ್ಯಾಣ ಜಯರಾಮ ಭಟ್, ಭಾಗವತರಾದ ಪ್ರಶಾಂತ ರೈ ಹಾಗೂ ಇನ್ನು ಹಲವು ಯಕ್ಷಗಾನ ಕಲಾವಿದರು ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳೆಂಬುದು ಹೆಮ್ಮೆಯ ವಿಷಯ, ಯಕ್ಷಗಾನವನ್ನು ಶಾಲೆಯಲ್ಲಿ ಪ್ರೋತ್ಸಾಹಿಸಲು ಎಲ್ಲಾ ಸಹಕಾರವಿದೆ ಎಂದರು.
ಯಕ್ಷದ್ರುವ ಪಟ್ಲ ಫೌಂಡೇಶನ್ ನ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕರಾದ ಶ್ರೀ ವಾಸು ಐತಾಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಬಾಳಿಲದಂತಹ ಶಾಲೆಯಲ್ಲಿ ಯಕ್ಷಶಿಕ್ಷಣ ದೊರಕುವಂತಾದದ್ದು, ಅರ್ಥಪೂರ್ಣವಾಗಿದೆ ಎಂದರು.
ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುಳ್ಯ ಘಟಕದ ಗೌರವಾಧ್ಯಕ್ಷರಾದ ಶ್ರೀ ದಯಾಕರ ಆಳ್ವ ಇವರು ಯಕ್ಷ ಶಿಕ್ಷಣ ಪುಸ್ತಕವನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಸಂಚಾಲಕರಾದ ಶ್ರೀ ಪ್ರಶಾಂತ್ ರೈ ಮುಂಡಾಳಗುತ್ತು ಶುಭ ಹಾರೈಸುತ್ತಾ ನಾನು ಕಲಿತ ಶಾಲೆಯಲ್ಲಿ ಯಕ್ಷ ಶಿಕ್ಷಣ ಆರಂಭವಾದದ್ದು ಸಂತಸ ತಂದಿದೆ ಎಂದು ಅಭಿಪ್ರಾಯ ಪಟ್ಟರು. ಶಾಲಾ ಸಂಚಾಲಕರಾದ ಶ್ರೀ ಪಿ. ಜಿ. ಎಸ್. ಎನ್. ಪ್ರಸಾದ್ ಶುಭ ಹಾರೈಸಿ ಮಾತನಾಡುತ್ತಾ, ಮಕ್ಕಳು ಯಕ್ಷ ಶಿಕ್ಷಣದ ಉಪಯೋಗವನ್ನು ಪಡೆಯುವಂತಾಗಲಿ ಎಂದರು. ಯಕ್ಷ ಶಿಕ್ಷಣ ತರಬೇತಿಯ ಗುರುಗಳಾದ ಯಕ್ಷದ್ಯುಮಣಿ ಗಿರೀಶ್ ಗಡಿಕಲ್ಲು ಮಾತನಾಡಿ ತರಬೇತಿಯಲ್ಲಿ ನಿಷ್ಠೆಯಿಂದ ಭಾಗವಹಿಸಿ ಉತ್ತಮ ವಿದ್ಯಾರ್ಥಿಗಳಾದಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದರು. ಮುಖ್ಯಶಿಕ್ಷಕರಾದ ಶ್ರೀ ಉದಯಕುಮಾರ್ ರೈ ಎಸ್ ಸ್ವಾಗತಿಸಿದರು. ಪ್ರೌಢಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀಮತೀ ಹರಿಣಾಕ್ಷಿ ಬಿ ಮತ್ತು ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀ ಸೀತಾರಾಮ ಕೆ ಸಹಕರಿಸಿದರು. ಕಂಪ್ಯೂಟರ್ ಶಿಕ್ಷಕರಾದ ಶ್ರೀ ಅರವಿಂದ ಕಾಯಾರ ಧನ್ಯವಾದವಿತ್ತರು. ಸಂಸ್ಕೃತ ಶಿಕ್ಷಕ ಶ್ರೀ ವೆಂಕಟೇಶ್ ಕುಮಾರ್ ಯು ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪೋಷಕ ವೃಂದ, ವಿದ್ಯಾರ್ಥಿವೃಂದ ಭಾಗವಹಿಸಿದರು.

. . . . . . . . .

ಸಮಾರಂಭದ ಬಳಿಕ ಗುರುಗಳಾದ ಗಿರೀಶ್ ಗಡಿಕಲ್ಲು ಮೊದಲ ದಿನದ ಪಾಠವನ್ನು ಸಾಂಕೇತಿಕವಾಗಿ ನೆರವೇರಿಸಿಕೊಟ್ಟರು. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading