ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಮಕ್ಕಳೇ ಶಾಲಾ ಅಂಗಳದಲ್ಲಿ ಬೆಳೆಸಿದ ಭತ್ತ ನಾಟಿ ಕೊಯ್ಲು ಮಾಡಿ ತುಳು ನಾಡಿನ ಸಂಸ್ಕೃತಿಯಲ್ಲಿ ಬಾಳೆಎಲೆಯಲ್ಲಿ 10 ಬಗೆಯ ಪದಾರ್ಥಗಳ ಜೊತೆ ಹೊಸ ಅಕ್ಕಿ ಉಂಡು ಸಂತಸಪಟ್ಟರು. ಶಾಲೆಯ ಬಾಗಿಲುಗಳಿಗೆ ಬೆಳಗ್ಗೆ ಮಾವಿನ ಎಲೆ ಕಟ್ಟಿ ನಂತರ ಮಧ್ಯಾಹ್ನ ಪೋಷಕರ ಜೊತೆಯಲ್ಲಿ ಪುದ್ವಾರ್ ಊಟ ಮಾಡಿ ನಮ್ಮ ಸಂಸ್ಕೃತಿ ತಿಳಿದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಪೋಷಕ ವೃಂದ, ಎಸ್ಡಿಎಂಸಿ ಸದಸ್ಯರು ಭೋಜನ ತಯಾರಿಯಲ್ಲಿ ಸಹಕರಿಸಿದರು. ಶಾಲಾ ಆಡಳಿತ ಮಂಡಳಿ ಶುಭ ಹಾರೈಕೆ ಮಾಡಿದರು. ಮಕ್ಕಳು ಪೋಷಕರ ಶಿಕ್ಷಕರ ಜೊತೆ ಸಂತಸಪಟ್ಟರು.
- Wednesday
- December 4th, 2024