ಬಾಳಿಲ: ಸಂಸ್ಥಾಪಕರ ಸ್ಮೃತಿ ದಿನಾಚರಣೆ

ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಸ್ಥಾಪಕರಾದ ಸ್ವರ್ಗೀಯ ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಶ್ರೀ ನಾರಾಯಣ ಭಟ್ ಕೆ ಇವರು ಭಾಗವಹಿಸಿ ವೆಂಕಟಸುಬ್ಬರಾವ್ ಇವರ ಗುಣಗಾನವನ್ನು ಮಾಡಿದರು, ಅಲ್ಲದೆ ಶ್ರೀಯುತರ ಜೊತೆಗಿನ ಬಾಂಧವ್ಯವನ್ನು ನೆನಪಿಸಿದರು. ಶಾಲೆಯನ್ನು ಸ್ಥಾಪಿಸಿ ಬೆಳೆಸುವಲ್ಲಿ ಅವರು ತೊಡಗಿಕೊಂಡ ರೀತಿಯನ್ನು ತಿಳಿಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣರಾವ್ ಯು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಪೂಜ್ಯರ ಸಂಸ್ಮರಣೆಯನ್ನು ಮಾಡಿದರು. ಅಲ್ಲದೆ ಅವರ ಆಶೋತ್ತರಗಳನ್ನು ನಡೆಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು. ಶಾಲಾ ಸಂಚಾಲಕರಾದ ಶ್ರೀ ಪಿ. ಜಿ. ಎಸ್. ಎನ್. ಪ್ರಸಾದ್ ಇವರು ವೆಂಕಟಸುಬ್ಬರಾವ್ ಅವರ ಕೊಡುಗೆಯನ್ನು ಸ್ಮರಿಸಿದರು, ಬಾಳಿಲ ಪರಿಸರಕ್ಕೆ ಶಾಲಾ ಸಂಸ್ಥಾಪಕರಾಗಿ ಪಂಚಾಯತ್ ಅಧ್ಯಕ್ಷರಾಗಿ, ಸಮಾಜ ಸೇವೆಯಲ್ಲಿ ತೊಡಗಿಕೊಂಡ ದಿನಗಳನ್ನು ಸ್ಮರಿಸಿದರು. ವಿದ್ಯಾರ್ಥಿನಿಯರು ಪೂಜ್ಯರ ಕುರಿತಾದ ಹಾಡುಗಳನ್ನು ಹಾಡಿದರು. ಸಂಸ್ಥೆಯ ಮುಖ್ಯಗುರು ಉದಯಕುಮಾರ್ ರೈ ಎಸ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ತೇಜಸ್ ಮತ್ತು ಉದಿತ್ ನಿರೂಪಿಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷರಾದ ಎನ್ ವೆಂಕಟರಮಣ ಭಟ್,ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಜೊತೆ ಕಾರ್ಯದರ್ಶಿಗಳಾದ ಭಾರತೀಶಂಕರ ಅದಾಳ, ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹರಿಣಾಕ್ಷಿ ಬಿ ಮತ್ತು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಕೆ, ಸದಸ್ಯರು, ಪೋಷಕರು ಹಾಗೂ ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading