ತಮ್ಮ ಜಾಗದಿಂದ ಸಾರ್ವಜನಿಕ ರಸ್ತೆ ನಿರ್ಮಾಣಕ್ಕಾಗಿ ಸ್ಥಳವನ್ನು ನೀಡಿ ಮಾನವೀಯತೆ ಮೆರೆದ ಘಟನೆ ಕಳೆದ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿದೆ.
ಇಂದು ಸುಳ್ಯ ತಹಸಿಲ್ದಾರ್ ಅನಂತ ಶಂಕರ್ ರವರು ರಸ್ತೆ ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳೀಯ ನಿವಾಸಿಗಳ ಹೃದಯ ವೈಶಾಲ್ಯತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಮಾಜದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಜೀವಿಸಲು ಇಂತಹ ಘಟನೆಗಳು ಸಾಕ್ಷಿಯಾಗುತ್ತದೆ. ಹಲವಾರು ಈ ರೀತಿಯ ಸಮಸ್ಯೆಗಳು ಕೇವಲ ಮಾತುಕತೆಗಳಿಂದ ಸರಿಪಡಿಸಲು ಸಾಧ್ಯ. ಅದನ್ನು ಇಲ್ಲಿಯ ನಿವಾಸಿಗಳು ಮಾಡಿ ತೋರಿಸಿದ್ದಾರೆ ಎಂದು ಹೇಳಿದರು. ಇಲ್ಲಿ ಸ್ಥಳೀಯ ನಿವೃತ್ತ ಶಿಕ್ಷಕಿಯೊಬ್ಬರ ಸಹಕಾರ ಬೇಕಾಗಿದ್ದು ಆದಷ್ಟು ಬೇಗನೆ ಅವರಲ್ಲಿ ಮಾತನಾಡಿ ರಸ್ತೆ ಇನ್ನೂ ಸ್ವಲ್ಪ ವಿಶಾಲ ಗೊಳ್ಳುವಂತೆ ಪ್ರಯತ್ನ ಪಡಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟು ಮಾನವೀಯತೆ ಮೆರೆದ ಬಾಲಶೇಖರ, ಅಬ್ದುಲ್ ರಹಿಮಾನ್, ಫಲಾನುಭವಿ ಜೋಸಫ್ , ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.ರಸ್ತೆ ನಿರ್ಮಾಣ ಕಾರ್ಯಕ್ಕೆ ಮಾತುಕತೆ ನಡೆಸಿ ಸಹಕರಿಸಿದ ಆರ್ ಬಿ ಬಶೀರ್ ಪೈಚ್ಚಾರ್, ಪ್ರಭಾಕರ್ ಸೋಣಂಗೇರಿ, ಜಾರ್ಜ್ ಕಣಚಿಲ್, ರವರು ಇಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
- Saturday
- November 23rd, 2024